ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 14.2.2021. ವಿಜಯನಗರ* *ಜಿಲ್ಲೆ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ತಾಂಡ*
*ಸಂತ ಶ್ರೀ ಸೇವಾಲಾಲ್ ಗುರುಗಳ ಜಯಂತೋತ್ಸವ ಆಚರಣೆ ಸಮಾರಂಭ*
*ತಾಲೂಕಿನ ಪೂಜಾರಹಳ್ಳಿ ತಾಂಡದಲ್ಲಿ ಈ ದಿನ ಶ್ರೀಶ್ರೀಶ್ರೀ ಜಗದ್ಗುರು ಸಂತ ಸೇವಾಲಾಲ್ ರವರ 282 ನೇ ಜಯಂತೋತ್ಸವ ನ್ನು ಮಾಡಲಾಯಿತು.* ಈ ಜಯಂತೋತ್ಸವದ ಆಚರಣೆಯಲ್ಲಿ ಶ್ರೀ ಶಿವಪ್ರಕಾಶ್ ಸ್ವಾಮೀಜಿ ಪಾಲ್ಗೊಂಡಿದ್ದರು ಇವರು ಈ ಸಮಾರಂಭದಲ್ಲಿ ಮಾತನಾಡಿ ಬಂಜಾರ ಬುಡಕಟ್ಟು ಸಮುದಾಯದ ಕುಲ ಸಂತ ಶ್ರೀ ಜಗದ್ಗುರು ಶ್ರೀ ಸೇವಾಲಾಲ್ ಗುರುಗಳು ಒಬ್ಬ ಪವಾಡ ಪುರುಷ ಎಂದು ಹೇಳಿದರು ಲೋಕಕಲ್ಯಾಣಕ್ಕಾಗಿ ದೇಶದಲ್ಲಿ ಅನೇಕ ಸಾಧುಸಂತರು ಶರಣರು ಪವಾಡ ಪುರುಷರು ಜನಿಸಿದ್ದಾರೆ. ಸಮಾಜದಲ್ಲಿ ಮೌಢ್ಯತೆ ಕಂದಾಚಾರ ತೊಡೆದುಹಾಕಲು ಶ್ರಮಿಸಿದವರಲ್ಲಿ ಸಂತಶ್ರೀ ಸೇವಾಲಾಲ್ ಕೂಡ ಒಬ್ಬರಾಗಿದ್ದಾರೆ ಎಂದರು ಬುಡಕಟ್ಟು ಸಮುದಾಯದಲ್ಲಿ ಜನಿಸಿದ್ದರೂ ಕೂಡ ಸಮುದಾಯದ ರಕ್ಷಣೆಗೆ ನಿಂತ ಮಹನೀಯರು ಇವರು ಎಂದು ಸ್ಮರಿಸಿದರು ಈ ಸಂದರ್ಭದಲ್ಲಿ ಲಾಲ್ ಸಿಂಗ್ ನಾಯ್ಕ್ . ಸ್ವಾಮಿ ನಾಯ್ಕ್. ಶ್ಯಾಮ ನಾಯ್ಕ್. ಶಿವು ನಾಯ್ಕ. ಪೂಜಾರಹಳ್ಳಿ ತಂಡದ ಮುಖಂಡರು ಊರಿನ ದೈವ ಸ್ಥರು ವಿವಿಧ ತಂಡಗಳಿಂದ ಆಗಮಿಸಿದ್ದ ಪ್ರಮುಖ ಮುಖಂಡರು ಸರ್ಕಾರಿ ನೌಕರರು ಮಹಿಳೆಯರು ಸೇರಿದಂತೆ ಉಪಸ್ಥಿತರಿದ್ದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
