ಮೊಳಕಾಲ್ಮೂರು: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ದಿನಾಂಕ ನಿಗದಿ.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ 16 ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಸಂತೆ ಗುಡ್ಡ ಫೆ 9,ತಮ್ಮೇನಹಳ್ಳಿ ಫೆ.10, ಜೆ.ಬಿ.ಹಳ್ಳಿ ಫೆ.11ರಂದು ದಿನಾಂಕ ನಿಗದಿಗೊಳಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ರಾಂಪುರ ಫೆ.9ರಂದು, ಸಿದ್ದಾಪುರ ಫೆ.11, ದೇವ ಸಮುದ್ರ ಫೆ.10ರಂದು ನಿಗದಿಪಡಿಸಲಾಗಿದೆ. ಚುನಾವಣಾಧಿಕಾರಿಯಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕರ್ತವ್ಯ ನಿರ್ವಹಿಸುವರು. ಚಿಕ್ಕೇರಹಳ್ಳಿ ಫೆ.9, ಹಿರೆಕೆರೆಹಳ್ಳಿ ಫೆ.10, ನಾಗಸಮುದ್ರ ಫೆ.11, ಸಹಾಯಕ ನಿರ್ದೇಶಕರು ಬಿಸಿಯೂಟ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಹಾನಗಲ್ ಫೆ.9, ರಾಯಾಪುರ ಫೆ.10ನೇರ್ಲಹಳ್ಳಿ ಫೆ.11ರಂದು ದಿನಾಂಕ ನಿಗದಿಗೊಳಿಸಿದ್ದು, ಸಮನ್ವಯ ಶಿಕ್ಷಣಾಧಿಕಾರಿ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ. ತುಮಕೂರಹಳ್ಳಿ ಫೆ.9, ಕೋನಸಾಗರ ಫೆ.10, ಕೊಂಡ್ಲಹಳ್ಳಿ ಫೆ. 11, ಬಿ.ಜಿ.ಕೆರೆ ಫೆ.12ರಂದು ನಿಗದಿಪಡಿಸಿದ್ದು ಚುನಾ ವಣಾಧಿಕಾರಿಯಾಗಿ ತಾಪಂ ಇಒ ಕರ್ತವ್ಯ ನಿರ್ವಹಿಸಲಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend