ಕೂಡ್ಲಿಗಿ:ಜೂ28ರಂದು ಶಾಸಕರಿಂದ ವಿವಿದೆಡೆ ಕಾರ್ಯಕ್ರಮಗಳು…!!!

ಕೂಡ್ಲಿಗಿ:ಜೂ28ರಂದು ಶಾಸಕರಿಂದ ವಿವಿದೆಡೆ ಕಾರ್ಯಕ್ರಮಗಳು.-ವಿಜಯನಗರ ಜಿಲ್ಲೆ ಕೂಡ್ಲಿಗಿ ಕ್ಷೇತ್ರದಲ್ಲಿ ಜೂ28 ಸೋಮವಾರ, ಶಾಸಕ ಎನ್.ವೈ.ಗೋಪಾಲಕೃಷ್ಣರವರು ಕೂಡ್ಲಿಗಿ ತಾಲೂಕಿನ ಗ್ರಾಮೀಣ ಭಾಗಗಳಿಗೆ ತೆರಳಲಿದ್ದಾರೆ.
ಅವರು ಕಾನಾಮಡಗು ಹಾಗೂ ಹೊಸಹಳ್ಳಿಯಲ್ಲಿ ಕೆಲ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಹಾಗೂ ಕೂಡ್ಲಿಗಿ ಪಟ್ಟಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.


ಬೆಳಿಗ್ಗೆ 11:30ಕ್ಕೆ ಕಾನಮಡಗು ಶ್ರೀಶರಣಬಸವೇಶ್ವರ ಮಠಕ್ಕೆ ಭೆಟ್ಟಿ,
ಮಧ್ಯಾಹ್ನ 12ಕ್ಕೆ ಹೊಸಹಳ್ಳಿಯಲ್ಲಿ 25ಲಕ್ಷ₹ ವೆಚ್ಚದ ಗ್ರಾಮ ಪಂಚಾಯ್ತಿ ಕಟ್ಟಡದ ಅಡಿಗಲ್ಲು ಸಮಾರಂಭ, 12:20ಕ್ಕೆ ಹೊಸಹಳ್ಳಿಯಲ್ಲಿ 25ಲಕ್ಷ₹ ವೆಚ್ಚದ ಗ್ರಂಥಾಲಯ ಕಟ್ಟದ ಅಡಿಗಲ್ಲು ಸಮಾರಂಭ, 1ಗಂಟೆಗೆ ಕೂಡ್ಲಿಗಿ ಪಟ್ಟಣದಲ್ಲಿ ಕೃಷಿ ಅಭಿಯಾನ ವಾಹನಕ್ಕೆ ಚಾಲನೆ, 1:10ಕ್ಕೆ ಕೂಡ್ಲಿಗಿ ಪಟ್ಟಣದಲ್ಲಿ 106 ಲಕ್ಷ₹ ವೆಚ್ಚದ ಕೃಷಿ ಇಲಾಖಾ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ,1:20ಕ್ಕೆ ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನದಿಂದ ಪ್ರವಾಸಿ ಮಂದರ ವರೆಗೆ ಮೆರವಣಿಗೆ,
2ಕ್ಕೆ ಪ್ರವಾಸಿಮಂದಿರದ ಆವರಣದಲ್ಲಿ “ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿ”ಯಿಂದ ಶಾಸಕರಿಗೆ, ಅಭಿನಂದನಾ ಸಮಾರಂಭ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ.ನಂತರ
ಡಿಪ್ಲೋಮ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮತ್ತು ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಿದ್ದಾರೆ.ನಂತರ ಪತ್ರಿಕಾ ಗೋಷ್ಠಿಯಲ್ಲಿ ನಡೆಸಲಿದ್ದಾರೆಂದು ಶಾಸಕರ ಆಪ್ತ ಸಹಾಯಕ ಬಿ.ಶ್ರೀಕಾಂತ ತಿಳಿಸಿದ್ದಾರೆ.

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend