ಮೂರು ಕೃಷಿ ವಿರೋಧಿ ಕಾಯ್ದೆ ಹಿಂಪಡೆಯಲು ಆಗ್ರಹ
ಕೂಡ್ಲಿಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೂಡ್ಲಿಗಿ ತಾಲೂಕ್ ವತಿಯಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಹಾಗೂ
ರಾಜ್ಯದ ರೈತರು ಆರ್ಥಿಕವಾಗಿ ಸಬಲರಾಗುವಂತ ಉದ್ಯೋಗ ಸೃಷ್ಟಿಸುವಂತ ಯೋಜನೆಗಳನ್ನು ಜಾರಿಗೋಳಿಸಬೇಕು, ಭಾರತ ದೇಶವು ಕೃಷಿ ಆಧಾರಿತವಾದ ದೇಶ ಸುಮಾರು ಶೇ.60% ರಷ್ಟು ಜನರು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ಶೇ. 80% ರಷ್ಟು ರೈತರು ಸಣ್ಣ ಹಾಗೂ ಅತೀಸಣ್ಣ ಹಿಡುವಳಿದಾರರಾಗಿದ್ದಾರೆ. ಕೃಷಿ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸರಕು ವಹಿವಾಟಿನ ಚಾಲಕರು ಹಾಗೂ ಇತರೆ ಕ್ಷೇತ್ರಗಳನೊಳಗೊಂಡಂತೆ ರೈತರು ಕೃಷಿಯಿಂದ ಹೆಚ್ಚು ಉದ್ಯೋಗಗಳನ್ನು ನೀಡುತ್ತಿವೆ. ಇಷ್ಟೆಲ್ಲಾ ಉದ್ಯೋಗ ನೀಡುವ ರೈತನಿಗೆ ತಾನು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲ. ಆದ್ದರಿಂದ ಸರ್ಕಾರ ರೈತರ ಎಲ್ಲಾ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಘೋಷಿಸಬೇಕು. ಹಾಗೂ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಗೆ ರೈತರಿಗೆ ರಿಯಾಯಿತಿ ಧರದಲ್ಲಿ ಕೃಷಿಗೆ ಸಂಬಂಧಪಟ್ಟ ರೂಟರ್, ಬಲರಾಮ್ ಮಡಿಕೆ, ಬತ್ತ ನಾಟಿ ಯಂತ್ರ, ಸಣ್ಣ ಟ್ರ್ಯಾಕ್ಟರ್, ಸ್ಪಿಂಕಲರ್, ಪೈಪ್, ತಾಡುಪಾಲುಗಳು, ರೇಷ್ಮೆ ಮನೆ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಅನುದಾನ ಹೊದಗಿಸಬೇಕು. ಹಾಗೂ ರೈತರ ವಿರೋಧಿ ಕಾಯ್ದೆಗಳು ವಾಪಾಸ್ ಪಡೆದು ರಾಜ್ಯದ ರೈತರಿಗೆ ಅನುಕೂಲವಾಗುವ ಆರ್ಥಿಕ ಸಭಲತೆಯನ್ನು ಮಾಡುವಂತೆ ಹಾಗೂ ಉದ್ಯೋಗ ಸೃಷ್ಟಿ ಮಾಡುವಂತೆ ಕಾಮಗರಿಗಳ ಕಾಯ್ದೆಗಳನ್ನು ಮಾಡಿ ಬೆಳಗಾವಿ ಅಧಿವೇಶನದಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ತಹಶೀಲ್ದಾರರು ಕೂಡ್ಲಿಗಿ ಇವರ ಸಮ್ಮುಖದಲ್ಲಿ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಮಿನಿ ವಿಧಾನಸೌಧ ಬೆಳಗಾವಿ ಇವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೂಡ್ಲಿಗಿ ತಾಲೂಕ್ ವತಿಯಿಂದ ರೈತರ ಬೇಡಿಕೆಗಳನ್ನು ಜಾರಿಗೊಳಿಸಲು ಒತ್ತಾಯಿಸಿದರು. ರೈತ ಮುಖಂಡರಾದ ದೇವರ ಮನಿ ಮಹೇಶ್, ಎಂ ಜಡಿಯಪ್ಪ, ಜಿಲ್ಲಾ ಅಧ್ಯಕ್ಷ ದಾನೇಶ, ಎನ್ ಭರಮಪ್ಪ ರಾಜ್ಯ ಉಪಾಧ್ಯಕ್ಷರು, ಕೂಡ್ಲಿಗಿ ತಾಲೂಕು ಅಧ್ಯಕ್ಷ ಬಣಕಾರ್ ಚನ್ನಬಸಪ್ಪ, ಜಬಿಉಲ್ಲಾ ಉಪಾಧ್ಯಕ್ಷರು ಸೇರಿದಂತೆ ರೈತ ಮುಖಂಡರು, ತಾಲೂಕಿನ ರೈತರು ಇದ್ದರು.

ವರದಿಗಾರರು ಸಿ ಅರುಣ್ ಕುಮಾರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
