ಕಣ್ಣಿದ್ದು ಕುರುಡಾಗಿರುವ ಬಳ್ಳಾರಿ ಮಹಾನಗರ ಪಾಲಿಕೆ ಆಡಳಿತವಸ್ಥೆ..

ವರದಿ. ಎಂ. ಎಲ್, ವೆಂಕಟೇಶ್ ಬಳ್ಳಾರಿ

“ಬಳ್ಳಾರಿ ಮಹಾನಗರ ಪಾಲಿಕೆಯ ನಿರ್ಲಕ್ಷೆ”
ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಮೀನಾಕ್ಷಿ ವೃತ್ತದಲ್ಲಿ ಕೆ.ಸಿ. ರಸ್ತೆಗೆ ಹೋಗುವ ರಸ್ತೆಯ ಎಡ ಬದಿಗೆ ನೇ ದಾರಿ ಹೋಕರು ಮೂತ್ರವಿಸರ್ಜನೆ ಮಾಡುತ್ತಿರುವುದು,ಸಾರ್ವ ಜನಿಕರಿಗೆ ನೂರಾರು ದಾರಿ ಹೋಕರು ಮೂತ್ರ ವಿಸರ್ಜನೆ ಮಾಡಿ ಮಾಡಿ,ರಸ್ತೆಯ ವರೆಗೂ ಮೂತ್ರ ಹರಿದು ಬರುತ್ತಿದೆ.ಈ ಸ್ಪಾಟ್ ಪಕ್ಕದಲ್ಲೇ , ಅನೇಕ ಚಿಕನ್ ಕಬಾಬ್ಬಂಡಿಗಳು ಸಾಲಾಗಿ ಇವೆ.ಆದರೆ ವಿಪರ್ಯಾಸವೇನೆಂದರೆ ಈ ದುರ್ನಾಥದಲ್ಲೇ ಚಿಕೆನ್ ಕಬಾಬ್ ತಿಂದು ಹೋಗುತ್ತಿದ್ದಾರೆಅಮಾಯಕ ಜನರು.

ಈ ರಸ್ತೆಯಲ್ಲಿ ಅನೇಕ ಮಹಿಳೆಯರು ,ಮೂಗು ಮುಚ್ಚಿಕೊಂಡು ,ತಲೆ ತಗ್ಗಿಸಿಕೊಂಡು ಉಸಿರನ್ನ ಬಿಗಿಹಿಡಿದು ಇಲ್ಲಿಂದ ಹೋಗಬೇಕಿದೆ.ಸ್ಪಾಟ್ ಪಕ್ಕದಲ್ಲೇ ಚರಂಡಿ ಇದ್ದು,ಪ್ರಯೋಜನೆ ಇಲ್ಲದಂತಾಗಿದೆ.

ಎದುರಿಗೆಅಂಗಡಿಗಳಿದ್ದು,ಅಂಗಡಿ ಮಾಲೀಕರು ಈ ದುರ್ನಾತ ದಿಂದ ಬೇಸತ್ತಿದ್ದಾರೆ.ಎದುರಿಗೆನೇ ನಿಸರ್ಗ ಹೋಟೆಲಿದ್ದು,
ಬೆಂಗಳೂರು ರಸ್ತೆ ಯಲ್ಲಿ ಸಾವಿರಾರು ಜನರುಉಸಿರು ಕಟ್ಟಿ ಸಂಚರಿಸುತ್ತಿದ್ದು,ಇಂಥ ಒಂದು ದುರ್ನಾತದ ಸ್ಪಾಟ್
ಗೆ ಮಹಾನಗರ ಪಾಲಿಕೆಯವರು ,ಈ ದುರ್ನಾತ ದಿಂದ
ನಾಗರೀಕರನ್ನು ಯಾವಾಗ ಮುಕ್ತ ಗೊಳಿಸುವರೊ,ಈ ಸ್ಪಾಟಿಗೆ ಯಾವಾಗ ಪರ್ಯಾಯ ವ್ಯವಸ್ಥೆ ಮಾಡುವರೊ
ಗೊತ್ತಿಲ್ಲ, ಎಂದು ಬಳ್ಳಾರಿ ನಾಗರೀಕರ ಕೂಗು.
ಮಹಾನಗರ ಪಾಲಿಕೆ ಯಾವರೀತಿ ಸ್ಪಂಧಿಸುವುದೋ ?,
ಮಹಾನಗರಪಾಲಿಕೆ ಬಳ್ಳಾರಿಯಲ್ಲಿಯೂ ಇದೆ, ಎಂದು ನಾಗರೀಕರಿಗೆ ತೋರಿಸಿ ಕೊಡುತೋ ಕಾದು ನೋಡೋಣ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend