ಸಿಂಧನೂರು : ತಾಲೂಕು ಆಡಳಿತ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಲಾಯಿತು.ತಾಲೂಕು ದಂಡಾಅಧಿಕಾರಿಗಳಾದ ಮಂಜುನಾಥ್ ರವರು ನೆರವೇರಿಸಿದರು. ಮಾನ್ಯ ಶಾಸಕರು ವೆಂಕಟರಾವ್ ನಾಡಗೌಡ ಧ್ವಜಾರೋಹಣ ಸಂದರ್ಭದಲ್ಲಿ ಭಾಗಿಯಾದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥರವರು ತಾಲೂಕಿನ ಜನತೆಗೆ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು, ಕೋರೊನಾ ಎಂಬ ಮಹಾಮಾರಿಯಿಂದ ಅನೇಕ ಸಾವು-ನೋವುಗಳನ್ನು ಅನುಭವಿಸಿದ್ದೇವೆ, ಮತ್ತೆ ಮುಂದಿನ ದಿನಗಳಲ್ಲಿ ಅನುಭವಿಸುವುದು ಬೇಡಾ, ಆದ್ದರಿಂದ ಪ್ರತಿಯೊಬ್ಬರೂ ಮಾಸ್ಕ ಧರಿಸಿ ಲಸಿಕೆ ಹಾಕಿಸಿಕೊಳ್ಳಿ ಗುಂಪುಗುಂಪಾಗಿ ಸೇರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಂತರ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸ ಬೇಕಾಗಿತ್ತು.ಆದರೆ ದೇಶದ ತುಂಬೆಲ್ಲ ಕೊರೊನಾ ಎಂಬ ಮಹಾಮಾರಿ ಅಟ್ಟಹಾಸದಿಂದ ಮೆರೆಯುತ್ತಿರುವುದುರಿಂದ ಸರಳವಾಗಿ ಆಚರಣೆ ಮಾಡಬೇಕಾಯಿತು.
ಕೋವಿಡ್ ಅಲೆಯ ಸಂಕಷ್ಟದ ಸಮಯದಲ್ಲಿ ವೈದ್ಯರು, ತಾಲೂಕಾಡಳಿತ,ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ, ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು,ರಾಜಕಾರಣಿಗಳ ಜೊತೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಲಸಿಕೆ ಹಾಕಿಸಿಕೊಳ್ಳಬೇಕು. ಮತ್ತು ಈ ತಿಂಗಳಲ್ಲಿ ಅನೇಕ ಹಬ್ಬಗಳು ಬಂದಿರುವುದರಿಂದ ಮೋಹರಂ ಮತ್ತು ಗಣೇಶ್ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿರಿ.
ಸ್ವಾತಂತ್ರ್ಯ ಪಡೆಯುವಲ್ಲಿ ಅನೇಕ ರಾಷ್ಟ್ರ ಪ್ರೇಮಿಗಳ ತ್ಯಾಗ ಬಲಿದಾನ ಮಾಡಿದ್ದಾರೆ. ನಾವುಗಳು ಬ್ರಿಟಿಷರ ಸರ್ವಾಧಿಕಾರಿ ನಿಯಮಗಳಿಂದ ಸ್ವತಂತ್ರಗೊಂಡ ದಿನ. ಭಾರತ ದೇಶವು ಹೊಸತುಗಳನ್ನು ಕಂಡಿದೆ, ನಾವು ಸಾಧನೆ ಮತ್ತು ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತಿದ್ದೇವೆ, ಕಳೆದ ವರ್ಷ ಮಾರ್ಚ್ ನಿಂದ ಕೊವಿಡ್ ಎಂಬ ಮಹಾಮಾರಿ ವೈರಸ್ಸಿನಿಂದ ತಲ್ಲಣಗೊಂಡಿದ್ದರು,ಅಭಿವೃದ್ಧಿಯಲ್ಲಿ ಹಿಂದೆ ಸರಿದಿಲ್ಲ. ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ ಭಾರತ, ಆದ್ದರಿಂದ ಯುವಕರು ನಾಡು ಕಟ್ಟುವಲ್ಲಿ ಮುಂದಾಗಬೇಕು, ಇಂದಿನ ಯುವಕರೇ ಮುಂದಿನ ಭವ್ಯ ಭಾರತದ ಪ್ರಜೆಗಳು,
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಕೆ.ಕರಿಯಪ್ಪ ಕಾಂಗ್ರೆಸ್ ಮುಖಂಡರು , ಮಲ್ಲಿಕಾರ್ಜುನ್ ಪಾಟೀಲ್ ನಗರಸಭೆ ಅಧ್ಯಕ್ಷರು, ಮುರ್ತುಜಾ ಹುಸೇನ್ ಉಪಾಧ್ಯಕ್ಷರು ನಗರಸಭೆ , ಪವನ್ ಕುಮಾರ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು,ಪ್ರಶಾಂತ್ ಕೃಷಿ ಅಧಿಕಾರಿಗಳು , ಕನ್ನಡಪರ ಸಂಘಟನೆಗಳು ,ದಲಿತ ಪರ ಸಂಘಟನೆಗಳು ಇನ್ನು ಮುಂತಾದವರು ಭಾಗಿಯಾಗಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
