ದಿ.ಎಂ.ಪಿ ರವೀಂದ್ರ ಅವರ 4ನೇ ಪುಣ್ಯ ಸ್ಮರಣೆ ಪ್ರಯುಕ್ತ” ಕರಿಮಾಯೆ” ನಾಟಕ ಪ್ರದರ್ಶನ…!!!

ದಿ.ಎಂ.ಪಿ ರವೀಂದ್ರ ಅವರ 4ನೇ ಪುಣ್ಯ ಸ್ಮರಣೆ ಪ್ರಯುಕ್ತ” ಕರಿಮಾಯೆ” ನಾಟಕ ಪ್ರದರ್ಶನ

ಹರಪನಹಳ್ಳಿ:- ಶ್ರೀ ಎಂ ಪಿ ರವೀಂದ್ರರವರ ನಾಲ್ಕನೇ ಪುಣ್ಯ ಸ್ಮರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‌ಕಲೆ ಸಾಂಸ್ಕೃತಿಕ ಕುರುಹುಗಳು ಉಳಿಸಿಕೊಂಡು ಹೋಗಬೇಕೆಂದು ಕ್ಷೇತ್ರದ ಜನನಾಯಕಿ ಶ್ರೀಮತಿ ಎಂ.ಪಿ.ವೀಣಾ ಮಹಾಂತೇಶ್ ಹೇಳಿದರು.

ಹರಪನಹಳ್ಳಿ ಪಟ್ಟಣದ ಎಸ್ ಸಿ ಎಸ್ ಫಾರ್ಮಸಿ ಕಾಲೇಜ್ (ಜ್ಞಾನಗಂಗೋತ್ರಿ ಆವರಣ) ದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಣೆ, ಎಂಪಿ ರವೀಂದ್ರರವರ 4ನೇ ವರ್ಷದ ಪುಣ್ಯಸ್ಮರಣ ಹಾಗೂ ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಚಂದ್ರಶೇಖರ್ ಕಂಬಾರ ಅವರ ಕಾದಂಬರಿ ಆಧಾರಿತ ”ಕರಿಮಾಯಿ” ನಾಟಕವನ್ನು ಸ್ಪಂದನ ರಂಗ ತಂಡ ಬೆಂಗಳೂರು ಇವರು ಪ್ರಸ್ತುತ ಪಡಿಸಿದರು.

ಉದ್ಘಾಟನೆಯನ್ನು ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಖ್ಯಾತ ರಂಗಕರ್ಮಿಗಳಾದ ಶ್ರೀಮತಿ ಬಿ.ಜಯಶ್ರೀ ಅವರು ನೆರವೇರಿಸಿದರು.

ಈ ಕಾಯ೯ಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರುದ್ರಾಂಬ ಎಂ.ಪಿ.ಪ್ರಕಾಶ್ ಅನುಪಸ್ಥಿತಿಯಲ್ಲಿ ಶ್ರೀಮತಿ ಎಂ.ಪಿ.ಸುಮ ವಿಜಯ್ ಅವರು ನಿವ೯ಹಿಸದರು.
ಈ ಕಾಯ೯ಕ್ರಮ ಶ್ರೀ ಶ್ರೀ ಶ್ರೀ ವರಸದ್ಯೋಜಾತಶಿವಾಚಾರ್ಯ ಮಹಾಸ್ವಾಮಿಗಳು ತೆಗ್ಗಿನ ಮಠ ಸಂಸ್ಥಾನದ ಹರಪನಹಳ್ಳಿ ಹಾಗೂ ಶ್ರೀ ಚನ್ನಬಸವ ಶಿವಯೋಗಿ ಸ್ವಾಮಿಗಳು,
ಗುಡ್ಡದ ವಿರಕ್ತ ಸಂಸ್ಥಾನ ಮಠ ನೀಲಗುಂದ ಸ್ವಾಮೀಜಿಗಳು ದಿವ್ಯ ಸಾನಿಧ್ಯದಲ್ಲಿ ನೆರವೇರಿತು.ಫಾಸ್ಟರ್ ನಿಲ್ ಆರ್ಮ್ ಸ್ಟ್ರಾಂಗ್ ಗಾಸ್ಪೆಲ್ ಅಸೆಂಬ್ಲಿ ಚರ್ಚ್ ಹರಪನಹಳ್ಳಿ ಮತ್ತು ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಶ್ರೀ ಎಂ ಪಿ ಪ್ರಕಾಶ್ ಮತ್ತು ಶ್ರೀ ಎಂ ಪಿ ರವೀಂದ್ರರವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷರು ಶ್ರೀಮತಿ ಕವಿತಾ ಯೋಗೇಶ್ ಸಿದ್ದಲಿಂಗನಗೌಡ್ರು ವಕೀಲರು. ಮತ್ತಿಹಳ್ಳಿ ಬೆಟ್ಟನಗೌಡ್ರು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಗೋವಿಂದ್ ರಾಜ್ ಹಗರಿ ಗುಡಿಹಳ್ಳಿ, ನಾಗರಾಜ್ ದೇವರ ತಿಮಲಾಪುರ, ಬಾಗಳಿ ರಮೇಶ್, ಗೊರಿಹಳ್ಳಿ ರಮೇಶ್, ಶಿವಮೂರ್ತಿ ಸ್ವಾಮಿ ಹೆಚ್ ಎಂ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತಿ ರೇಣುಕಮ್ಮ, ಶ್ರೀಮತಿ ರೇಣುಕಾ, ಇದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend