ಕೂಡ್ಲಿಗಿ ಬರಪೀಡಿತ ಪ್ರದೇಶ ಘೋಷಣೆಗೆ: MLA Dr.NTಶ್ರೀನಿವಾಸ್ ರಿಂದ- CMಸಿದ್ದರಾಮಯ್ಯರಿಗೆ ಮನವಿ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಶಾಸಕಾದ Dr.NTಶ್ರೀನಿವಾಸ್ ರವರು, ಕೂಡ್ಲಿಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ. ರೈತರಿಗೆ ಬೆಳೆ ನಷ್ಟ ಪರಿಹಾರ ಮಂಜೂರು ಮಾಡಬೇಕೆಂದು ಒತ್ತಾಯಿಸಿ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ, ಹಾಗೂ ಉಪಮುಖ್ಯಮಂತ್ರಿ ಮಾನ್ಯ ಡಿ.ಕೆ .ಶಿವಕುಮಾರ ರವರಿಗೂ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರಿಗೆ, ಸೆ2ರಂದು ಶನಿವಾರ ಮನವಿ ಸಲ್ಲಿಸಿದ್ದಾರೆ. ಡಾ”ನಂಜುಂಡಪ್ಪ ವರದಿಯ ಪ್ರಕಾರ, ಕೂಡ್ಲಿಗಿ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದೆ. ಒಟ್ಟು 216 ಗ್ರಾಮಗಳು, 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಕ್ಷೇತ್ರ ಮಳೆ ಆಶ್ರಿತ ಪ್ರದೇಶವಾಗಿದ್ದು, ಅಲ್ಲದೆ ತಾಲೂಕಿನಲ್ಲಿ ಯಾವುದೇ ಜಲ ಮೂಲಗಳಿಲ್ಲದಿರುವುದರಿಂದ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉದ್ಭವಿಸಲಿದೆ, ತಾಲೂಕು ಹೆಚ್ಚಾಗಿ ಕೂಲಿಕಾರ್ಮಿಕರನ್ನು ಹೊಂದಿದೆ. ತಾಲೂಕಿನಲ್ಲಿ ಬರ ಉಂಟಾಗಿ ಜನರು ಉದ್ಯೋಗ ಅರಸಿ, ದೂರದ ಜಿಲ್ಲೆಗಳಿಗೆ ಗುಳೇ ಹೋಗುವ ಸಂದರ್ಭ ಸೃಷ್ಟಿಯಾಗಿದೆ. ಇದನ್ನು ತಡೆಯಲು ಶೀಘ್ರವೇ ತಾಲೂಕನ್ನು, ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು. ಶಾಸಕರು ಸರ್ಕಾರಕ್ಕೆ ಮನವರಿಕೆ ಈ ಮೂಲಕ ಮನವರಿಕೆ ಮಾಡಿದ್ದು, ಅಗತ್ಯ ಪರಿಹಾರ ಕ್ರಮಗಳನ್ನು ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
