ಬೆಳಗಾವಿ :-ಗೋಕಾಕ ತಾಲೂಕು ಸಂಗನಕೇರಿ ಗ್ರಾಮದ ಜತ್ -ಜಂಬೋಟಿ ರಾಜ್ಯ ಹೆದ್ದಾರಿಯಲ್ಲಿ ದಿನಾಂಕ 16/08/2021ರಂದು ಸೋಮವಾರ ದಿವಸ ಬೆಳಿಗ್ಗೆ 11:10 ಗಂಟೆಗೆ ಹೆದ್ದಾರಿಯಲ್ಲಿ ಬೈಕ್ ಹಾಗೂ ಸಿಲಿಂಡರ್ ತುಂಬಿದ ವಾಹನದ ಮಧ್ಯ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಬೈಕ್ ಸವಾರನಿಗೆ ಗಂಭೀರ ಗಾಯಗಳಾದ ಘಟನೆ ಸಂಗನಕೇರಿ ಹತ್ತಿರ ಸಂಭವಿಸಿದೆ.
ಬೈಕ್ ಮೇಲೆ ಹಿಡಕಲ ಗ್ರಾಮದಿಂದ ಗೋಕಾಕ ಕಡೆಗೆ ತಂದೆ ಮತ್ತು ಮಗಳು ಹೋಗುತ್ತಿರುವಾಗ ಸಿಲಿಂಡರ್ ತುಂಬಿದ ವಾಹನವೊಂದು ಬೈಕ್ ಓವರ್ ಟೇಕ್ ಮಾಡುವ ಬರದಲ್ಲಿ ಬೈಕ್ ಸವಾರರಿಗೆ ಬಡಿದ ಪರಿಣಾಮ ಬೈಕ್ ಮೇಲಿದ್ದ ಇಬ್ಬರು ಹಾಗೂ ಇವರ ಸಣ್ಣ ಮಗು ಕೆಳಗೆ ಬಿದ್ದದರಿಂದ ಗಂಭೀರವಾದ ಗಾಯವಾಗಿದೆ. ಬೈಕ್ ಸವಾರರಾದ ಸಿದ್ದಪ್ಪ ಪುಂಡಲೀಕ್ ಮನ್ನಿಕೇರಿಯವರಿಗೆ ಗಂಭೀರವಾಗಿ ಗಾಯವಾಗಿದೆ ಇವರ ಬಲಗೈ ಮುರಿದು ತಲೆಗೆ ಬಲವಾದ ಪೆಟ್ಟು ಬಿದ್ದಿದೆ, ಮತ್ತು ಸಿದ್ದಪ್ಪರವರ ಮೊಮ್ಮಗನಿಗೆ ಚಿಕ್ಕ ಗಾಯವಾಗಿದೆ ಇವರ ಮಗಳಾದ ಶಾಮಲಾ ಸುರೇಶ ಶಿವಾಪೂರ ಇವರ ತಲೆ ಹಾಗೂ ಹೊಟ್ಟೆಗೆ ಗಂಭೀರವಾದ ಗಾಯವಾಗಿ ರಕ್ತಸ್ರಾವವಾಗಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಾಗಿಸುವಾಗ ಮಾರ್ಗಮದ್ಯದಲ್ಲಿ ಕೊನೆವುಸಿರೆಳೆದರೂ.ಸಿದ್ದಪ್ಪರವರು ಗೋಕಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ ಸಿಲಿಂಡರ್ ವಾಹನದ ಡ್ರೈವರ್ ಪರಾರಿಯಾಗಿದ್ದಾರೆ ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದು ಬರಬೇಕಿದೆ, ಘಟನಾ ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇಂತಹ ಘಟನೆಯ ಸಂದರ್ಭದಲ್ಲಿ ಮಾನವೀಯತೆ ಇಲ್ಲದ ವ್ಯಕ್ತಿಗಳು ಸಾಯಿಯುವ ವ್ಯಕ್ತಿಗಳನ್ನು ನೋಡುತ್ತಾ ನಿಂತು ಮೊಬೈಲ್ಗಳಲ್ಲಿ ಘಟನೆಯನ್ನು ಸೀರೆಹಿಡಿಯುತ್ತಾರೆ ಹೊರತು ಮಾನವೀತೆಯಿಂದ ನೇರವು ನೀಡದೆ ನಮಗೇಕೆ ಉಸಾಬರಿ ಎನ್ನುತ್ತಾರೆ. ಇಂತಹ ಸಮಯದಲ್ಲಿ ಮಾನವೀಯತೆ ತೋರಿದ ಸಚಿನ್ ಸೋನಾವಣೆ ಮತ್ತು ಎಚ್ಚರಿಕೆ ಪತ್ರಿಕೆಯ ಜಿಲ್ಲಾ ವರದಿಗಾರರಾದ ಮಹಾಲಿಂಗ ಹ ಗಗ್ಗರಿ ಗಾಯಾಳುಗಳ ಸಂಬಧಿಕರಿಗೆ ಫೋನ್ ಮೂಲಕ ವಿಷಯ ತಿಳಿಸಿ ಆಂಬುಲೆನ್ಸ್ ಕರೆಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸುವ ಮೂಲಕ ಮಾನವೀಯತೆ ತೋರಿಸಿದ್ದಾರೆ.
ವರದಿ :-ಮಹಾಲಿಂಗ ಹ ಗಗ್ಗರಿ
ಜಿಲ್ಲಾ ವರದಿಗಾರರು ಬೆಳಗಾವಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
