;

ಮೊಳಕಾಲ್ಮುರು: ಮನೆ ಮನೆಗೆ ಜಗದ್ಗುರು ಶ್ರೀ ಬಸವ ಮಾಚಿದೇವ ಕಾರ್ಯಕ್ರಮ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಇಂದು (ಅಗಸ್ಟ್-17) ಸುಂಕಪ್ಪನ ಪಾದಗಟ್ಟೆ ಯಿಂದ ಪ್ರಾರಂಭಗೊಂಡಿತ್ತು. ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮನೆ ಮನೆಗೆ ಮಾಚಿದೇವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ದೇಶ ಮೊಳಕಾಲ್ಮೂರು ತಾಲ್ಲೂಕಿನ ಕರಡಿಹಳ್ಳಿ, ಪ್ರಕೃತಿ, ನಾಗಸಮುದ್ರ, ಗ್ರಾಮಗಳಲ್ಲಿ ಶನಿವಾರ, ಭಾನುವಾರ, ಸೋಮವಾರ ಹಳ್ಳಿಗಳಿಗೆ ಆಗಮಿಸಿ ಮಡಿವಾಳ ಜನಾಂಗದವರಿಗೆ ಶಿಕ್ಷಣ, ಸಂಘಟನೆ, ಕುರಿತಾಗಿ ಸ್ವಾಮೀಜಿಯವರು ಜಾಗೃತಿ ಮೂಡಿಸಿದರು. 12ನೇ ಶತಮಾನದ ಮಡಿವಾಳ ಮಾಚಿದೇವ ಅವರ ತತ್ವಗಳು ಹಾಗೂ ಬಸವಣ್ಣನವರ ತತ್ವಗಳನ್ನು ಜನರಲ್ಲಿ ಬಿತ್ತುವ ಮೂಲಕ ಮೌಡ್ಯ ಕಂದ ಚರಗಳನ್ನು ಕಿತ್ತು ಹೋಗಿದ್ದು ಶಿಕ್ಷಣ ಅಂಥವರ ಆಗಬೇಕು ಎಂದು ಕರೆ ನೀಡಿದರು. ಹಳ್ಳಿಗಳ ಅಂಗಳದಲ್ಲಿ ಶ್ರಾವಣ ಮಾಸದ ನಿಮಿತ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನ ಸಂಸದ ಸಂಸ್ಥೆಯ ವಿರುಪಾಕ್ಷಪ್ಪ, ಶಿಕ್ಷಕರುಗಳಾದ ಗಂಗರೆಡ್ಡಿ, ತಿಪ್ಪೇಸ್ವಾಮಿ, ಗುರುಮೂರ್ತಿ, ಸೇರಿದಂತೆ ಮಡಿವಾಳ ಸಮುದಾಯದ ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;