ನಿಂಬಳಗೆರೆ ಬಾಲಕಿಯರು, ಹೊಸಹಳ್ಳಿಯ ಬಾಲಕರು ಜಿಲ್ಲಾ ಮಟ್ಟಕ್ಕೆ ಆಯ್ಕೆ…!!!

ಕೂಡ್ಲಿಗಿ:ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿ-
ನಿಂಬಳಗೆರೆ ಬಾಲಕಿಯರು, ಹೊಸಹಳ್ಳಿಯ ಬಾಲಕರು ಜಿಲ್ಲಾ ಮಟ್ಟಕ್ಕೆ ಆಯ್ಕೆ- ವಿಜಯನಗರ ಜಿಲ್ಲೆ
ಕೂಡ್ಲಿಗಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಭಾಗಿಯಾಗುವ ಮೂಲಕ, ಉತ್ತಮ ಪ್ರದರ್ಶನ ನೀಡಬೇಕು ಎಂದು ಕೊಟ್ಟೂರು ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಚಿತ್ತರಂಜನ್ ಹೇಳಿದರು. ಅವರು ಪಟ್ಟಣದ ವಾಸವಿ ವಿದ್ಯಾ ಮಂದಿರದಲ್ಲಿ, ಭಾನುವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಂಡಿದ್ದ. ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ವಾಲಿಬಾಲ್ ಪಂದ್ಯಾವಳಿಯ, ಅಂತಿಮ ಪಂದ್ಯಕ್ಕೆ ಟ‍ಾಸ್ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ,ಆಟ ಪಾಠ ಸಾಂಸ್ಕೃತಿಕ ಚಟುವಟಿಗಳಲ್ಲಿ ಅಗಾದ ಪ್ರತಿಭೆಗಳನ್ನು ಹೊಂದಿದ್ದಾರೆ. ಇವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ, ಅವರನ್ನು ಎತ್ತರಕ್ಕೆ ಬೆಳೆಯುವಂತೆ ಮಾಡಬೇಕು. ಕ್ರೀಡೆಯಲ್ಲಿ ಅನೇಕರು ಗ್ರಾಮೀಣ ಮಟ್ಟದಿಂದ, ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗಿ ತಮ್ಮ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಂತರಾಷ್ಟ್ರೀಯ ಆಟಗಳ ಜೊತೆಗೆ ಜಾನಪದ, ಹಾಗೂ ಗ್ರಾಮೀಣ ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳು ಪ್ರತಿಭೆ ತೋರಿಸಿಕೊಡಬೇಕಾಗಿದೆ ಎಂದರು.
ತಾಲ್ಲೂಕು ಗ್ರೇಡ್-1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಹನುಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ಭರತೇಶ್ ಕುಮಾರ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಬಸಪ್ಪ, ಉಪಾಧ್ಯಕ್ಷ ಕೆಂಗನಗೌಡ, ನಾಭೂಷಣ, ರಮೇಶ್, ಮಹೇಂದ್ರ, ನಾಗರಾಜ, ಸಂತೋಷ, ಕರಿಬಸಪ್ಪ, ಪ್ರಕಾಶ್ ಇದ್ದರು.
ನಂತರ ನಡೆದ ಬಾಲಕಿಯರ ಅಂತಿಮ ಪಂದ್ಯದಲ್ಲಿ ಶ್ರೀ ಕಲ್ಲೇಶ್ವರ ಪ್ರಾಥಮಿಕ ಶಾಲೆ ತಂಡವು ಅಮ್ಮನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಂಡವನ್ನು ಹಾಗೂ ಬಾಲಕರ ಅಂತಿಮ ಪಂದ್ಯದಲ್ಲಿ ಅಮ್ಮನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಂಡವನ್ನು ಸೋಲಿಸಿದ ಹೊಸಹಳ್ಳಿಯ ವೈಭವ ಪ್ರಾಥಮಿಕ ಶಾಲೆಯ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ. ಮಂಜುನಾಥ ತಿಳಿಸಿದ್ದಾರೆ….

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend