ಅಕ್ರಮ ಮರಳುಹೊಂದಿದ್ದ ಟ್ರಾಕ್ಟರ್ ವಶಕ್ಕೆ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಅಕ್ರಮ ಮರಳುಹೊಂದಿದ್ದ ಟ್ರಾಕ್ಟರ್ ವಶಕ್ಕೆ*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಟ್ರಾಕ್ಟ್ ರ್ ನ್ನು,ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ ಅದನ್ನು ಠಾಣಾ ಮುಂಭಾಗದಲ್ಲಿರಿಸಲಾಗಿದೆ.ಮರಳು ತುಂಬಿದ್ದ ಟ್ರಾಕ್ಟ್ ರ್ ಗೆ ಕೆಲ ಭಾಗದಲ್ಲಿ ನಂರ್ ಪ್ಲೇಟ್ ಇಲ್ಲವಾಗಿದೆ.ಕೂಡ್ಲಿಗಿ ವ್ಯಾಪ್ತಿಯ ಕೆಲವೆಡೆಗಳಲ್ಲಿ ಇದೆಲ್ಲಾ ಸಹಜವಾಗಿದೆ, ಟ್ರಾಕ್ಟರ್ ನ್ನು ಸೋಮವಾರದಂದು ರಾತ್ರಿ ಮರಳು ಸಾಗಿಸುತ್ತಿದ್ದಾಗ ಕೂಡ್ಲಿಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಠಾಣಾ ಮುಂಭಾಗದಲ್ಲಿಯೇ ರಸ್ಥೆಗೆ ಹೊಂದಿಕೊಂಡಂತೆ ಮರಳು ತುಂಬಿರುವ ಟ್ರಾಕ್ಟ್ ರ್ ನ್ನು ನಿಲ್ಲಿಸಲಾಗಿದೆ,

*ಮಾಹಿತಿ ಗುಪ್ತ್ ಗುಪ್ತ್*-ಅಪಘಾತ ಹಾಗೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲ,ಠಾಣಾ ವ್ಯಾಪ್ತಿಯಲ್ಲಿ ಜರುಗಿದ ಯಾವುದೇ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಕೇಳಿದಲ್ಲಿ. ಸಂಬಂಧಿಸಿದ ಠಾಣಧಿಕಾರಿಗಳು ಮಾಹಿತಿ ನೀಡುತ್ತಿಲ್ಲ,ಪೊಲೀಸರ ಈ ಗುಪ್ತ ನಡೆ ಕೆಲ ಪ್ರಾಮಾಣಿಕ ಪತ್ರಕರ್ತರಲ್ಲಿ ಹತ್ತು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ದೂರು ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ,ಅಗತ್ಯಮಾಹಿತಿ ನೀಡಲು ವಿನಾಕಾರಣ ಹಿಂದೇಟು ಹಾಕುತ್ತಿರುವುದು ವರದಿಗಾರರಲ್ಲಿ ತೀವ್ರ ಬೇಸರ ಮೂಡಿಸಿದೆ.

ಈ ಕಾರಣಕ್ಕಾಗಿ

ವರದಿಗಾರರು ಅಗತ್ಯ ವರದಿಗಾಗಿ ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಪಡೆಯುವುದು ಅನಿವಾರ್ಯ,ಕೆಲ ಪ್ರಾಮಾಣಿಕ ಪೊಲೀಸರಿಂದ ಅಥವಾ ವಿಶ್ವಾಸನೀಯ ಮೂಲಗಳಿಂದ ದಾಖಲು ಸಂಗ್ರಹಿಸಿಕೊಳ್ಳಲು ಹೆಣಗಬೇಕಿದೆ.ತಡವಾದರೂ ನಿಖರ ಮಾಹಿತಿ ಪಡೆದು ವರದಿ ಮಾಡಲಾಗುತ್ತಿದೆ, ಸಮಾಧಾನಕರ ಸಂಗತಿ ಏನೆಂದರೆ ಕೆಲವೇ ಕೆಲ ಪ್ರಾಮಾಣಿಕ ಪೊಲೀಸರು, ಪ್ರಾಮಾಣಿಕ ಪತ್ರಕರ್ತರಿಗೆ ಮಾತ್ರ ನಿಖರ ಮಾಹಿತಿ ನೀಡೋ ಮೂಲಕ ಎದೆಗಾರಿಕೆ ತೋರುತ್ತಿದ್ದಾರೆ. ಅದಕ್ಕಾಗಿ ನಮ್ಮಿಂದ ಅವರಿಗೊಂದು ಹ್ಯಾಟ್ಸಾಪ್..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend