;

ಜಗಳೂರು:-ಹುಚ್ಚರ ಮದುವೆಯಲಿ ಉಂಡವರೆ ಜಾಣ ಎನ್ನುವಂತಾಗಿದೆ ಹಿರೇಮಲ್ಲನಹೊಳೆ ಗ್ರಾಮಪಂಚಾಯಿತಿಯ ಆಡಳಿತ ವ್ಯವಸ್ಥೆ…!!!

ಜಗಳೂರು: ಹುಚ್ಚರ ಮದುವೆಯಲಿ ಉಂಡವರೆ ಜಾಣ ಎನ್ನುವಂತೆ ಪಂಚಾಯಿತಿಗೆ ಬಂದ ಆದಾಯವನ್ನ ಸಾರ್ವಜನಿಕ ಸೇವೆಗೆ ಹಾಗು ಅಬಿವೃದ್ದಿ ಕಾರ್ಯಗಳಿಗೆ ಬಳಸಿಕೊಳ್ಳುವ ಬದಲು ಅಬಿವೃದ್ದಿ ಅದಿಕಾರಿಗಳು ಹಾಗು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ನೇರವಾಗಿ ಜೇಬಿಗೆ ಇಳಿಸಿಕೊಂಡು ಬಳಸಿಕೊಳ್ಳುವ ಮೂಲಕ ಪಂಚಾಯಿತಿ ಆದಾಯದ ಮೂಲಕ್ಕೆ ಎಳ್ಳು ನೀರು ಬಿಟ್ಟಂತಾಗಿದ್ದು ಬೇಲಿಯೇ ಎದ್ದು ಹೊಲ ಮೇಯ್ದರೆ ಕಾವಲುಗಾರರು ಯಾರೆಂಬುದೇ ತಿಳಿಯದಾಗಿದೆ . ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಎ.ಗ್ರೇಡ್ ಗ್ರಾಮ ಪಂಚಾಯಿತಿ ಅನುದಾನಕ್ಕೆ ಒಳಪಡುತ್ತಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೂಲಕ ಸಾಕಷ್ಟು ಅನುದಾನ ಬರುತ್ತಿದ್ದು ಯಾವ ಹಣವೂ ಸಹ ನಿರೀಕ್ಷಿತ ಮಟ್ಟಕ್ಕೆ ಬಳಕೆಯಾಗುತ್ತಿಲ್ಲ ಅದರ ಜೊತಗೆ ಖಾಸಗೀ ವಲಯಗಳಿಂದ ಆದಾಯ ಬರುತ್ತಿದ್ದು ಸಾರ್ವಜನಿಕರಿಗೆ ತಿಳಿಯದಂತೆ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಬಳಸಿಕೊಂಡಿರುವುದು ಆಶ್ಚರ್ಯ ಮೂಡಿಸಿದೆ . ಇತ್ತೀಚಿಗೆ ಅಷ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಿರೇಮಲ್ಲನಹೊಳೆ. ಗೊಲ್ಲರಹಟ್ಟಿ.ಹುಚ್ಚವನಹಳ್ಳಿ.ಚಿಕ್ಕಮಲ್ಲನಹೊಳೆ. ಕಮಂಡಲಗೊಂದಿ.ಸಾಲೇಹಳ್ಳಿ.ತಾಯಿಟೋಣಿ.ಮುಂತಾದ ಕಡೆ ಖಾಸಗೀ ಕಂಪನಿಗಳಿಂದ ಸೋಲಾರ್ ಪ್ಲಾಂಟ್.ಹಾಗು ವಿಂಡ್ ಪ್ಯಾನ್ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿ ವತಿಯಿಂದ ಅನುಮತಿ ಪತ್ರಪಡಿಯಲು ಖಾಸಗೀ ಕಂಪನಿಗಳಿಂದ ಸುಮಾರು 6 ಲಕ್ಷ ಹಣ ವಂತಿಗೆ ಪಡಿಯಲಾಗಿದೆ ಇದಲ್ಲದೆ ಗೊಲ್ಲರಹಟ್ಟಿ ಸಮೀಪದಲ್ಲಿ ನಿರ್ಮಾಣ ವಾಗಿರು ಕೆಪಿಟಿಸಿಎಲ್.ಕಂಪನಿಯಿಂದ ವಿದ್ಯುತ್‌ ಪರಿವರ್ತಕ ಘಟಕಗಳಿಂದ ಬರಬೇಕಾದ ನೆಲ ಕಂದಾಯ ವಾರ್ಷಿಕ 80 ಸಾವಿದಷ್ಟು ಆದಾಯ ಬರುತ್ತಿದೆ ಆದರೆ ಇದು ಯಾವುದು ಸಹ ಗ್ರಾಮ ಪಂಚಾಯತಿ ಖಾತೆಗೆ ಜಮಾ ಆಗದೆ ನೇರವಾಗಿ ಅಧಿಕಾರಿಗಳು ಹಾಗು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಬಳಸಿಕೊಂಡಿರುವ ಆರೋಪ ಸಾರ್ವಜನಿಕ ವಲಯಿಂದ ಕೇಳಿಬಂದಿದೆ . 18 ಗ್ರಾಮ ಪಂಚಾಯಿತಿ ಸದಸ್ಯರು ತಲಾ 20 ಸಾವಿರ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷ ತಲಾ 50 ಸಾವಿರ ನಗದು ಹಣ ಪಡೆದಿದ್ದು ಇನ್ನು ಅಬಿವೃದ್ದಿ ಅದಿಕಾರಿ ಉಳಿದ ಹಣ ಲೂಟಿ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು ಸೂಕ್ತ ತನಿಖೆ ನೆಡೆದರೆ ಮಾತ್ರ ಈ ಪ್ರಕರಣ ಹೊರ ಬರಲಿದೆ ಗ್ರಾಮ ಪಂಚಾಯಿತಿ ಖಾತೆಗೆ ತೆರಿಗೆ ರೂಪದಲ್ಲಿ ಆದಾಯವಾಗಿ ಬರಬೇಕಿದ್ದ ತೆರಿಗೆ ಹಣ ದುರುಪಯೋಗ ವಾಗಿರುವ ಕುರಿತು ಸಾಮಾಜಿಕ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ದರಿಸಿದ್ದು ದುರುಪಯೋಗವಾದ ಹಣ ಮತ್ತೆ ವಾಪಾಸು ಪಂಚಾಯತಿ ಖಾತೆಗೆ ಜಮೆ ಮಾಡಬೇಕು ಹಾಗು ತಪ್ಪಿತಸ್ಥ ಅಧಿಕಾರಿಗಳು ಜನಪ್ರತಿ ನಿಧಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ …

ವರದಿ.ಸಂದೀಪ್, ಎಚ್, ಸಿ, ಎಂ, ಹೊಳೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;