ಶರಣಪ್ಪ ನಂದವಾಡಗಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರಧನ ನೀಡಿ…!!!

ಶರಣಪ್ಪ ನಂದವಾಡಗಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರಧನ ನೀಡಿ.

ಸಿಂಧನೂರು.ನ.22- ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ದಲಿತ ವ್ಯಕ್ತಿ ಶರಣಪ್ಪ ನಂದವಾಡಗಿ ಎಂಬುವವರನ್ನು ಅಮಾನುಷವಾಗಿ ಕೊಲೆಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ವ್ಯವಸ್ಥಿತ ಹುನ್ನಾರ ನಡೆಸಲಾಗಿದ್ದು, ಈ ದುಷ್ಕೃತ್ಯವನ್ನು ದಲಿತಪರ ಸಂಘಟನೆಗಳ ಒಕ್ಕೂಟ ಬಲವಾಗಿ ಖಂಡಿಸುತ್ತದೆ. ಈ ಪ್ರಕರಣದ ತನಿಖೆಯನ್ನು ವಾರದರ್ಶಕವಾಗಿ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ನಗರದ ಪ್ರವಾಸಿ ಮಂದಿರದಿಂದ ಮಿನಿ ವಿಧಾನ ಸೌಧದವರೆಗೆ ನೂರಾರು ಸಂಖ್ಯೆಯಲ್ಲಿ ಪೋಲಿಸ್ ಇಲಾಖೆ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಮೂಲಕ ತಹಸೀಲ್ ಕಾರ್ಯಾಲಯದ ಮುಂಭಾಗದಲ್ಲಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಗೋರೆಬಾಳ ಗ್ರಾಮ ಶ್ರೀಮಂತ ಭೂ ಮಾಲೀಕರಿಂದ ಕೂಡಿದ ಗ್ರಾಮವಾಗಿದ್ದು ಇಲ್ಲಿನ ದಲಿತ ಜನಾಂಗದವರಿಗೆ ತುಂಡು ಭೂಮಿಯಿಲ್ಲ ಆರ್ಥಿಕವಾಗಿ,ಸಾಮಾಜಿವಾಗಿ ಹಾಗೂ ರಾಜಕೀಯವಾಗಿ ಕುಳಿತಕ್ಕೊಳಗಾದ ಗ್ರಾಮದ ದಲಿತ ಸಮುದಾಯದ ಮೇಲೆ ನಿರಂತರ ದೌರ್ಜನ್ಯಗಳು ನಡೆದಿದೆ.ದಲಿತರು ದೌರ್ಜನ್ಯಕ್ಕೆ ಒಳಗಾದರೂ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಡುವಂತಹ ಪರಿಸ್ಥಿತಿಯಲ್ಲಿಲ್ಲ. ದಲಿತ ಸಮುದಾಯದವರಿಗೆ ಸಾಲ ಕೊಟ್ಟು, ಇಲ್ಲದೇ ಇನ್ನಿತರೆ ಹತ್ತಾರು ಆಮಿಸ್ಯಗಳನ್ನೂ ಒಡ್ಡಿ ಅವರ ಎಲ್ಲ ಹಕ್ಕು ಬಾಧ್ಯತೆಗಳನ್ನು ಕಿತ್ತುಕೊಂಡಿರುವ ಇಲ್ಲಿನ ಕೆಲ ಶ್ರೀಮಂತರು ಮನಬಂದಂತೆ ನಿರಂತರ ಶೋಷಣೆ ನಡೆಸುತ್ತಲೇ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳಲ್ಲಿ ಈ ಗ್ರಾಮದಲ್ಲಿ ಮಾದಿಗ ಸಮುದಾಯದ 10ಕ್ಕೂ ಹೆಚ್ಚು ಕೊಲೆಗಳು ನಡೆದಿವೆ.ಈ ಕೊಲೆಗಳನ್ನು ಅತ್ಮಹತ್ಯ ಇಲ್ಲವೇ ಅಪಘಾತ ಎಂದು ಸಾರ್ವಜನಿಕ ವಲಯದಲ್ಲಿ ಬಿಂಬಿಸಿ ಇಲ್ಲಿಯವರೆಗೂ ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗಿದೆ. ಸಂಶಯಾಸ್ಪದ ಕೊಲೆ ಘಟನೆಗಳ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾದ ತಾಲೂಕು ಆಡಳಿತ, ಪೊಲೀಸ್ ಇಲಾಖೆಗಳು ಸಂಪೂರ್ಣ ವಿಫಲವಾಗಿದ್ದು, ಇಂತಹ ಕೊಲೆ ಘಟನೆಗಳು ಗ್ರಾಮದಲ್ಲಿ ಮರುಕಳಿಸುತ್ತಿವೆ ಎಂಬ ಭಯ ದಲಿತರಲ್ಲಿ ಹುಟ್ಟಿದೆ.
ನವಂಬರ್ 16 ರಂದು ರಾತ್ರಿ 10:45ರ ಸುಮಾರಿಗೆ ಗೊರೇಬಾಳ ಗ್ರಾಮದ ಮಾದಿಗ ಸಮುದಾಯದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ನಂದವಾಡಗಿ ಎಂಬ ಯುವಕ ಯಾರದೋ ಫೋನ್ ಬಂತೆಂದು ಹೊರ ಹೋದಾತ ಮುಂಜಾನೆ ಊರ ವಲಯದ ಗೌಡರ, ಪಂಪ್ ಸೆಟ್‌ ವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಹೆಣವಾಗಿ ಸಿಕ್ಕಿರುತ್ತಾನೆ. ಮೃತದೇಹ ಸಿಕ್ಕ ಪ್ರದೇಶವನ್ನು ಗಮನಿಸಿದ ಯಾರಿಗೆ ಆದರೂ ಇದು ಕೊಲೆ ಎನ್ನುವ ಸಂಶಯ ಮೂಡಿದೇ ಇರದು, ಹಾಗಾಗಿ ಈ ಘಟನೆ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಲು ಮುಂಜಾನೆಯಿಂದ ಸಂಜೆಯವರಿಗೂ ಕಾಯ್ದರು ಪಿಎಸ್‌ಐ ಮತ್ತು ಸಿಬ್ಬಂದಿಗಳು ವಿಳಂಬ ಮಾಡಿರುತ್ತಾರೆ. ಅಲ್ಲದೇ ಪೋಸ್ಟ್ ಮಾರ್ಟ್‌ ಮಾಡಿಸಲು ಮತ್ತು ಸರಿಯಾಗಿ ಕೇಸ್ ದಾಖಲಿಸಲು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಶರಣಪ್ಪ ನಂದವಾಡಗಿಯನ್ನು ಕೊಲೆಮಾಡಲಾಗಿದೆ ಎಂದು ಆತನ ಕುಟುಂಬಸ್ಥರು ಹೇಳುತ್ತಿದ್ದು, ಪಾರದರ್ಶಕ ತನಿಖೆ ನಡೆಸಿ ಕೊಲೆ ಮಾಡಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಅಗ್ರಹಿಸಿದರು.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದ ದಲಿತ ಸಮುದಾಯದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶರಣಪ್ಪ ನಂದವಾಡಗಿಯ ಕೊಲೆ ಪ್ರಕರಣವನ್ನು ಸಮಗ್ರ ನ್ಯಾಯಾಂಗ ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು.ಕೊಲೆಯಾದ ಶರಣಪ್ಪ ನಂದವಾಡಗಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕು.ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳನ್ನು ಮರು ತನಿಖೆ ಗೊಳಪಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. ರಾಯಚೂರು ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕ ಕೊಲೆ, ಜಾತಿ ನಿಂದನೆ ಹಾಗೂ ಅತ್ಯಾಚಾರದ ಕೇಸ್‌ಗಳನ್ನು ದಾಖಲಿಸುವಲ್ಲಿ ವಿಳಂಬ ಮಾಡುವ ಪೊಲೀಸ್ ಠಾಣೆಗಳ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಪ್ರತಿ ತಿಂಗಳು ಕೊನೆಯ ವಾರದಲ್ಲಿ ದಲಿತರ ಕುಂದುಕೊರತೆ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೋರಾಟಗಾರರು ಹಕ್ಕೊತ್ತಾಯದ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮರಿಯಪ್ಪ ಜಾಲಿಹಾಳ, ನಾಗರಾಜ ಪೂಜಾರಿ, ಅಶೋಕ ನಂಜಲದಿನ್ನಿ, ಮಾಹಾದೇವ ದುಮುತಿ, ಹುಸೇನಪ್ಪ ಸೂಲಂಗಿ, ಅಮರೇಶ ಗಿರಿಜಾಲಿ, ಚಿಟ್ಟಿ ಬಾಬು, ವಿರುಪ್ಪಣ್ಣ ನಂದವಡಗಿ, ವಿಜಯಕುಮಾರ, ಅಶೋಕ, ಪಕೀರಪ್ಪ , ಶಿವಶಂಕರ,ಜಯಕುಮಾರ, ವಿರುಪಣ್ಣ ಮಾಜಿ ಗ್ರಾ.ಪಂ.ಸದ್ಯಸರು, ಮರೀದೇವಪ್ಪ ಗ್ರಾ.ಪಂ. ಸದ್ಯಸ, ಚಂದ್ರು ಗ್ರಾ.ಪಂ. ಸದ್ಯಸ, ಶಿವಪ್ಪ, ಶಿವಪ್ಪ ಕುಡುತೀನಿ, ಯಮನೂರಪ್ಪ ಗಂಗಪ್ಪ, ನಿರೂಪಾದೆಪ್ಪ ಎಲೆಕೂಡ್ಲಿಗಿ,ರಮೇಶ ಎಲೆಕೂಡ್ಲಿಗಿ, ನಾಗರಾಜ ಸಾಸಲಮರಿ, ಶರಣಪ್ಪ ಈರಪ್ಪ, ಹನುಮೇಶ್ ಮೈತ್ರಿ ತುರುವಿಹಾಳ, ಮಲ್ಲಿಕಾರ್ಜುನ ದಿನಸಮುದ್ರ, ಬಿ.ಎನ್. ಯರಿದಿಹಾಳ್ ಮಂಜುನಾಥ, ಮುತ್ತು ಸಾಗರ, ಯಲ್ಲಮ್ಮ, ಹುಸೇನಮ್ಮ, ಪಾರ್ವತಮ್ಮ ಸೇರಿದಂತೆ ಅನೇಕ ದಲಿತ ಪರ ಸಂಘಟನೆ ಒಕ್ಕೂಟಗಳು ಈ ಪ್ರತಿಭಟನೆ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend