ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸರಳವಾಗಿ ಆಚರಿಸಿದ ಪರಿನಿರ್ವಹಣ ದಿನ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ. ಆರ್ ಅಂಬೇಡ್ಕರ್ ಅವರ ಪರಿನಿರ್ವಣ ದಿನಾಚರಣೆಯನ್ನು ಫೋಟೋಗೆ ಹಾರ ಹಾಕಿ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು ಈ ದಿನಾಚರಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಮಹಾಂತೇಶಯ್ಯ ರವರು ಅಂದಿನ ದಿನದಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ಸಮಾಜದ ಸರ್ವರಿಗೂ ಸಮಾನತೆ, ಶಿಕ್ಷಣ ಸಿಗಬೇಕೆಂದು ಹೋರಾಡಿ ನಮ್ಮ ಭಾರತ ದೇಶಕ್ಕೆ ಸಾವಿಧಾನ ನೀಡಿ ನಮ್ಮೆಲ್ಲರಿಗೂ ಸಮನಾದ ಹಕ್ಕು ಜಾರಿಗೊಳಿಸಿದ್ದಾರೆ ಮುಖ್ಯವಾಗಿ ನಮ್ಮ ದೇಶದ ಮಹಿಳೆಯರಿಗೆ ವಿಶೇಷ ಗೌರವ ಸಿಗುವಂತೆ ಸೂಚಿಸಿದ್ದಾರೆ ಅಂತಹ ಮಹಾನ್ ವ್ಯಕ್ತಿಯನ್ನು ನಾವು ಕಳೆದುಕೊಂಡಿರುವುದು ಅತಿ ದುಃಖವನ್ನು ಉಂಟುಮಾಡುತ್ತದೆ ಅಂತಹ ಮಹಾ ನಾಯಕನನ್ನು ದೇವರ ರೀತಿ ಪೂಜಿಸಿದರು ತಪ್ಪಾಗದು ಎಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಆಪರೇಟರ್ ಪ್ರದೀಪ್ ಕುಮಾರ್ ರವರು ಪರಿನಿರ್ವಣ ದಿನಾಚರಣೆಗೆ ಆಗಮಿಸಿರುವ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈಗಾಗಲೇ ನಮ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಿಂದೆ ಮಾಡಿರುವ ವಿಷಯಗಳನ್ನು ನಿಮ್ಮ ಮುಂದೆ ಮಾತನಾಡಿದ್ದಾರೆ ಅವರಂತೆ ನೀವುಗಳೆಲ್ಲರೂ ಉನ್ನತ ಮಟ್ಟಕ್ಕೆ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಒಂದು ಸಾಧನೆ ಮಾಡಬೇಕು ಮತ್ತು ನಿಮ್ಮ ತಂದೆ ತಾಯಿಗಳಿಗೆ ಆಸರೆಯಾಗಬೇಕು ಎಂದು ಮಾತನಾಡಿದರು ಈ ದಿನಾಚರಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶಯ್ಯ . ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದುರ್ಗಮ್ಮ ದುರ್ಗಪ್ಪ ಉಪಾಧ್ಯಕ್ಷರಾದ ತಿಪ್ಪಮ್ಮ ನಾಗರಾಜ್ ಹಾಗೂ ಎಲ್ಲಾ ಸದಸ್ಯರುಗಳು ಮತ್ತು ಪಂಚಾಯಿತಿ ಸಿಬ್ಬಂದಿಗಳಾದ ಪ್ರದೀಪ್ ಕುಮಾರ್ ನೀರ್ ಗಂಟೆ ಜಗದೀಶ್ . ಓಂಕಾರಿ ಬೋರಣ್ಣ. ಪಾಪಕ್ಕ . ತಿಪ್ಪೇಸ್ವಾಮಿ . ಗ್ರಂಥಾಲಯ ಮುಖ್ಯಸ್ಥರಾದ ಪಾರಿಜಾತ ಕಾಮಯ್ಯ. ಶಾಲೆಯ ವಿದ್ಯಾರ್ಥಿಗಳು ಇದ್ದರು

ವರದಿಗಾರರು : ಸಿ ಅರುಣ್ ಕುಮಾರ್. ಜುಮ್ಮೊಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
