ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕು ಕಣಕುಪ್ಪೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಫೆಬ್ರವರಿ 20 ರಂದು ಗ್ರಾಮ ವಾಸ್ತವ್ಯ ಮಾಡಲಿದ್ದು ಇದರ ಪೂರ್ವಭಾವಿಯಾಗಿ ಗ್ರಾಮದಲ್ಲಿನ ಕುಂದುಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಲಾಗಿದೆ. ಫೆಬ್ರವರಿ 10 ರಂದು ಉಪವಿಭಾಗಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿದ್ದರು. ಇದರಲ್ಲಿ ಬಸ್ವ್ಯವಸ್ಥೆ, ದಾರಿ ವ್ಯವಸ್ಥೆ, ಸೇತುವೆ ನಿರ್ಮಾಣ, ಸ್ಮಶಾನಕ್ಕೆ ಜಮೀನು ಮಂಜೂರಾತಿ, ಸಮುದಾಯ ಭವನ, ಪಹಣಿ ತಿದ್ದುಪಡಿ, ಕೃಷಿ ಉಪಕರಣಗಳ ಬೇಡಿಕೆ, ಗ್ರಾಮದ ರಸ್ತೆ, ಚರಂಡಿ ದುರಸ್ಥಿ ಮತ್ತು ಆಶ್ರಯ ಮನೆಗಳ ಮಂಜೂರಾತಿಗೆ ಸಂಬಂಧಿಸಿದ ಅರ್ಜಿಗಳು ಸ್ವೀಕೃತವಾಗಿವೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
