ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯನವರ ಆದೇಶದ ಮೇರೆಗೆ ಸರಕಾರಿ ಆಸ್ಪತ್ರೆಯಲ್ಲಿ “ಅನ್ನ ಸಮರ್ಪಣಾ ” ಕಾರ್ಯಕ್ರಮ.!!

ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣದಲ್ಲಿ (ಜೂ.5) ಇಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯನವರ ಆದೇಶದ ಮೇರೆಗೆ ನಾಯಕನಹಟ್ಟಿ ಸರಕಾರಿ ಆಸ್ಪತ್ರೆಯಲ್ಲಿ “ಅನ್ನ ಸಮರ್ಪಣಾ ” ಕಾರ್ಯಕ್ರಮವನ್ನು ಪ್ರತಿ ದಿನ ಮದ್ಯಾಹ್ನ 1 – 2 ಗಂಟೆಗೆ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೆ, ರೋಗಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಹಾಗೂ ಮುರಾರ್ಜಿ ಶಾಲೆಯ ಕೊವಿಡ್ ಕೇಂದ್ರಕ್ಕೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ. ಬಿ.ಯೋಗೇಶ್ ಬಾಬು ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಗೌಡ, ಗೌಡಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಂಗಣ್ಣ, ಗುಂತಕೋಲಮ್ಮಹಳ್ಳಿ ಜಯಣ್ಣ, ಮಹಾಂತೇಶ್, ಗೌಡಗೆರೆ ಜಿ.ತಿಪ್ಪೇಶ್, ಯುವಕಾಂಗ್ರೆಸ್ ಮುಖಂಡರಾದ ಮಧು, ನವೀನ್, ತಿಪ್ಪೇಶ್ ಮುಂತಾದವರು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend