;

ಮಹಿಳೆಯ ಸೀರೆಯ ಪಿನ್ ಚುಚ್ಚಿ ಮಾಜಿ ಸಿಎಂ ಯಡಿಯೂರಪ್ಪನವರ ಕೈಗೆ ಗಾಯ!

ಮಹಿಳೆಯ ಸೀರೆಯ ಪಿನ್ ಚುಚ್ಚಿ ಮಾಜಿ ಸಿಎಂ ಯಡಿಯೂರಪ್ಪನವರ ಕೈಗೆ ಗಾಯ!

ಬೆಂಗಳೂರು: ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ನೂತನ ಸಚಿವ ಸಂಪುಟ ಇಂದು ಅಸ್ತಿತ್ವಕ್ಕೆ ಬಂದಿದ್ದು, ನೂತನ ಸಚಿವರು ಪ್ರಮಾಣ ವಚನ ನಡೆಸುತ್ತಿದ್ದ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರ ಕೈಗೆ ಪಿನ್ ಚುಚ್ಚಿ ಸಣ್ಣ ಗಾಯವಾಗಿದೆ ಎಂದು ವರದಿಯಾಗಿದೆ.

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಡಿಯೂರಪ್ಪನವರು ಆಗಮಿಸಿದ್ದರು. ಈ ವೇಳೆ ಶಾಸಕ ಗೋಪಾಲಯ್ಯ ಅವರ ಕುಟುಂಬದ ಸದಸ್ಯರು ಯಡಿಯೂರಪ್ಪನವರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.

ಆಶೀರ್ವಾದ ಪಡೆಯುತ್ತಿದ್ದ ವೇಳೆ ಮಹಿಳೆಯೊಬ್ಬರ ಸೀರೆಯಲ್ಲಿದ್ದ ಪಿನ್ ಯಡಿಯೂರಪ್ಪನವರ ಕೈಗೆ ಆಕಸ್ಮಿಕವಾಗಿ ತಾಗಿದ್ದು, ಅವರ ಕೈಗೆ ಸಣ್ಣ ಗಾಯವಾಗಿದೆ ಎಂದು ವರದಿಯಾಗಿದೆ. ಇನ್ನೂ ಕೈಗೆ ಗಾಯಗೊಂಡರೂ ಬೇಸರಗೊಳ್ಳದ ಯಡಿಯೂರಪ್ಪನವರು ಮಹಿಳೆಯ ಜೊತೆಗೆ ನಗುನಗುತ್ತಲೇ ಮಾತು ಮುಂದುವರಿಸಿದರು ಎಂದು ಮಾಧ್ಯಮವೊಂದು ವರದಿ ಮಾಡಿದೆ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;