ಹಾರಕಬಾವಿ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಿ.ಐ.ಟಿ.ಯು ಗ್ರಾಮ ಘಟಕ ಉದ್ಘಾಟನೆ
ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಸಿಡಬ್ಲ್ಯೂಎಫ್ಐ ಗ್ರಾಮ ಘಟಕವನ್ನು ಕೂಡ್ಲಿಗಿ ಸಿ.ಐ.ಟಿ.ಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಇವರ ಸಮ್ಮುಖದಲ್ಲಿ ಗ್ರಾಮ ಘಟಕ ನಾಮಫಲಕ ಉದ್ಘಾಟಿಸಿದರು. ತದನಂತರ ಸಂಘಟನೆಯ ಕುರಿತಾಗಿ ಸಂಘದ ನಿಯಮಗಳನ್ನು ಹಾಗೂ ಕಟ್ಟಡ ಕಾರ್ಮಿಕರ ಸರ್ಕಾರದ ಸವಲತ್ತುಗಳನ್ನು ಎಲ್ಲಾ ಕಾರ್ಮಿಕರಿಗೆ ತಿಳಿಸಿ ಹೇಳಿದರು. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಜಾರಿತಂದಿದೆ. ಅವುಗಳನ್ನು ಸಮರ್ಪಕವಾಗಿ ಹೊಂದಬೇಕೆಂದರೆ ಹೋರಾಟ ಅನಿವಾರ್ಯವಾಗಿದ್ದು, ಕಾರ್ಮಿಕರು ಸಂಘಟಿತರಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷರಾದ ಎಂ.ಬಿ ಅಯ್ಯನಳ್ಳಿ ಕರಿಯಪ್ಪ, ಉಪಾಧ್ಯಕ್ಷರು ಹುಲೆಪ್ಪ, ಸಹ ಕಾರ್ಯದರ್ಶಿ ಮರಳು ಸಿದ್ದಪ್ಪಾಚಾರಿ, ಅಯ್ಯನಳ್ಳಿ ತಿಪ್ಪೇಸ್ವಾಮಿ, ನಬಿ ಸಾಬ್, ಹಾರಕಬಾವಿ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮೂಗಪ್ಪ, ಖಜಾಂಸಿ ಕರಿಬಸಪ್ಪ, ಸೇರಿದಂತೆ ಗ್ರಾಮ ಘಟಕದ ಸರ್ವ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳಿಗೆ, ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
