ರೋಗ ರೂಜಿನುಗಳು ಬಂದಾಗ ಆಸ್ಪತ್ರೆಗೆ ಹೋಗುತ್ತೇವೆ. ಗುಣಮುಖರಾದ ಮೇಲೆ…?!!!’.
ಕೆಳವರ್ಗದವರೆಂದು ಹಣೆ ಪಟ್ಟ ಕಟ್ಟಿಕೊಂಡ ನಾವು.., ನಮಗೂ ನಮ್ಮ ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ರೋಗರುಜಿನುಗಳು ಬಂದಾಗ ಸೀದಾ ಆಸ್ಪತ್ರೆಗೆ ಹೋಗುತ್ತೇವೆ.ಆಸ್ಪತ್ರೆಯಲ್ಲಿ ವೈದ್ಯರು ತಾವೂ ನಾಲ್ಕಾರು ವರ್ಷ ಕಲಿತ ವಿದ್ಯೆಯಿಂದ ನಮ್ಮನ್ನು, ನಮ್ಮ ಮನೆಯಲ್ಲಿರುವ ಸಾಕು ಪ್ರಾಣಿಗಳನ್ನು ರೋಗ ಮುಕ್ತರಾಗಿ ಮಾಡುತ್ತಾರೆ. ಮನೆಗೆ ಬಂದ ಕೂಡಲೇ, ಯಾರೋ ಒಬ್ಬರೂ ನಮ್ಮನ್ನು “ನಿಮ್ಮ ಕೇರಿಯ, ಊರಿನ ದೇವರ ದಯೆಯಿಂದ ನಿನ್ನ, ನಿಮ್ಮ ಮನೆಯ ಪ್ರಾಣಿಯ ಅರೋಗ್ಯ ಮೊದಲಿನಂತಾಗಿದೆ. ಹೋಗು ಮೊದಲು ಆ ದೇವರಿಗೆ ಹರಕೆ ಮಾಡಿಕೋ, ಕೋಳಿ, ಕುರಿ, ಕೋಣಗಳನ್ನು ನಿನಗೆ ಬಲಿ ಕೊಡುತ್ತೇನೆ ಎಂದು ಬೇಡಿಕೋ, ಸಾಲ ಮಾಡಿಯಾದರೂ ದೇವರಿಗೆ ಖುಷಿ ಪಡಿಸು”*. ಎಂದು ಹೇಳುತ್ತಾರೆ. ಈಗ ನಾವು ಕ್ಷಣಾರ್ಧದಲ್ಲಿ, “ಆಸ್ಪತ್ರೆಗೆ ಹೋಗಿ ವೈದ್ಯರ ಶ್ರಮದಿಂದ ನಾವು ಅರೋಗ್ಯವಾಗಿದ್ದೇವೆ ಎಂಬುದನ್ನು ಮರೆತು ಬಿಡುತ್ತೇವೆ”. ಕೂಡಲೇ ಊರ ಶ್ರೀಮಂತ ವ್ಯೆಕ್ತಿಗಳ ಬಳಿ ಹೋಗಿ ಸಾಲ ಮಾಡಿ ಹಣ ತಂದು ಕೋಳಿ, ಕುರಿ, ಕೋಣ ಕಡಿದು ತಿಂದು ಸಂಭ್ರಮ ಪಡುತ್ತೇವೆ. ಆದರೆ ಒಮ್ಮೊಮ್ಮೆ ಈ ಒತ್ತಡದಲ್ಲಿ ಮತ್ತೇ ಆ ಕಾಯಿಲೆ ಮರು ಕಳಿಸಿ ಒಮ್ಮೊಮ್ಮೆ ಸತ್ತೇ ಹೋಗುತ್ತೇವೆ. ಆವಾಗ ಮತ್ತ್ಯಾರೋ ಒಬ್ಬರು “ದೇವರಿಗೆ ಸರಿಯಾಗಿ ಹರಿಕೆ ತೀರಿಸಲಿಲ್ಲ. ಹಾಗಾಗಿ ಸತ್ತು ಹೋದ. ದೇವರು ಧರ್ಮ ಪಾಲಿಸದಿದ್ದರೆ ಹೀಗೆ ಆಗುತ್ತದೆ”. ಎಂದು ಹೇಳಿ ತಮ್ಮನ್ನು ತಾವೂ ಸಮರ್ಥನೆ ಮಾಡಿಕೊಳ್ಳುತ್ತಾರೆ. “ಈಗ ಸಾಲ ಸೋಲ ಮಾಡಿ ನಾವು ಸತ್ತು ಹೋಗುತ್ತೇವೆ ಆದರೆ ನಮ್ಮ ಹೆಂಡತಿ ಮಕ್ಕಳಿಗೆ ಅದರ ಹೊರೆಯನ್ನು ಹೊರಿಸಿರುತ್ತೇವೆ. ಅದನ್ನು ತೀರಿಸಲು ಅವರು ಜೀವನ ಪೂರ್ತಿ ಮತ್ತೇ ಶ್ರೀಮಂತನ ಹೊಲದಲ್ಲಿ ಆಳಾಗಿ ದುಡಿಯಬೇಕು”. ಸತ್ಯ ಏನೆಂದರೆ ಯಾವುದೇ ದೇವರು ತನಗೆ ಸಾಲ ಸೋಲ ಮಾಡಿ ಹರಕೆ ತೀರಿಸಲೇಬೇಕು ಎಂದು ಯಾವತ್ತೂ ಹೇಳಿರುವುದಿಲ್ಲ. ನಮ್ಮ ಭಯ, ಮೂಢನಂಬಿಕೆ, ಅಜ್ಞಾನ ನಮ್ಮನ್ನು ಹೀಗೆ ಮಾಡಿಸುತ್ತದೆ. ಈ ಸತ್ಯವನ್ನು ಅರಿತುಕೊಳ್ಳಬೇಕು ಅಷ್ಟೇ. ನಿಜವಾಗಲೂ ನಮ್ಮ ಏಳಿಗೆ ಬಯಸಿದವರೆಂದರೆ ಬುದ್ಧ ಬಸವಣ್ಣ ಅಂಬೇಡ್ಕರ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದುಕೊಳ್ಳೋಣ. ಪ್ರಗತಿ ಕಂಡುಕೊಳ್ಳೋಣ. ಸ್ವಾಭಿಮಾನದಿಂದ ಬದುಕೋಣ.

ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲ್ಲೂಕು ಛಲವಾದಿ ಮಹಾಸಭಾ ಘಟಕದ ಪ್ರದಾನ ಕಾರ್ಯದರ್ಶಿಗಳು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
