;

ದಿನೇ ದಿನೇ ಗ್ರಾಹಕರಿಗೆ ಶಾಕ್ ನೀಡುತ್ತಿರುವ ನಂಬರ್1 ನೆಟ್ವರ್ಕ್ ಕಂಪನಿ…!!!

ನಂಬರ್ 1 ನೆಟ್ ವರ್ಕ್ ಎಂದು ಹೇಳಿಕೊಳ್ಳುತ್ತಿರುವ ಏರ್ಟೆಲ್ ಇದೀಗ ಗ್ರಾಹಕರಿಗೆ ಶಾಕ್ ನೀಡಿದ್ದು, ಕಡಿಮೆ ಬೆಲೆಯ ರೀಚಾರ್ಜ್ ಗಳನ್ನು ರದ್ದುಗೊಳಿಸಿದೆ.ಇದರ ಜೊತೆಗೆ ಹಲವು ಪ್ಲಾನ್ ಗಳನ್ನು ದುಬಾರಿಗೊಳಿಸುವ ಮೂಲಕ ಗ್ರಾಹಕರಿಗೆ ಹೊರೆಯಾಗಿದೆ.

ಏರ್ಟೆಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ 49 ರೂಪಾಯಿಗಳಿಂದ ಆರಂಭವಾಗುತ್ತಿತ್ತು. ಈಗ ಬದಲಾಗಿರುವ ದರದಂತೆ ಇನ್ನು ಮುಂದೆ ಏರ್ಟೆಲ್ ನಲ್ಲಿ 79 ರೂಪಾಯಿಗಳಿಂದ ರೀಚಾರ್ಜ್ ಬೆಲೆಗಳು ಆರಂಭವಾಗಲಿದೆ. ಎಲ್ಲ ಟೆಲಿಕಾಂ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಬೆಲೆ ಕಡಿಮೆ ಮಾಡಿದರೆ, ಏರ್ಟೆಲ್ ಮಾತ್ರ ದಿನದಿಂದ ದಿನಕ್ಕೆ ಬೆಲೆಯನ್ನು ಏರಿಸುತ್ತಲೇ ಹೋಗುತ್ತಿದೆ.

ಜುಲೈ 29ರಿಂದ ಏರ್ಟೆಲ್ ಗ್ರಾಹಕರಿಗೆ ದುಬಾರಿಯಾಗಲಿದೆ. 79 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯಲ್ಲಿ 64 ರೂಪಾಯಿಗಳ ಟಾಕ್ ಟೈಮ್ ಲಭ್ಯವಿದೆ. ಈ ಯೋಜನೆಯ ಸಿಂಧುತ್ವವು 28 ದಿನಗಳು. ಬಳಕೆದಾರರಿಗೆ 200 ಎಂಬಿ ಡೇಟಾ ಸಿಗಲಿದೆ. 49 ರೂಪಾಯಿಗಳ ಯೋಜನೆಯಲ್ಲಿ ಬಳಕೆದಾರರಿಗೆ 38 ರೂಪಾಯಿಗಳ ಟಾಕ್ ಟೈಮ್ ಸಿಗ್ತಿತ್ತು. 100 ಎಂಬಿ ಡೇಟಾ ಸಿಗ್ತಿತ್ತು. 28 ದಿನಗಳ ಸಿಂಧುತ್ವವನ್ನು ಇದು ಹೊಂದಿತ್ತು. ಈಗಾಗಲೇ ಏರ್ಟೆಲ್ 199 ರೂಪಾಯಿ ಮತ್ತು 249 ರೂಪಾಯಿ ಪ್ಲಾನ್ ರದ್ದುಗೊಳಿಸಿದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;