;

ಯಾದಗಿರಿ:-ಬೀದಿಗೆ ಬಿತ್ತು ಬೀರನೂರು ಗ್ರಾಮಪಂಚಾಯಿತಿ ಅಲ್ಲಿನ ಅಭಿವೃದ್ಧಿ ಅಧಿಕಾರಿಯ ಕೈಚಳಕದಿಂದ…!!!

ನಮ್ಮ ರಾಜ್ಯ ಸರ್ಕಾರ ಬಡವರಿಗೆ, ಮತ್ತು ಅವರ ಬದುಕಿಗೆ ಗ್ರಾಮಪಂಚಾಯಿತಿಯು ಬಂಗಾರವಾಗಲಿ ಎಂದು ನಿರ್ಮಿಸಿದೆ,ಆದರೆ ರಾಜ್ಯದಲ್ಲಿ ಕೆಲವು ಕಡೆ ನಡೆಯುತ್ತಿರುವ ಆಡಳಿತವೆ ಬೇರೆ ಅದೇನೆಂದರೆ. ಬದುಕಿದವರನ್ನು ಸಾಯಿಸುತ್ತಾರೆ, ಸತ್ತವರನ್ನು ಹೆಬ್ಬಿಸಿ ಕೆಲಸವನ್ನು ಮಾಡಿಸುತ್ತಾರೆ, ಹಾಗೂ ಎಲ್ಲೋ ಇರುವವರನ್ನು ಅಲ್ಲಿಂದಲೇ ಉದ್ಯೋಗ ಖಾತ್ರಿ ಯೋಜನೆಯ ಕೆಲಸವನ್ನು ಮಾಡಿಸುತ್ತಾರೆ ಹಾಗೂ ಯಾರೋ ಹೆಸರಲ್ಲಿ ಬಂದ ಅನುದಾನವನ್ನು ಮತ್ತೊಬ್ಬರ ಹೆಸರಿಗೆ ಮಾಡಿಸಿ ತಮ್ಮ ಜೇಬಿಗೆ ಹಣವನ್ನು ಇಳಿಸುವವರು ಇರುವ ತನಕ ಎಲ್ಲಿ ಉದ್ದಾರವಾಗುವುವು ಹೇಳಿ ನಮ್ಮ ಗ್ರಾಮೀಣ ಭಾಗದಲ್ಲಿ ಬರುವ ಹಳ್ಳಿಗಳು.ನಮ್ಮ ರಾಜ್ಯದಲ್ಲಿನ ರಾಜಕೀಯ ವ್ಯವಸ್ಥೆ ಹಾಗೂ ಅಧಿಕಾರದ ವ್ಯವಸ್ಥೆಯ ಬಗ್ಗೆ ಸ್ವಲ್ಪ ನೀವೇ ನೋಡಿ ಕೆಲ ಮಾಹಿತಿಯೊಂದಿಗೆ ಅನೇಕ ದಶಕಗಳಿಂದ ಪ್ರತಿ ಸಲ ಚುನಾವಣೆ ಬಂದಾಗ ತಮ್ಮ ಜಾತಿ ನಾಯಕನನ್ನು ಗೆಲ್ಲಿಸುತ್ತಾ ಆತನನ್ನು ಎರಡೆರಡು ಬಾರಿ,mp, mla ಕೂಡ ಮಾಡಿ ಆತನ ಮಗನನ್ನು ಗೆಲ್ಲಿಸಿದ್ದೇವೆ. ಈಗ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿದಿದ್ದೇವೆ ಅಂತ ಅದೆ ಜಾತಿ ನಾಯಕರನ್ನು ಮುಂದೆ ಮಾಡಿಕೊಂಡು ಜಾತಿ ಮೀಸಲಾತಿಗೆ ಹೋರಾಟ ಮಾಡ್ತಿದ್ದಾರೆ.

ನಾವು ಎಷ್ಟು ಮೂರ್ಖರು ಅಂದ್ರೆ ದಶಕಗಳಿಂದ ಅಧಿಕಾರ ನಡೆಸಿದ ತಮ್ಮ ನಾಯಕ ಎನು ಮಾಡಿದ? ಇನ್ನು ನಾವು ಯಾಕೆ ಹಿಂದೆ ಉಳಿದಿದ್ದೇವೆ? ಅಂತ ಯೋಚನೆ ಮಾಡಲ್ಲ. ಹಾಗಾದರೆ ಅವನು ಪದೇ ಪದೇ ಯಾಕೆ ಗೆದ್ದ. ಅಭಿವೃದ್ಧಿ ಮಾಡಿದ್ದಾನೆ ಅದಕ್ಕೆ ಗೆದ್ದ. ಅವರು ಅಭಿವೃದ್ಧಿ ಮಾಡಿದ್ದು ನಿಜವಾದ್ರೆ ಮತ್ತೇಕೆ ಆರ್ಥಿಕವಾಗಿ, ಹಿಂದುಳಿದಿದ್ದೆವೆ ಅಂತ ಮೀಸಲಾತಿ ಕೇಳ್ತಿದ್ದೆವೆ. ತನ್ನ ಕ್ಷೇತ್ರದ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಿಲ್ಲಿಸುವ ತಾಕತ್ತು ಇಲ್ಲದ ಶಾಸಕರ, ನಾಯಕರ ಸ್ಟೇಟಸ್ ಹಾಕಿ ಜೈಕಾರ ಹಾಕಿದಾಗ ಈ ರೀತಿ ಬರೀಬೇಕು ಅನಿಸುತ್ತೆ.


ಕರ್ನಾಟಕ ಪಂಚಾಯತ ಕಾಯ್ದೆ 1993 ಸೆಕ್ಸನ್ 3 ಎ,ರ ಪ್ರಕಾರ ಗ್ರಾಮಸಭೆ ನಡೆಸುವದು ಕಡ್ಡಾಯವಾಗಿರುತ್ತದೆ. ಗ್ರಾಮಸಭೆ ನಡೆಸದಿದ್ದಲ್ಲಿ ಅದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಜವಾಬ್ದಾರರಾಗುತ್ತಾರೆ. ಅಧ್ಯಕ್ಷರು ನಿಗದಿತ ಸಮಯದಲ್ಲಿ ಗ್ರಾಮಸಭೆ ನಡೆಸದಿದ್ದರೆ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮಸಭೆ ನಡೆಸಬೇಕಾಗುತ್ತದೆ.ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆಯ್ಕೆಯಾದ 3 ತಿಂಗಳ ಒಳಗಡೆ ಹಾಗೂ ಪ್ರತಿ 6 ತಿಂಗಳಿಗೆ ಒಮ್ಮೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸುವದು ಕಡ್ಡಾಯವಾಗಿರುತ್ತದೆ.ಗ್ರಾಮ ಪಂಚಾಯತಿಗಳಲ್ಲಿ ಬರುವ ಎಲ್ಲಾ ಸವಲತ್ತುಗಳನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕಾದದ್ದು ಪ್ರತಿಯೊಂದು ಗ್ರಾಮ ಪಂಚಾಯತಿಯ ಆದ್ಯ ಕರ್ತವ್ಯವಾಗಿರುತ್ತದೆ.


ಗ್ರಾಮ ಪಂಚಾಯಿತಿಗಳಲ್ಲಿ ಜೆಸಿಬಿ ಯಂತ್ರಗಳ ಬಳಕೆ. ಕ್ಷಣಿಕ ಸುಖ ಮಾತ್ರ. ಸರ್ಕಾರದ ಅನುದಾನ ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಮುಂದಿನ ಕಾಲಘಟ್ಟದಲ್ಲಿ ಸುಖ ನೆಮ್ಮದಿ ಇರುವುದಿಲ್ಲ. ಸಾರ್ವಜನಿಕರ ಸೇವೆಗೆ ಬದ್ಧರಾಗಿ , ಉತ್ತಮವಾದ ಸೇವೆಯನ್ನು ನೀಡಿ, ತಮ್ಮ ಹೆಸರು, ವಿಚಾರಗಳು ಉನ್ನತ ಸ್ಥಾನದಲ್ಲಿರಲಿ ಇದು ನನ್ನ ಸಂದೇಶ.

ಆದರೆ ಇದಕ್ಕೆಲ್ಲ ತದ್ವಿರುದ್ಧ ಎಂಬಂತೆ, ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ, ಬೀರನೂರ ಗ್ರಾಮಪಂಚಾಯಿತಿಯ ಕಾರ್ಯವೈಖರಿ ನೋಡಿ ಈ ಒಂದು ಗ್ರಾಮಪಂಚಾಯಿತಿಯಲ್ಲಿ ಸುಮಾರು ಹಗರಣಗಳು ನಡೆದರು ಸಹ, ಯಾವೊಬ್ಬ ಮೇಲಾಧಿಕಾರಿಗಳು ಇತ್ತಕಡೆ ಗಮನವನ್ನು ಹರಿಸದೆ, ಅಲ್ಲಿರುವ ಅಭಿವೃದ್ಧಿ ಅಧಿಕಾರಿ ತನಗಿಷ್ಟ ಬಂದಹಾಗೆ ಅಧಿಕಾರವನ್ನು ದುರುಪಯೋಗ ಮಾಡಲಿಬಿಡು ಎನ್ನುವ ಒಂದು ದೃಶ್ಯವನ್ನು ನೋಡಿದರೆ, ಅವರಿಗೆ ಎಷ್ಟಿರಬಹುದೊ, ದಕ್ಷಿಣ ಆ ದೇವರಿಗೆ ಗೊತ್ತು ಬಿಡಿ, ಮುಂದೆ ನೋಡಿ ಇನ್ನು ಬೇಕಾದಷ್ಟಿದೆ 14,ಹಾಗೂ 15ನೇ, ಹಣಕಾಸು ಯೋಜನೆಯನ್ನು ಇಲ್ಲಿರುವ ಅಧಿಕಾರಿಯ ಹೆಸರಿಗೆ ಸರ್ಕಾರ ಬರೆದಿರಬಹುದೇನೋ ಬಿಡಿ ಸರ್ ಅನ್ನುತ್ತಾರೆ ಅಲ್ಲಿನ ಕೆಲ ಸಾರ್ವಜನಿಕರು ಎಷ್ಟೋ ಕೆಲಸವನ್ನು ಮಾಡದೇ, ಬಿಲ್ ಪಾಸ್, ಮಾಡೋದು ಮತ್ತು ಎಲ್ಲೋ ಇರುವವರ ಹೆಸರಲ್ಲಿ ಬಿಲ್, ಮಾಡೋದು ಇವರಿಗೆ ಕರಗತವಾಗಿಬಿಟ್ಟಿದೆ ಬಿಡಿ.
“ಕತ್ತೆಯ ಬಾಲಕ್ಕೆ ಡಬ್ಬಿಯನ್ನು ಕಟ್ಟಿದರೆ ಅದು ಓಡುವುದನ್ನು ನಿಲ್ಲಿಸಬಹುದಾ!!”ಸರ್ ಅನ್ನುತ್ತಾರೆ ಅಲ್ಲಿನ ಗ್ರಾಮದವರು” ಇಲ್ಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಕಾಣುವುದು ಒಂದೇ, ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳನ್ನು ಕಾಣುವುದು ಒಂದೇ ಬಿಡಿ ಸರ್, ನಾವು ನಮ್ಮ ಒಂದು ಕೆಲಸವನ್ನು ಮಾಡಿಸಬೇಕೆಂದರೆ ಸರಿಸುಮಾರು ಬಾರೀ ನಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ತಿರುಗಾಡಬೇಕು ಆಗಾದರೂನಮಗೆ ಸಿಗುವುದು ಕಷ್ಟ ಮತ್ತು 15ನೇ ಹಣಕಾಸಿಗೆ ಸಂಬಂಧಪಟ್ಟ ಬಿಲ್ ಹಾಗೂ ಮತ್ತಿತರೇ ಕೆಲಸಗಳನ್ನು ಇವರು ಗ್ರಾಮಪಂಚಾಯಿತಿಯಲ್ಲಿನ ಕಂಪ್ಯೂಟರ್ ಆಪರೇಟರ್ ಅತ್ತಿರ ಮಾಡಿಸುವದನ್ನು ಬಿಟ್ಟು ಹೊರಗಡೆ ಮಾಡಿಸುತ್ತಾರಂತೆ, PDO ಸಾಹೇಬ್ರು ಅಂದರೆ ಇದರ ಅರ್ಥ ಏನಿರಬಹುದು ನೀವೇ ಹೂಹೆ ಮಾಡಿ ನೋಡಿ ಇನ್ನು ಹಲವಾರು ಹಗರಣಗಳನ್ನು  ನಿಮ್ಮ ಮುಂದೆ ಬಿಚ್ಚಿಡುವೆ ಮುಂದಿನ ಸಂಚಿಯಲ್ಲಿ….

ವರದಿ. ಎಂ.ಎಲ್.ವೆಂಕಟೇಶ್, ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend