ಶಾಸಕ ಎಂ.ಎಸ್.ಸೋಮಲಿಂಗಪ್ಪ,ಅವರಿಂದ ಸಿ.ಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ.

ಶಾಸಕ ಎಂ.ಎಸ್.ಎಸ್. ಅವರಿಂದ ಸಿ.ಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ.
ಕಲ್ಯಾಣ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ.ಗ್ರಾಮ ಪಂಚಾಯಿತಿ ಎದುರಿಗೆ 4ನೇ ವಾರ್ಡನಲ್ಲಿ ಪ್ರಭಾಕರಗೌಡರ ಮನೆಯ ಹತ್ತಿರ ರಾಜ್ಯ ಹೆದ್ದಾರಿಯಿಂದ ಬುಡ್ಗ ಜಂಗಮ ಕಾಲೋನಿಯವರಿಗೆ ಸಿಮೆಂಟ್ ಕಾಂಕ್ರೀಟ್ ರಸ್ತೆಯ ಕಾಮಗಾರಿ ನಿರ್ಮಾಣಕ್ಕೆ ಮಾನ್ಯ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪನವರು ಭೂಮಿಪೂಜೆ ಕಾರ್ಯಕ್ರಮವನ್ನು ನೇರವೆರಿಸಿದರು.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಅನುದಾನದಲ್ಲಿ ಸುಮಾರು 100 ಮೀಟರ್ ಸಿಸಿ ರಸ್ತೆ ಮತ್ತು 160 ಮೀಟರ್ ಚರಂಡಿ. ಒಟ್ಟು ಅಂದಾಜು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೆಲಸವನ್ನು ಮಾಡುತ್ತೆವೆ ಎಂದು ಗುತ್ತಿಗೆದಾರದ ಶ್ರೀನಿವಾಸ ಅವರು ತಿಳಿಸಿದರು.ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕರ ಜೊತೆಗೆ ತಾಲೂಕು ಪಂಚಾಯತ್ ಸದಸ್ಯರಾದ ವೈ ಶಂಕ್ರಪ್ಪ.ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಣ್ಣ.ಕುರುಬರ ರಾಮ. ವೈ ಅಂಬಣ್ಣ.ಬಿಜೆಪಿ ಮುಖಂಡರುಗಳಾದ ಶೇಕಣ್ಣ(ಅಂಗೈಯ್ಯ).ಶಿವರೆಡ್ಡಿಗೌಡ. ಕೆಂಚ್ಚನಗುಡ್ಡ ಸೀತಾರಾಮರಾಜ್. ವಾಸಪ್ಪನವರ ಈರಯ್ಯ.ಶೇಕ್ಷಾವಲಿ. ಉಡೆಗೋಳ ಕಾಜಪ್ಪ.ಹೊಳಗುಂದಿ ಸಿದ್ದಪ್ಪ.ಕಾಕೇರು ಬಸಪ್ಪ.ಯುವ ಮುಖಂಡರಾದ ಕಾಕೇರು ವೀರೇಶ್.ಬುಳ್ಳಕನವರ ವೀರಭದ್ರ.ಗ್ರಾಮ ಪಂಚಾಯಿತಿ ಕರವಸೂಲಿಗಾರ ನಾಗೇಂದ್ರ. ಸಿಬ್ಬಂದಿ ವಿ ರೇವಣ್ಣ. ಇನ್ನೂ ಕೆಲವರು ಉಪಸ್ಥಿತರಿದ್ದರು.ಪಿಡಿಓ ರವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು..

ವರದಿ ವೀರೇಶ್.ಪಿ ಹಳೇಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend