ಕೂಡ್ಲಿಗಿ:ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾನವೀಯತೆ ಮಾಯವಾಗಿದೆ -ಪಪಂ ಪುರ್ಯಾನಾಯ್ಕ್ ಆಕ್ರೋಶ….!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಆಸ್ಪತ್ರೆಯಲ್ಲಿ ಮಾನವೀಯತೆ ಮಾಯವಾಗಿದೆ-ಪಪಂ ಸದಸ್ಯ ಪೂರ್ಯಾನಾಯ್ಕ ಆಕ್ರೋಶ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ, ಮಾನವೀಯತೆ ಮಾಯವಾಗಿದೆ ಸೋಂಬೇರಿಗಳಿಂದ ಮತ್ತು ಭ್ರಷ್ಠರಿಂದಾಗಿ.ಆಸ್ಪತ್ರೆಯು ಐಸಿಯು ನಲ್ಲಿರುವ ಕ್ಯಾನ್ಸ್ ರ್ ರೋಗಿಯಂತಾಗಿದೆ ಎಂದು,ಪಟ್ಟಣ ಪಂಚಾಯ್ತಿ ಸದಸ್ಯ ಪೂರ್ಯಾನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಸೀಜರಿನ್ ಅನಿವಾರ್ಯ ಎನ್ನೋ ನೆಪ.!?*
ಅವರು ನಿನ್ನೆ ಜರುಗಿದ ಘಟನೆಯೊಂದನ್ನ ವಿವರಿಸಿದರು,ಬಡತನದ ಬೇಗೆಯಲ್ಲಿರುವ ಮೂವರು ಗ್ರರ್ಭಿಣಿಯರು.ಹೆರೆಗೆ ನೋವು ಕಾಣಿಸಿದ ಹಿನ್ನಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ,ಆದರೆ ಆಸ್ಪತ್ರೆಯ ವೈದ್ಯರು ಮಾತ್ರ ಹೆರಿಗೆಗೆ ಸಿಜರಿನ್ ಮಾಡಿಸುವುದು ಅನಿವಾರ್ಯ,ಅದಕ್ಕಾಗಿ ಅಗತ್ಯ ಇರೋ ಆಧುನಿಕ ಸಲಕರಣಿಗಳಿಲ್ಲ.ಕಾರಣ ಬಳ್ಳಾರಿಯ ವಿಮ್ಸ್ ಗೆ ತೆರಳಿ ಇಲ್ಲವೇ ಖಾಸಗೀ ಆಸ್ಪತ್ರೆಗೆ ದಾಖಲ‍ಾಗಿ ಎಂದು ಹೇಳಿದ್ದಾರಂತೆ,ಕಡು ಬಡತನದಲ್ಲಿರುವ ಕಾರ್ಮಿಕ ರೈತ ಮಹಿಳೆಯರು ಖಾಸಗೀ ಆಸ್ಪತ್ರೆಯಲ್ಲಿಯ ಚಿಕಿತ್ಸೆಗೆ. ವೆಚ್ಚ ಭರಿಸಲಾಗದಂತಹ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಂತಹ ಕಡುಬಡವರಿಗೆ ಅಗತ್ಯ ನೆರವು ಹಾಗೂ ಶುಶ್ರೂಷೆ ನೀಡಬೇಕಾಗಿದ್ದ ವೈದ್ಯರು,ತುರ್ತು ಪರಿಸ್ಥಿತಿಯ ತುಂಬು ಗರ್ಭಿಣಿಯರಿಗೆ ಸಿಬ್ಬಂದಿ ವರ್ಗ.ಬಳ್ಳಾರಿಗೆ ತೆರಳಿ ಇಲ್ಲಿ ಯಾವುದೇ ಸಲಕರಣೆಗಳಿಲ್ಲ ಎಂದು ಅಸಹಕಾರ ವ್ಯಕ್ತಪಡಿಸಿದ್ದಾರೆ.ಅನಿವಾರ್ಯವಾಗಿ ತುಂಬು ಗರ್ಭಿಣಿಯರು,ತುರ್ತು ಪರಿಸ್ಥಿತಿಯ ಹಿನ್ನಲೆಯಲ್ಲಿರೋ ಕಾರಣ ಹತ್ತಿರದ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ.ದಾಖಲು ಆಗೋ ಸಂದರ್ಭದಲ್ಲಿಯೇ ಅವರಿಗೆ ಸಹಜ ಹೆರಿಗೆ ಆಗಿದೆ,ಇದರಿಂದಾಗಿ ಅವರು ಖಾಸಗೀ ಆಸ್ಪತ್ತೆಗೆ ಭಾರೀ ಮೊತ್ತವನ್ನು ಭರಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸಹಜ ಹೆರಿಗೆಯಾದ ಸಂತೋಷದಲ್ಲಿದ್ದ ಅವರಿಗೆ ಅದು ಕ್ಷಣ ಮಾತ್ರದಲ್ಲಿ ಮಾಯವಾಯಿತು,ಖಾಸಗೀ ಅಸ್ಪತ್ರೆಗೆ ಭಾರೀ ಮೊತ್ತದ ಹಣ ತುಂಬ ಬೇಕಾಗಿರುವ ದುಸ್ಥಿತಿಯ ಗುಮ್ಮನಿಂದಾಗಿ ಭಯ ಭೀತರಾಗಿದ್ದಾರೆ.
ಇದು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಕೆಲ ವೈದ್ಯರ ಹಾಗೂ ಕೆಲ ಸಿಬ್ಬಂದಿಯ ಅಮಾನವೀಯತೆಗೆ ಸಾಕ್ಷಿಯಾಗಿದೆ ಎಂದು, ಪಪಂ ಸದಸ್ಯ ಪೂರ್ಯಾನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಂಗಳಾ ಲಕ್ಷೋಪ ಲಕ್ಷ ಹಣ ಸಂಬಳ ಕೊಟ್ಟು,ಸರ್ಕಾರ ಸಾರ್ವಜನಿಕರ ಸೇವೆ ಮಾಡಲೆಂದೇ ಇವರನ್ನ ಸಾಕುತ್ತಿದೆ.ಅದರ ನಿಯತ್ತು ಕೆಲ ವೈದ್ಯರಿಗಿಲ್ಲ ಹಾಗೂ ಕೆಲ ಸಿಬ್ಬಂದಿಗಿಲ್ಲ ಎಂದು ಅವರು ಕಿಡಿಕಾರಿದ್ದಾರೆ,ಜಿಲ್ಲಾಧಿಕಾರಿಗಳು ಇಲ್ಲಿರುವ ಸೋಂಬೇರಿ ಸಿಬ್ಬಂದಿಯನ್ನ ಪತ್ತೆಹಚ್ಚಿ, ಶೀಘ್ರವೇ ಅವರನ್ನ ಬದಲಿಸಬೇಕು ಎಂದು ಅವರು ಈ ಮೂಲಕ ಒತ್ತಾಯಿಸಿದ್ದಾರೆ.ಸಹಜ ಹೆರಿಗೆ ಆಗುವುದನ್ನೂ ಕೂಡ ಬಳ್ಳಾರಿ ವಿಮ್ಸ್ ಗೆ ತೆರಳುವಂತೆ ಸೂಚಿಸುತ್ತಿದ್ದಾರೆ,ಕಾರಣ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು. ಪಪಂ ಸದಸ್ಯ ಪೂರ್ಯನಾಯ್ಕ ಸೇರಿದಂತೆ ಕೆಲ ಪಪಂ ಸದಸ್ಯರು ಈ ಮೂಲಕ ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.

*ಖಾಸಗೀ ಆಸ್ಪತ್ರೆ ಏಜೆಂಟರಾ.!?*
ಈ ಮೂಲಕ ಕೂಡ್ಲಿಗಿ ಸಾರ್ವಜನಿಕರನ್ನ ಹಾಗೂ ರೋಗಿಗಳನ್ನು,ವಿನಾಕಾರಣ ಅಲೆದಾಡಿಸುವ ಅವ್ಯವಸ್ಥೆ ನಿರ್ಮಾಣವಾಗಿದೆ.ಈ ಮೂಲಕ ಇವರೇ ಖಾಸಗೀ ಆಸ್ಪತ್ರೆಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ,ಕೆಲ ಅರೆಕಾಲಿಕ ಸಿಬ್ಬಂದಿ ಥೇಟ್ ಖಾಸಗೀಯವರ ಏಜೆಂಟರಾಗಿ, ವರ್ಥಿಸುತ್ತಿದ್ದಾರೆಂದು ನೊಂದವರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಅವ್ಯವಸ್ಥೆಯನ್ನ ಸಾರ್ವಜನಿಕ ಆಸ್ಪತ್ರೆಯ ಕೆಲ ಸಿಬ್ಬಂದಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.ಗಂಭೀರ ಖಾಯಿಲೆಗೆ ಚಿಕಿತ್ಸೆ ಮತ್ತು ಹೆರಿಗೆ ಚಿಕಿತ್ಸೆಗಳಿಗೆ ಖಾಸಗೀಯವರೊಂದಿಗೆ,
ಸಿಬ್ಬಂದಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಶಂಕೆ ಅವರ ದುರ್ವರ್ತನೆಯಿಂದ ನಾಗರೀಕರಲ್ಲಿ ಮೂಡಿದೆ.
ಪ್ರಾಮಾಣಿಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು ಅಗತ್ಯ ಶಿಸ್ಥು ಕ್ರಮ ಕೈಗೊಳ್ಳಬೇಕಿದೆ,ಕೆಲ ಸಿಬ್ಬಂದಿಗಳು ಕಳೆದ ಹತ್ತಾರು ವರ್ಷಗಳಿಂದಲೂ ಅಂಡುಗಳಿಗೆ ಅಂಟು ಹಾಕಿಕೊಂಡು ಠಿಕಾಣಿ ಹೂಡಿದ್ದಾರೆ.ಇವರು ತಮ್ಮ ಕರ್ಥವ್ಯ ಮರೆತು ರಾಜಕೀಯ ಪಟಾಲಂಗಳಂತೆ ವರ್ತಿಸುತ್ತಿದ್ದಾರೆ,ತಮಗೆ ಯಾರೂ ಏನೂ ಮಾಡಿಕೊಳ್ಳಕಾಗಲ್ಲ.
ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಎಲ್ಲಾ ವ್ಯವಸ್ಥೆಯನ್ನ ಮಾಡಿದ್ದೀವಿ,
ಜಿಲ್ಲಾವೈದ್ಯಾಧಿಕಾರಿಗಳೇ ನಮ್ಮಪರವಾಗಿದ್ದಂಗೆನೇ..ಎಂಬಿತ್ಯಾದಿಯಾಗಿ.ನಶೆಯಲ್ಲಿ ಬೊಬ್ಬೆ ಹೊಡೆದಿರೋ ವೀಡಿಯೋಗಳು,ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಇದು ಸಾರ್ವಜನಿಕ ಆಸ್ಪತ್ರೆ ಕ್ಯಾನ್ಸ್ ರ್ ಗೆ ತುತ್ತಾಗಿರೋದಕ್ಕೆ ಸಾಕ್ಷಿಯಾಗಿದೆ.ಕೆಲವು ಭ್ರಷ್ಠರಿಂದಾಗಿ ಆಸ್ಪತ್ರೆಗೇ ಕೆಟ್ಟ ಹೆಸರು,ನಿಷ್ಠಾವಂತ ಅಧಿಕಾರಿಗಳಿಗೆ ಹಾಗೂ ವೈದ್ಯರಿಗೆ,ಸಿಬ್ಬಂದಿಯವರಿಗೆ ತೀರಾ ಮುಜಗರ ವನ್ನುಂಟುಮಾಡಿದೆ.
*ಶಾಸಕರು “ಭರ್ಝರಿ ಸರ್ಜರಿ”ಮಾಡಬೇಕಿದೆ*
ಪ್ರಭಾವಿ ರಾಜಕಾರಣಿಗಳ ಹೆಸರೇಳಿಕೊಂಡು ಹತ್ತಾರು ವರ್ಷಗಳಿಂದ,ಇಲ್ಲಿಯೇ ಬೀಡು ಬಿಟ್ಟಿರುವ ಕೆಲ ಬಿಡಾಡಿ ಆರೋಗ್ಯ ಇಲಾಖಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದಾಗಿ.ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಸ್ಥಿತಿಯೇ ತುರ್ತು ನಿಗಾಘಟಕದಲ್ಲಿರಿಸಿರುವ, ಕ್ಯಾನ್ಸರ್ ರೋಗಿಯ ದುಸ್ಥಿತಿಯಂತಾಗಿದೆ.ಶಾಸಕರು ಮನಸ್ಸು ಮಾಡಿ ಅಗತ್ಯ ಆಡಳಿತಾತ್ಮಕ ಚಿಕಿತ್ಸೆ ನೀಡಬೇಕಿದೆ.ಸಾರ್ವಜನಿಕರ ಧಮನಿಯಾಗಿರುವ ಆಸ್ಪತ್ರೆಯನ್ನ ಸುವ್ಯವಸ್ಥೆಗೆ ಶಾಸಕರು ಮನಸ್ಸು ಮಾಡಬೇಕಿದೆ.
ಸೋಂಬೇರಿ ಸಿಬ್ಬಂದಿಗಳನ್ನ ಪತ್ತೆಹಚ್ಚಿ ಶೀಘ್ರವೇ ಇಲ್ಲಿಂದ ತೊಲಗಿಸಬೇಕಿದೆ.ಅಗತ್ಯ ವೈದ್ಯರುಗಳನ್ನು ಮತ್ತು ಅಗತ್ಯ ಸಿಬ್ಬಂದಿಯನ್ನ ನೇಮಿಸುವಂತೆ ಕ್ರಮ ಜರುಗಿಸಬೇಕಿದೆ.
ಅಗತ್ಯ ವೈದ್ಯಕೀಯ ಸಲಕರಣೆಗಳನ್ನ ಔಷಧೀಯ ಸೌಕರ್ಯಗಳನ್ನ ಕಲ್ಪಿಸಿಕೊಡಬೇಕಿದೆ,ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಶೀಘ್ರವೇ ಕಾರ್ಯಗತವಾಗಬೇಕೆಂದು ನಾಗರೀಕರು ಈ ಮೂಲಕ ಶಾಸಕರಾದ ಎನ್.ವೈ.ಗೋಪಾಲಕೃಷ್ಣರವರಲ್ಲಿ ಈ ಮೂಲಕ ಮನವಿ ಮಾಡಿದ್ದಾರೆ.
*ಜಿಲ್ಲಾಧಿಕಾರಿಗಳು ಶಿಸ್ಥು ಕ್ರಮ ಜರುಗಿಸಬೇಕಿದೆ* ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಚಿಕಿತ್ಸೆಯನ್ನ ನೀಡಬೇಕಾಗಿರುವ ಜಿಲ್ಲಾಧಿಕಾರಿಗಳು,ಜನಪರ ಕಾಳಜಿ ವಹಿಸಿ ಶೀಘ್ರವೇ ಅಗತ್ಯ ಶಿಸ್ಥು ಕ್ರಮ ಜರುಗಿಸಬೇಕಿದೆ.ಸೋಂಬೇರಿ ವೈದ್ಯರು ಹಾಗೂ ಸಿಬ್ಬಂದಿಗಳನ್ನ ಪತ್ತೆ ಹಚ್ಚಿ, ಜಿಲ್ಲಾವೈದ್ಯಾಧಿಕಾರಿಗಳು ಕಿಡಿಗೇಡಿ ಸಿಬ್ಬಂದಿಯ ಕಿವಿಹಿಂಡೋ ಧೈರ್ಯ ಮಾಡಬೇಕಿದೆ.
ಈ ಮೂಲಕ ಅವರು ತಮ್ಮ ಪ್ರಾಮಾಣಿಕತೆ,ಕರ್ಥವ್ಯ ನಿಷ್ಠೆ ಮೆರೆಯಬೇಕಿದೆ ಎಂದಿದ್ದಾರೆ ಪಪಂ ಸದಸ್ಯರಾದ ಪೂರ್ಯನಾಯ್ಕ,ಕಾಲ್ಚಟ್ಟಿ ಈಶಪ್ಪ,ಭಾಸುನಾಯ್ಕ.ಸಂಘ ಸಂಸ್ಥೆಗಳ ಮುಖಂಡರು ಹಾಗೂ ನಾಗರೀಕರು. ನಿರ್ಲಕ್ಷಿಸಿದ್ದಲ್ಲಿ ಹೋರಾಟ ಅನಿವಾರ್ಯ ಎಂದಿದ್ದಾರೆ,ಮಹಿಳಾ ಹೊರಾಟಗಾರರು,ರೈತ ಮುಖಂಡರು ಹಾಗೂ ಕಾರ್ಮಿಕ ಮುಖಂಡರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend