ಅಂಬೇಡ್ಕರ್ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಪ್ರಸಕ್ತ ಸಾಲಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪ್ರಮುಖ ಯೋಜನೆಗಳಿಗೆ ಅರ್ಜಿ ಕರೆಯಲಾಗಿದೆ
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:-
ನಿಗಮದಿಂದ ನೇರವಾಗಿ 50 ಸಾವಿರ ರೂ ನಿಗಮ ನೀಡುತ್ತದೆ. 25 ಸಾವಿರ ಸಬ್ಸಿಡಿ ಇರುತ್ತೆ.
ಉದ್ಯಮಶೀಲತೆ ಯೋಜನೆ:-
ಬ್ಯಾಂಕ್ ಸಹಯೋಗದೊಂದಿಗೆ 2 ಲಕ್ಷ ಸಾಲ ಪಡೆದರೆ ಒಂದು ಲಕ್ಷ ಸಬ್ಸಿಡಿ ನೀಡಲಾಗುತ್ತದೆ. ವಿವಿಧ ಯೋಜನೆಗಳ ಘಟಕ ಸ್ಥಾಪನೆಗೆ. ಇದು ನೆರವಾಗಲಿದೆ.
ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ:-
ಈ ಯೋಜನೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಇವರಿಗೆ 25 ಸಾವಿರ ಹಣ ನೀಡಲಾಗುವುದು(ಪ್ರತಿ ಸದಸ್ಯರಿಗೆ) ಇದರಲ್ಲಿ 15 ಸಾವಿರ ಸಬ್ಸಿಡಿ ,10 ಸಾವಿರ ಲೋನ್ ಸೌಲಭ್ಯ ಹೊಂದಿದೆ. ರಿಜಿಸ್ಟರ್ ಆದ ಸಂಘ ಕನಿಷ್ಠ 10 ಜನ ಸದಸ್ಯರಿರುವ ಸಂಘಗಳಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹವಾಗಿರುತ್ತವೆ.
ಸಮಗ್ರ ಗಂಗಾ ಕಲ್ಯಾಣ ಯೋಜನೆ:-
ಒಣಭೂಮಿಯಲ್ಲಿ ಸಣ್ಣ ಹಿಡುವಳಿ ವ್ಯಾಪ್ತಿಯ ಅರ್ಜಿದಾರ ರೈತರಿಗೆ ಕೊಳವೆ ಬಾವಿ ತೆರೆದು ಕೊಡುವುದು. ಒಂದುವರೆ ಎಕರೆ ಯಿಂದ 5 ಎಕರೆ ಒಣ ಭೂಮಿ ಹೊಂದಿರಬೇಕು, ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು. ವಿದ್ಯುತ್ ಸೌಲಭ್ಯ ಇತ್ತರೆ ವ್ಯವಸ್ಥೆ ಮಾಡಿಕೊಡಲಾಗುವುದು.
ಭೂ ಒಡೆತನ ಯೋಜನೆ:-
ಈ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿ ಬೇರೆ ಜಾತಿಯವರ ಜಮೀನು ಕೊಳ್ಳುವ ಯೋಜನೆ.ಅದರಲ್ಲಿ ಶೇ 50 ರಷ್ಟು ಸಾಲ ಶೇ 50 ರಷ್ಟು ಸಬ್ಸಿಡಿ ಅಂತ ಪರಿಗಣಿಸಲಾಗುವುದು. 15 ಲಕ್ಷದ ವರೆಗೆ ಈ ಸೌಲಭ್ಯ ಲಭ್ಯವಿದೆ.
ಈ ಯೋಜನೆಗಳಿಗೆ ಇಂದಿನಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಕೊನೆಯ ದಿನಾಂಕ ಸೆಪ್ಟೆಂಬರ್ 02 ರ ವರಗೆ ಇರಲಿದೆ .
ಇದರ ಅಯ್ಕೆ ಪ್ರಕ್ರಿಯೆ ಜನ ಪ್ರತಿನಿಧಿಗಳ ಅಯ್ಕೆ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಎಂದು ಹೂವಿನ ಹಡಗಲಿ ತಾಲೂಕಿನ ನಿಗಮದ ವ್ಯವಸ್ಥಾಪಕರಾದ ಲಕ್ಷ್ಮಣ್ ಅವರು ತಿಳಿಸಿದರು.

ವರದಿ :- ಅಜಯ.ಚ
ಹುಗಲೂರು, ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
