ಬೆಂಕಿಗೆ ಮೇವಿನ ಬಣವಿಗಳು ಅಹುತಿ.
ಕೊಟ್ಟೂರು: ಪಟ್ಟಣಕ್ಕೆ ಸಮೀಪದ ಹ್ಯಾಳ್ಯಾ ಗ್ರಾಮದ ಹೊರವಲಯದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಏಂಟತ್ತು ಕಣಗಳಲ್ಲಿ ಸಂಗ್ರಹಿಸಿದ್ದ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ.
ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಸ್ಥಳದಲ್ಲಿದ್ದ ಗ್ರಾಮಸ್ಥರು ಕಣಗಳಲ್ಲಿ ಕಟ್ಟಿದ್ದ ಜಾನುವಾರುಗಳನ್ನು ಹಾಗೂ ಟ್ರಾಕ್ಟರ್ ಹಾಗೂ ಇತರೆ ಯಂತ್ರೋಪಕರಣಗಳನ್ನು ಬೇರೆ ಕಡೆ ಸಾಗಿಸಿದರ ಫಲವಾಗಿ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.
ಕೂಡಲೇ ಕೊಟ್ಟೂರು ಹಾಗೂ ಕೂಡ್ಲಿಗಿ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸಲು ಮುಂದಾದವು. ತಹಶೀಲ್ದಾರ್ ಜಿ.ಕೆ.ಅಮರೀಶ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮಾತನಾಡಿ, ಹಾನಿಯಾದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಗ್ರಾಮ ಲೆಕ್ಕಾಧಿಕಾರಿಗೆ ಸೂಚಿಸಿದ್ದು ನಷ್ಟಕ್ಕೀಡಾದ ರೈತರಿಗೆ ಆರ್ಥಿಕ ನೆರವು ಹಾಗೂ ಜಾನುವಾರುಗಳಿಗೆ ಮೇವು ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬೇಸಿಗೆ ಕಾಲಕ್ಕೆ ಬೇಕೆಂದು ಸಂಗ್ರಹಿಸಿದ್ದ ಮೇವು ಸುಟ್ಟಿರುವುದರಿಂದ ಕೂಡಲೇ ಸರ್ಕಾರ ನಷ್ಟಕ್ಕಿಡಾದ ರೈತರಿಗೆ ನೆರವು ನೀಡಬೇಕೆಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಭರಮಣ್ಣ ಹಾಗೂ ರೈತರು ಒತ್ತಾಯಿಸಿದ್ದಾರೆ.
ಚಿತ್ರ – ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಏಂಟತ್ತು ಕಣಗಳಲ್ಲಿ ಸಂಗ್ರಹಿಸಿದ್ದ ಮೇವು ಬೆಂಕಿಗೆ ಆಹುತಿಯಾಗಿರುವುದು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
