ಜನಪರ ಆಡಳಿತವೇ ನನ್ನ ಗುರಿ ನಿಮ್ಮ ಬೆಂಬಲವೇ ನನ್ನ ಬಲ…!!!

ಜನಪರ ಆಡಳಿತವೇ ನನ್ನ ಗುರಿ
ನಿಮ್ಮ ಬೆಂಬಲವೇ ನನ್ನ ಬಲ

*”ಮನೆ ಮನೆಗೆ ಶಾಸಕರು ಮನೆ ಬಾಗಿಲಿಗೆ ಸರ್ಕಾರ, ಯೋಚನೆಯನ್ನು ಯೋಜನೆ ಯನ್ನಾಗಿ ಬದಲಿಸುವುದೇ ಅಭಿವೃದ್ಧಿ”* ಇದು ನಮ್ಮ ಹೆಮ್ಮೆಯ ಶಾಸಕರ ಕಾರ್ಯವೈಖರಿಯ ಮೂಲ ಮಂತ್ರ.

ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ದು ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ *ಮನೆ ಮನೆಗೆ ಶಾಸಕರು ಮನೆ ಬಾಗಿಲಿಗೆ ಸರ್ಕಾರ,* ಕಾರ್ಯಕ್ರಮವನ್ನು ನಿಂಬಳಗೆರೆ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 18.10.2025 ರಂದು ಮಾನ್ಯ ಜನಪ್ರಿಯ ಶಾಸಕರಾದ *ಡಾ. ಶ್ರೀನಿವಾಸ್ ಎನ್ ಟಿ* ರವರು ಉದ್ಘಾಟಿಸಿದರು. ತಾಲೂಕು ಆಡಳಿತಗಳು ಕೇವಲ ತಾಲೂಕು ಕೇಂದ್ರಗಳಿಗೆ ಸೀಮಿತರಾಗದೆ ಜನರು ತಾಲೂಕು ಕೇಂದ್ರಗಳಿಗೆ ಅಲೆದಾಡಬಾರದು ಎನ್ನುವ ಉದ್ದೇಶದಿಂದ ತನ್ನ ಕ್ಷೇತ್ರದ ಗ್ರಾಮ ಪಂಚಾಯತಿಯ ಮಟ್ಟದಲ್ಲೂ ಸಹ ಕಾರ್ಯಕ್ರಮಗಳನ್ನು ಆಯೋಜಿಸಿ
*ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕೂಡ್ಲಿಗಿ* ವಿಧಾನ ಸಭಾ ಕ್ಷೆತ್ರವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಈ ಹಣೆಪಟ್ಟಿಯನ್ನು ಕಳಚಲು ಶಾಸಕರು ಸಾಕಷ್ಟು ಪ್ರಾಮಾಣಿಕ ಪ್ರಯುತ್ನದಿಂದ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಜನರು ತಮ್ಮ ಹಲವಾರು ಸಮಸ್ಯೆಗಳನ್ನು ಹೊತ್ತು ತಂದು ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಈ ಕಾರ್ಯಕ್ರಮದಲ್ಲಿ ಕೊಟ್ಟೂರು ತಹಶೀಲ್ದಾರರಾದ
*ಅಮರೇಶ್ ಜಿ.ಕೆ* ತಾಲ್ಲೂಕು ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ *ಡಾ. ಆನಂದ್ ಕುಮಾರ್* ಗ್ರಾಮ ಪಂಚಾಯತ್ ಅಧ್ಯಕ್ಷರಾದ *ಎಸ್ ಶ್ರೀಕಾಂತ್* ಉಪಾಧ್ಯಕ್ಷರಾದ *ಮಂಗಳಮ್ಮ ವೆಂಕಟೇಶ್* ಹಾಗೂ ಸರ್ವ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಧರ ಸ್ವಾಮಿ, ನಾಗರಕಟ್ಟೆ ರಾಜಣ್ಣ ಇನ್ನು ಮುಂತಾದ ಮುಖಂಡರು ಮಹಿಳೆಯರು, ಹಿರಿಯ ನಾಗರಿಕರು, ಯುವಕರು ಸಾರ್ವಜನಿಕರು ಮತ್ತು ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend