ಬಗರ್ ಹುಕ್ಕುಂ ಸಾಗುವಳಿದಾರರ ಪಟ್ಟಕ್ಕೆ 29 ನೇ ತಾರಿಖು ಪೂರ್ವಭಾವಿ ಸಭೆ ;
ಕೂಡ್ಲಿಗಿ :- ದಿ, 18. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮೀತಿ ಬೆಂಗಳೂರು , ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ( ನಂಜುಂಡಪ್ಪ ಬಣ ) ಕೂಡ್ಲಿಗಿ ತಾಲೂಕು ಘಟಕದ ವತಿಯಿಂದ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಪಟ್ಟ ಕೊಡಿಸುವ ಸಲುವಾಗಿ ದಿನಾಂಕ 29.10.25 ರಂದು ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದರದಲ್ಲಿ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಯಿತು ,
ಸಭೆಯನ್ನುದ್ದೇಶಸಿಸಿ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್ ಮಾತನಾಡಿ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯ ಬಗರ್ ಹುಕ್ಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದು ಭೂಮಿಯ ಹಕ್ಕಿಗಾಗಿ ಕಾಯುತ್ತಿದ್ದಾರೆ , ಕಾರಣ ನಮ್ಮ ಕೂಡ್ಲಿಗಿ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಪರಂಪೋಕ್ , ತಾರಕಪುರ , ರರಾಳಗುಡ್ಡ , ಅರಣ್ಯ ಭೂಮಿ ಈಚಲವನ , ಅನಾದಿನ , ತಾರಕ ಪರಂಪೋಕ್ , ಪುಂಜಿ ಇನ್ನಿತರ ಹಲವಾರು ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರು ಪಟ್ಟಕ್ಕಾಗಿ ಸುಮಾರು ಹತ್ತು ವರ್ಷಗಳ ಕಾಲ ಫಾರಂ 50 , 53 , 57 ರಲ್ಲಿ ಅರ್ಜಿ ಸಲ್ಲಿಸಿದ್ದು ಭೂ ಮಂಜೂರಾತಿಗಾಗಿ ತಾಲೂಕಿನ ರೈತರು ಕಾಯುತ್ತಿದ್ದಾರೆ ಆದರೆ ಸರ್ಕಾರ ದಿನಕ್ಕೊಂದು ಕಾನೂನುಗಳ ನೆಪ ಹೇಳಿ ಭೂ ಮಂಜೂರಾತಿಯನ್ನು ನೀಡದೆ ಹಲವು ದಶಕಗಳ ಕಾಲದಿಂದಲೂ ಸಾಗುವಳಿ ರೈತರಿಗೆ ಭೂಮಿಯಿಂದ ವಂಚಿಸುತ್ತಾ ಬಂದಿದ್ದಾರೆ , ಸಾಗುವಳಿ ಮಾಡುತ್ತಿರುವ ಅರ್ಜಿದಾರರು ಇನ್ನು ಎಷ್ಟು ವರ್ಷಗಳ ಕಾಲ ಕಾಯಬೇಕು ಕಾಯುವುದಕ್ಕೂ ಒಂದು ಮಿತಿ ಬೇಡಲ್ಲವೇ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ( ನಂಜುಂಡಪ್ಪ ಬಣ ) ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್ , ಕೂಡ್ಲಿಗಿ ತಾಲೂಕು ರೈತ ಸಂಘದ ಅಧ್ಯಕ್ಷ ನಲ್ಲ ಮುತ್ತಿ ರಮೇಶ್, ತಾಲೂಕು ಕಾರ್ಯಾಧ್ಯಕ್ಷ ಕೆ. ತಿಪ್ಪೇಸ್ವಾಮಿ , ಸಂಚಾಲಕ ಹಾರಕಭಾವಿ ತಿಪ್ಪೇಸ್ವಾಮಿ ವಕೀಲರು ಸೇರಿದಂತೆ ಕೂಡ್ಲಿಗಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಇದ್ದರು …

ವರದಿ : ಬಿ.ಎಂ.ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
