ವಿವಿಧ ಬೇಡಿಕೆಗಳ ಈ ಡೇರಿಕೆಗೆ ಆಗ್ರಹಿಸಿ ಮನವಿ .
ಬಳ್ಳಾರಿ, ಕಂಪ್ಲಿ ತಾಲ್ಲೂಕು ನಲ್ಲಿ,ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭೂಮಿ – ವಸತಿ ಹೋರಾಟ ಸಮಿತಿ,ತಾಸಿಲ್ದಾರ್ ಗೌಸಿಯಾ ಬೇಗಂ ಇವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿ ಗಳಿಗೆ ಭಾನುವಾರ ಕಂಪ್ಲಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಭೂಮಿ- ವಸತಿ, ಹೋರಾಟ ಸಮಿತಿಯ ರಾಜ್ಯ ಸದಸ್ಯ ವಸಂತರಾಜ, ಕಹಳೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಭೂರಹಿತರು, ಸರ್ಕಾರಿ ಗೋಮಾಳ, ಪರಂಪೋಕು, ಇನಾಮ್, ಅರಣ್ಯ ಇನ್ನಿತರ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ, ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಭೂಮಿ ಮೇಲಿನ ಹಕ್ಕಿಗಾಗಿ ಜನರು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತ 30 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದರೂ, ಸರ್ಕಾರಗಳು ಕೊಟ್ಟ ಭರವಸೆಗಳು, ನೀರಿನ ಮೇಲಿನ ಗುಳ್ಳೆಯಂತೆ ಆಗಿದೆ.
ಮಹಾತ್ಮ ಗಾಂಧಿ,ಸುಭಾಷ್ ಚಂದ್ರಬೋಸರು,ಸೇರಿದಂತೆ ಅನೇಕ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆದರೆ ಇಲ್ಲಿನ ಜನರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಕೇವಲ ಭರವಸೆಯೊಂದಿಗೆ, ಮೋಸ ಮಾಡುತ್ತಿವೆ. ಹೀಗಾಗಿ ಸಾಕಷ್ಟು ಜನರು ಸಂಕಷ್ಟದಲ್ಲಿ ಬದುಕುವಂತಾಗಿದೆ, ಕೂಡಲೇ ಸರ್ಕಾರಗಳು ಎಚ್ಚೆತ್ತು ಫಾರಂ ನಂಬರ್ 50,53, 57, ರಲ್ಲಿ ಅರ್ಜಿ ಸಲ್ಲಿಸಿದ, ಭೂರಹಿತ ರೆಲ್ಲರಿಗೂ,ಭೂಮಿ ಮಂಜೂರಾತಿ ನೀಡಬೇಕು.
ಅರಣ್ಯ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ ಎಲ್ಲರಿಗೂ ವಾಸದ ಜಾಗ, ಭೂಮಿ, ಮಂಜೂರಾತಿ ಒದಗಿಸಬೇಕು.
94 ಸಿ,94ಸಿಸಿ, ಯಲ್ಲಿ ಅರ್ಜಿ ಸಲ್ಲಿಸಿದ ವರಿಗೂ,
ವಾಸದ ಜಾಗ ಹಾಗೂ ಮನೆ ನೀಡಬೇಕು. ವಾಸಿಸುವ ಜಾಗ, ಸಾಗುವಳಿ ಮಾಡುವ ಭೂಮಿಯಿಂದ ಪರ್ಯಾಯ ಒದಗಿಸದೆ ಒಕ್ಕಲೇಳಿಸಬಾರದು.
ರೈತ, ದಲಿತ,ಹಾಗೂ ಬಡಜನರ ವಿರುದ್ಧ ಕಾನೂನುಗಳನ್ನು ಮತ್ತು ರದ್ದು ಪಡಿಸಬೇಕು.
ಹೀಗೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭೂಮಿ ವಸತಿ ಹೋರಾಟ ಸಮಿತಿಯ ರಾಜ್ಯ ಸದಸ್ಯ,
ನೀಲಪ್ಪ ಪ್ರಿಂಟರ್, ಪದಾಧಿಕಾರಿಗಳಾದ ಧನಂಜಯ,ಶಾಂತಪ್ಪ ಪೂಜಾರಿ, ಟಿ.ಎಂ. ಬಸವರಾಜ್, ನೀಲಪ್ಪ ಕರಡಿ, ರಾಮಸಾಗರ ರಾಮಾಂಜಿನಿ, ನಾಗರಾಜ್, ಮೆಟ್ರಿ ಮಂಜುನಾಥ್, ಪಿ ರವಿಚಂದ್ರ, ಸೀ ನಾಗರಾಜ್ ಚನ್ನವೀರಪ್ಪ,ಕನಕಪ್ಪ, ಭಾಗವಹಿಸಿದ್ದರು.

ವರದಿ. ಎಂ. ಎಲ್. ವೆಂಕಟೇಶ್.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
