;

ಅಗಸನೂರು ಗ್ರಾಮದಲ್ಲಿ ಮೊಹರಂ ಹಬ್ಬ ವಿಶಿಷ್ಟ ಪದ್ಧತಿಯಲ್ಲಿ ಆಚರಣೆ…!!!

ಅಗಸನೂರು ಗ್ರಾಮದಲ್ಲಿ ಮೊಹರಂ ಹಬ್ಬ ವಿಶಿಷ್ಟ ಪದ್ಧತಿಯಲ್ಲಿ ಆಚರಣೆ.
ವರದಿ.ವೀರೇಶ್ ಹಳೇಕೋಟೆ
ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದಲ್ಲಿ ಮೊಹರಂ ಹಬ್ಬವನ್ನು ವಿಶಿಷ್ಟವಾಗಿ ಹಿಂದೂ ಮುಸ್ಲಿಂಮರು ಸೇರಿ ಭಕ್ತಿ ಪೂರ್ವಕವಾಗಿ ಅತ್ಯಂತ ಸಂಭ್ರಮದಿಂದ ಆಚರಿಸುವ ಪದ್ಧತಿ ಪೂರ್ವ ಕಾಲದಿಂದಲು ನಡೆದುಕೊಂಡು ಬಂದಿದೆ ಎರಡು ಧರ್ಮಗಳ ನಡುವೆ ಸಾಮರಸ್ಯ ಸಾರುವ ಮೊಹರಂ ಹಬ್ಬವು ಹತ್ತಿರ ಬರುತ್ತಿದಂತೆ ಹಲಾಯಿ ಕುಣಿಗೆ ಗುದ್ದಲಿ ಹಾಕಿದ ದಿನದಿಂದ ಪೀರಲು ದೇವರು ವಿಸರ್ಜನೆವರೆಗೆ ಕಟ್ಟುನಿಟ್ಟಿನ ಮಡಿವಂತಿಕೆ ನಿಯಮ ಪಾಲಿಸುತ್ತಾರೆ.ಈ ಗ್ರಾಮದ ಎಲ್ಲಾ ಜಾತಿ ಜನಾಂಗದವರು ಮದ್ಯ ಮಾಂಸ ತ್ಯಜಿಸುತ್ತಾರೆ ಮತ್ತು ಮಹಿಳೆಯರು ತಲೆಗೆ ಹೂ ಮುಡಿಯುವುದಿಲ್ಲ ಪ್ರತಿಯೊಬ್ಬರೂ ಪಾದರಕ್ಷೆ ಧರಿಸುವುದಿಲ್ಲ ಮನೆ ಬಾಗಿಲು ಮುಚ್ಚುವುದಿಲ್ಲ ಮಂಚದ ಮೇಲೆ ಮಲಗುವುದಿಲ್ಲ ಈ ಗ್ರಾಮಕ್ಕೆ ಹಬ್ಬದ ಸಮಯದಲ್ಲಿ ಯಾರೇ ಬಂದರು ಕಡ್ಡಾಯವಾಗಿ ಮಡಿವಂತಿಕೆ ಮಾಡಬೇಕು.ಪೀರಲು ದೇವರಿಗೆ ಹರಕೆ ಹೊತ್ತ ಭಕ್ತರು ಬೆಳ್ಳಿಯ ಕುದುರೆ ಖಡ್ಗ ಕೆಂಪು ಸಕ್ಕರೆ ಜೋಳದ ಅನ್ನದ ಕಿಚೀಡಿ ಬೆಲ್ಲದ ಪಾನಕ ತೆಂಗಿನಕಾಯಿ ಲಾಡಿ ಮುಂತಾದವು ಸಮರ್ಪಣೆ ಮಾಡುವ ಮೂಲಕ ಹರಕೆ ತೀರಿಸುತ್ತಾರೆ.ಮೊಹರಂ ಕೊನೆಯ ದಿನ ಗ್ರಾಮದ ಎಲ್ಲಾರೂ ಸೇರಿಕೊಂಡು ಪೀರಲು ದೇವರು ಮೆರವಣಿಗೆ ಮೂಲಕ ಜಾನಪದ ಹಾಡುಗಳಿಗೆ ಹೆಜ್ಜೆ ಹಾಕುವುದು ಬಣ್ಣ ಬಣ್ಣದ ಬಾವುಟಗಳನ್ನು ಹಿಡಿದು ಹಲಿಗೆ ಸದ್ದಿಗೆ ಕುಣಿಯುದು ಊರಿನ ಯುವಕರು ಫಕೀರ ಮತ್ತು ಹುಲಿವೇಷ.ಹಚ್ಚೋಳಿ ಬಿಚ್ಚಳಿ ವೇಷ ಧರಿಸಿ ಅತ್ಯಂತ ಸಂಭ್ರಮದಿಂದ ಹಿಂದೂ ಮುಸ್ಲಿಂ ಎನ್ನುವ ಭೇದ ಭಾವ ಮರೆತು ಹಬ್ಬವನ್ನು ಆಚರಿಸುತ್ತಾರೆ…

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;