ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ…!!!

ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್‌ ನಗರದಲ್ಲಿ,ಅಲ್ಲಿಯ ನಿವಾಸಿಗಳು ಹಾಗೂ ಕೂಡ್ಲಿಗಿ ಠಾಣೆಯ ಪೊಲೀಸ್ ಪೇದೆ ಹಾಗೂ ಯುವ ಸಾಹಿತಿಗಳಾದ ಗಂಟಿ ರಾಘವೇಂದ್ರ ರವರು.ತಮ್ಮ ತಂದೆ ದಿವಂಗತ ಬಿ.ಮರಿಯಪ್ಪನರವ ಸ್ಮರಣಾರ್ಥವಾಗಿ,ತಮ್ಮ ಕುಟುಂಬ ಸದಸ್ಯರೊಡಗೂಡಿ ಅಂಬೇಡ್ಕರ್‌ ನಗರದ ವಾಸಿಗಳಿಗೆ.ಆಹಾರ ಸಾಮಾಗ್ರಿ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಾಕ್ ಡೌನ್ ಅಸಕ್ತರನ್ನು ಎಲ್ಲಾರೀತಿಯಲ್ಲಿ ಇನ್ನಷ್ಟು ನಿತ್ರಾಣಗೊಳಿಸಿದ್ದು,ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ನೆರವಾಗಿ ಮಾನವೀಯತೆ ತೋರಬೇಕಿದೆ.ತಾವು ತಮ್ಮ ತಂದೆಯವರ ಸ್ಮರಣಾರ್ಥವಾಗಿ ತಮ್ಮ ಅಳಿಲು ಸೇವೆಯನ್ನು ಮಾಡುತ್ತಿರುವುದಾಗಿ ರಾಘವೇಂದ್ರ ತಿಳಿಸಿದರು.ಕಾರ್ಮಿಕರಿಗೆ,ಹಮಾಲರಿಗೆ,ರೈತ ಕಾರ್ಮಿಕರಿಗೆ, ಮಹಿಳೆಯರಿಗೆ, ಅವರೊಂದಿಗೆ ಅವರ ಮಡದಿ ಪುಷ್ಪಲತಾ,ಮಕ್ಕಳಾದ ಅನನ್ಯ ಹಾಗೂ ಅಮಿತ್ ಮತ್ತು ಕುಟುಂಬ ಸದಸ್ಯರು ಇದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend