ಕುಖ್ಯಾತ ಅಂತಾರಾಜ್ಯ ಕಳ್ಳರ ಬಂಧನ.
ಕೊಟ್ಟೂರು: ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂದ್ರ ಪ್ರದೇಶದ ಗುಂತಕಲ್ಲು ಜಿಲ್ಲೆಯ ಭಾಗ್ಯ ನಗರದ ಶಿಕಾರಿ ಮದ್ದಲಟ್ಟಿ ಮದನ್ , ಗಣೇಶ, ಬಾಲಚಂದ್ರ ಹಾಗೂ ಪಗಲಿ ಅಶೋಕ ನಾಲ್ವರು ಬಂಧಿತ ಆರೋಪಿಗಳಾಗಿದ್ದಾರೆ.
ಮನೆಗಳ್ಳತನ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜಾಲ ಬೀಸಿ ಆರೋಪಿಗಳನ್ನು ಬಂಧಿಸಿ ರೂ.6 ಲಕ್ಷ ಬೆಲೆ ಬಾಳುವ 50 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಹಾಗೂ ರೂ. 20 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಡಿ.ದುರುಗಪ್ಪ ಇವರ ನೇತೃತ್ವದಲ್ಲಿ ಪಿ.ಎಸ್.ಐ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿ ಶಂಕ್ರಪ್ಪ, ದೊಡ್ಡಬಸವನಗೌಡ, ಸಿದ್ದೇಶ್, ಎಚ್.ಬಸವರಾಜ್, ಶಶಿಧರ್, ಕುಮಾರ ಪತ್ರಿ, ಎಂ.ಎಂ.ಶಶಿಧರ್, ಪಿ.ರಮೇಶ್, ಚಿದಾನಂದ ಕಾರ್ಯಾಚರಣೆ ತಂಡದಲ್ಲಿದ್ದವರು.
ಈ ಕಾರ್ಯಚರಣೆಗೆ ಎಸ್ಪಿ ಎಸ್.ಜಾಹ್ನವಿ, ಎ.ಎಸ್ಪಿ.ಜಿ.ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಚಿತ್ರ – ಕೊಟ್ಟೂರು ಪೊಲೀಸ್ ಠಾಣೆಯ ಪೊಲೀಸರು ಬೀಗ ಹಾಕಿದ ಮನೆಗಳ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ರೂ.6 ಲಕ್ಷ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಹಾಗೂ ರೂ. 20 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
