;

ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ ಆಚರಣೆಯಲ್ಲಿ ಪಾಲ್ಗೊಂಡ ಎಂ,ಪಿ,ವೀಣಾ ಮಹಾಂತೇಶ್!!

ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ ಆಚರಣೆಯಲ್ಲಿ ಪಾಲ್ಗೊಂಡ ಎಂ,ಪಿ,ವೀಣಾ ಮಹಾಂತೇಶ್!!

ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ,ಪಿ,ವೀಣಾ ಮಹಾಂತೇಶ್ ಅವರು ಇಂದು ಹರಪನಹಳ್ಳಿ ಕ್ಷೇತ್ರದ ಮತ್ತಿಹಳ್ಳಿ ಹಾಗೂ ಸಾಸ್ವಿಹಳ್ಳಿ ಗ್ರಾಮಕ್ಕೆ ಭೇಟಿನೀಡಿ ಹಿಂದೂ, ಮುಸಲ್ಮಾನರು ಒಟ್ಟೊಟ್ಟಿಗೆ ಆಚರಿಸುವ ಭಾವೈಕ್ಯತೆಗೆ ಪ್ರತೀಕವಾದ  ಮೊಹರಂ ಹಬ್ಬದಲ್ಲಿ  ಪಾಲ್ಗೊಂಡು ತಾವೂ ಕೈಗೊಳ್ಳುವ ಕಾರ್ಯಕ್ರಮಗಳ ಜೊತೆ ಧಾರ್ಮಿಕ ಕಾರ್ಯವೂ ಒಂದು ಎನ್ನುವುದನ್ನು ತೋರಿಸಿಕೊಟ್ಟರು.

ಕ್ಷೇತ್ರದಲ್ಲಿ ನಡೆಯುವ ಯಾವುದೇ ಕಾರ್ಯವಿರಲಿ ಬಿಟ್ಟು ಬಿಡದೇ ಭಾಗವಹಿಸಿ ಎಲ್ಲರೊಂದಿಗೂ ಸೌಹಾರ್ದತೆಯಿಂದ ಬೆರೆಯುವ ಮನೋಭಾವ ತಮ್ಮದು ಎಂದು ಸಾಬೀತು ಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗುವ ನಾಯಕಿ ಎಂ,ಪಿ,ವೀಣಾ ಮಹಾಂತೇಶ್.
ಈ ಸಂದರ್ಭದಲ್ಲಿ ಸಾಸ್ವೇಹಳ್ಳಿಯ ಹಿರಿಯ ಕಾಂಗ್ರೇಸ್ ಪಕ್ಷದ ಮುಖಂಡರು ಆದಂತಹ ಶ್ರೀ ಕೆ. ಮಲ್ಲಪ್ಪ ಹಾಗೂ ಗ್ರಾಮಪಂಚಾಯತಿ ಯ ಸದಸ್ಯರು ಆದಂತಹ ಮಾದಿಹಳ್ಳಿ ಶ್ರೀ ಕೆಂಚಪ್ಪ, ಕಾಂಗ್ರೇಸ್ ಪಕ್ಷದ ಮುಖಂಡರಾದ
ಶ್ರೀ ವಾಮದೇವಪ್ಪ, ಶ್ರೀ ಬಸವನಗೌಡ್ರು, ಗಂಗಜ್ಜಿ ನಾಗರಾಜ್, ಗೋಪಿ, ರಾಜಪ್ಪ, ಗ್ರಾಮಪಂಚಾಯತಿಯ ಸದಸ್ಯರು ಆದ ಶ್ರೀಮತಿ ರತ್ನಮ್ಮ ಶ್ರೀ ಪಠಾಣರ ಶಿವಣ್ಣ, ಶ್ರೀ ನಾಗರಾಜ್, ಶ್ರೀ ಶಂಕರಗೌಡ ಮತ್ತಿಹಳ್ಳಿ ಶ್ರೀ ಕೊಟ್ರೇಶಪ್ಪ ಶ್ರೀ ಬೆಟ್ಟಪ್ಪ ಶ್ರೀ ಯೋಗೇಶ್ಗೌಡ ಶ್ರೀ ಕರೀಂಸಾಬ್ ಮತ್ತು ಅನೇಕ ಗ್ರಾಮಸ್ಥರು ಮುಂತಾದವರು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;