ಚಿರತಗುಂಡು ಗ್ರಾಮದಲ್ಲಿ ಮನೆಯ ಪಕ್ಕದಲ್ಲೇ ಗಾಂಜಾ ಗಿಡಗಳನ್ನು ಬೆಳೆದ ಆರೋಪಿ ಗೌಡ್ರು ಮಹಾಂತೇಶ್ ಗುಡೆಕೋಟೆ ಪೊಲೀಸರ ವಶಕ್ಕೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು

ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಚಿರತಗುಂಡು ಗ್ರಾಮದಲ್ಲಿ ಮನೆಯ ಪಕ್ಕದಲ್ಲೇ ಗಾಂಜಾ ಗಿಡಗಳನ್ನು ಬೆಳೆದ ಆರೋಪಿ ಗೌಡ್ರು ಮಹಾಂತೇಶ್ ಗುಡೆಕೋಟೆ ಪೊಲೀಸರ ವಶಕ್ಕೆ
ಮಂಗಳವಾರ 2:00 ಗಂಟೆ ಸಮಯದಲ್ಲಿ ಚಿರತಗುಂಡು ಗ್ರಾಮದ ಗೌಡ್ರು ಮಹಾಂತೇಶ ತನ್ನ ಮನೆಯ ಪಕ್ಕದಲ್ಲಿ ಐವತ್ತು ಗಾಂಜಾ ಗಿಡಗಳನ್ನು ಬೆಳೆಸಿದ್ದ ಖಚಿತ ಮಾಹಿತಿ ಮೇರೆಗೆ, ಡಿವೈಎಸ್ಪಿ ಹರೀಶ್ ರೆಡ್ಡಿ ಸಿಪಿಐ ವಸಂತ ಅಸೋದೆ ಹಾಗೂ ಗುಡೆಕೋಟೆ ಪಿಎಸ್ಐ ಶಂಕರಪ್ಪ ಇವರ ನೇತೃತ್ವದಲ್ಲಿ ಗುಡೇಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಅಬಕಾರಿ ಇಲಾಖೆ ಸಿಬ್ಬಂದಿಯಿಂದ ದಾಳಿ ನಡೆಸಿ ಚಿರತಗುಂಡು ಗ್ರಾಮದ ಗೌಡ್ರು ಮಹಾಂತೇಶ್ ಮನೆ ಪಕ್ಕದಲ್ಲಿ 24 ಕೆಜಿ ತೂಕದ 50 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡು ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾನ್ಯ ಪಿಎಸ್ಐ ಶಂಕ್ರಪ್ಪ ಎಲ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿವೈಎಸ್ಪಿ ಹರೀಶ್ ರೆಡ್ಡಿ,C.P.I. ವಸಂತ ಅಸೋದೆ, ಗುಡೆಕೋಟೆ ಪಿಎಸ್ಐ ಶಂಕ್ರಪ್ಪ ಎಲ್,A.S.I. ರವಿ ಪೊಲೀಸ್ ಪೇದೆಗಳಾದ ಎಂ ಎನ್ ಸ್ವಾಮಿ , ಸಂತೋಷ್ ಗುರು ಬಸವನಗೌಡ ಅಬಕಾರಿ ಪಿಎಸ್ಐ ಸಿದ್ದಪ್ಪ ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend