ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ, ಚೀಲದಲ್ಲಿ ಪೀಸ್, ಪೀಸ್ ಮಾಡಿ ಮನೆಯ ಹಿಂಭಾಗದಲ್ಲೇ ಎಸೆದಿದ್ದ ದುರುಳರು.!
ತುಂಡು, ತುಂಡಾಗಿ ಕತ್ತರಿಸಿ ಚೀಲದಲ್ಲಿ ಬಾಡಿ ತುಂಬಿ ಹೂತಿಟ್ಟ ಕಿರಾತಕರು
ಹಡಗಲಿ : ಯುವಕನ ಭೀಕರ ಕೊಲೆ, ಕೊಲೆ ಮಾಡಿ ಆರೋಪಿಗಳು ಮೃತದೇಹವನ್ನ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟಿದ್ದಾರೆ. ದೇಹದ ಭಾಗಗಳನ್ನ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಎಸೆದು ಎಸ್ಕೇಪ್ ಆಗಿದ್ದಾರೆ. ಈ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ನಡೆದಿದೆ. ಬೀರಬ್ಬಿ ಗ್ರಾಮದ ಬೀರೇಶ (25) ಕೊಲೆ ಯಾಗಿರುವ ಯುವಕ ಅಂತ ಗುರುತಿಸಲಾಗಿದೆ.
ಕಳೆದ 15 ದಿನಗಳಿಂದ ಕೊಲೆಯಾದ ಬೀರೇಶ್ ಕಾಣೆಯಾಗಿದ್ದ. ಕಾಣೆಯಾಗಿದ್ದ ಬೀರೇಶನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ರು. ನಿನ್ನೆ ಸಂಜೆ ಮನೆಯ ಹಿಂಭಾಗದಲ್ಲಿ ಬೀರೇಶ ಮೃತದೇಹ ಪತ್ತೆಯಾಗಿದೆ. ಯಾವುದೇ ಪ್ರಾಣಿ ಸತ್ತ ವಾಸನೆ ಎಂದು ಪರಿಶೀಲಿಸಿದಾಗ ಬೀರೇಶನ ಮೃತದೇಹ ಪತ್ತೆ ಆಗಿದೆ. ಈ ವೇಳೆ ದೇಹದ ಭಾಗಗಳನ್ನ ತುಂಡಾಗಿ ಕತ್ತರಿಸಿ ಕಿರಾತಕರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟಿರೋದು ಬೆಳಕಿಗೆ ಬಂದಿದೆ. ಮೃತ ಬೀರೇಶ್ ಮೃತದೇಹ ಸಂಪೂರ್ಣ ಕೊಳೆತು ಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ದೌಡಾಯಿಸಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
