ಸರ್ಕಾರದ ಮಾನದಂಡಗಳಡಿಯಲ್ಲಿ ಹಬ್ಬ ಆಚರಿಸಿ:ಸಿ.ಪಿ.ಐ ಸಂಜಯ್ ಬಳೆಗಾರ…!!!

ಸರ್ಕಾರದ ಮಾನದಂಡಗಳಡಿಯಲ್ಲಿ ಹಬ್ಬ ಆಚರಿಸಿ:ಸಿ.ಪಿ.ಐ ಸಂಜಯ್ ಬಳೆಗಾರ

ಮಹಾಲಿಂಗಪುರ: ನಗರದ ಪೋಲೀಸ್ ಠಾಣೆಯಲ್ಲಿ ಶನಿವಾರದಂದು ಶಾಂತಿ ಸುವ್ಯವಸ್ಥೆ ಕಾಪಾಡಲು ಗಣೇಶ್ ಚತುರ್ಥಿಯ ಶಾಂತಿ ಪಾಲನಾ ಸಭೆ ನಡೆಸಲಾಯಿತು. ಮಹಾಲಿಂಗಪುರ ಮತ್ತು ಠಾಣಾ ವ್ಯಾಪ್ತಿಯಲ್ಲಿ ಬರುವ ಸುತ್ತ ಹಳ್ಳಿಗಳಲ್ಲಿ ಕೂರಿಸುವ ಗಣೇಶ್ ಮಂಡಳಿಗಳ ಸದಸ್ಯರನ್ನು ಸಭೆ ಕರೆದು ಶಾಂತವಾಗಿ ಮತ್ತು ಸರಳಿತವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶ್ ಮೂರ್ತಿ ಮೆರವಣಿಗೆ ಮಾಡುವಂತೆ ತಿಳಿಸಿದ ರಬಕವಿ ಬನಹಟ್ಟಿ ವೃತ್ತ ಸಿಪಿಐ ಸಂಜಯ್ ಬಳೆಗಾರ ಸರ್ಕಾರದ ಮಾನದಂಡಗಳನ್ನು ಪಾಲನೆ ಮಾಡಿ ಅನುಮತಿ ಪಡೆದು ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಸಲಹೆ ನೀಡಿದರು. ಮಹಾಲಿಂಗಪುರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಾರ್ವಜನಿಕ ಗಣೇಶ್ ಮಂಡಳಿಗಳಿಗೆ ತೊಂದರೆ ಆಗದಂತೆ ಕಾಳಜಿ ವಹಿಸಿ ಪೊಲೀಸ್ ಇಲಾಖೆ,ಕೆಇಬಿ ಮತ್ತು ಪುರಸಭೆ ಪರವಾನಗಿಯನ್ನು ಪೋಲೀಸ್ ಠಾಣೆಯಲ್ಲಿಯೆ ನೀಡಲು ನಿರ್ಧರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಪರವಾನಗಿ ಪಡೆಯಲು ಕೊರಲಾಯಿತು.
ಹೆಚ್ಚಿನ ಡೆಸಿಬೆಲ್ ಶಬ್ದ ಹೊರ ಸೂಸುವ ಧ್ವನಿವರ್ದಕ ಸೌಂಡ ಸಿಸ್ಟಮಗಳನ್ನು ಹಚ್ಚಲು ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಠಾಣಾಧಿಕಾರಿ ಪ್ರವೀಣ್ ಬೀಳಗಿ, ಕೆಇಬಿ ಅಧಿಕಾರಿ ರಾಜು ಭಾಗೋಜಿ, ಸೈದಾಪುರ ಗ್ರಾ.ಪ.ಪಿಡಿಓ ಸಂಗಮೇಶ ಸೊರಗಾಂವಿ ಹಿರಿಯರಾದ ಎಮ್.ಐ.ಕೋಳಿಗುಡ್ಡ,ಚಂದ್ರು,ಸಜನಸಾಬ ಪೆಂಡಾರಿ,ಚನ್ನಪ್ಪ ಪಟ್ಟಣಶೆಟ್ಟಿ,ಜಮೀರ್ ಯಕ್ಸಂಬಿ,ಶೇಖರ ಅಂಗಡಿ,ವಿನೋದ ಚಂದನಶಿವ,ರಾಜು ಮುಗಳಖೋಡ ಪೋಲೀಸ್ ಸಿಬ್ಬಂದಿಗಳಾದ j.G.ಪಾಟೀಲ್,ಎಸ್.ಬಿ.ಜೈನರ,ಗಚ್ಚನ್ನವರ,ಬಸವರಾಜ ದೇಸಾಯಿ ಉಪಸ್ಥಿತರಿದ್ದರು.


ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend