ಕಾನಾಮಡುಗು|ಶರಣ ಬಸವೇಶ್ವರ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ…
ಕಾನಾಹೊಸಹಳ್ಳಿ:- ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಶರಣ ಬಸವೇಶ್ವರ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆ ಕಾನಾಮಡುಗು ಕಾಲೇಜಿನ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಎಲ್. ಪಿ. ಸುಭಾಷ್ ಚಂದ್ರ ಬೋಸ್ ಮಾತನಾಡಿ, ಪರಿಸರವು ನಮ್ಮೆಲ್ಲರ ಜೀವನಾಡಿ, ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದು ಮರ ನೆಡುವ ಮೂಲಕ ಪ್ರಕೃತಿಗೆ ಕೃತಜ್ಞತೆ ಸಲ್ಲಿಸಿ, ಹಸಿರು ಭವಿಷ್ಯವನ್ನು ನಿರ್ಮಿಸೋಣ ಎಂದರು. ಇಂದಿನ ಪರಿಸರ ಸಂರಕ್ಷಣೆ, ನಾಳಿನ ಸುಂದರ ಬದುಕಿನ ಭದ್ರತೆಯಾಗಿದೆ. ಪರಿಸರ ದಿನದಂದು ಪ್ರತಿಯೊಬ್ಬರೂ ಒಂದು ಮರ ನೆಟ್ಟು ಭೂಮಾತೆಯ ಋಣ ತೀರಿಸೋಣ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಶ್ರೀ ಮಠದ ಐಮಡಿ ಶರಣಾರ್ಯರು ಮಾತನಾಡಿ, ವಿಶ್ವ ಪರಿಸರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ಪ್ರತಿದಿನ ಪರಿಸರ ಕಾಳಜಿ ವಹಿಸುವ ಮನೋಭಾವ ಬೆಳಸಿಕೊಳ್ಳಬೇಕು. ನೆಟ್ಟ ಸಸಿಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಈ ಸಂಧರ್ಭದಲ್ಲಿ ಬಳ್ಳಾರಿ ಡಯಟ್ ಕಾಲೇಜಿನ ಸಮನ್ವಯ ಸಮಿತಿ ಅದ್ಯಕ್ಷರಾದ ಗೀತಾ, ಸದಸ್ಯರಾದ ಸಾವಿತ್ರಿ, ಶೋಭಾ, ನಾಗರತ್ನಬಾಯಿ ಕಾಲೇಜಿನ ಉಪನ್ಯಾಸಕರಾದ ಕಾಶೀನಾಥ್, ಭದ್ರಪ್ಪ,ಆನಂದಗೌಡ್ರು,ಶರತ್, ಸೇರಿದಂತೆ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
