ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿಯ ಅಂಗಳದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ. ತಿಪ್ಪಮ್ಮ ಗೊಂಚಗಾರ್. ನಾಗರಾಜ್ ರವರು ಧ್ವಜಾರೋಹಣ ಮಾಡಿ ಪುಷ್ಪ ನಮನ ಸಲ್ಲಿಸಿ ವಿಜೃಂಭಣೆಯಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ.ನೇತ್ರಮ್ಮ. ಜಿ. ಓಬಣ್ಣ. ರವರು ಕನ್ನಡ ರಾಜ್ಯೋತ್ಸವದ ಬಗ್ಗೆ ಅಂದು ಕನ್ನಡ ಇಂದು ಕನ್ನಡ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಇಂದಿನ ದಿನಮಾನಗಳಲ್ಲಿ ಕನ್ನಡ ಭಾಷೆಯನ್ನು ಲೆಕ್ಕಿಸದೆ.

ಇನ್ನಿತರೆ ಭಾಷೆಯನ್ನು ಬಳಸುತ್ತಿದ್ದಾರೆ ನಾವು ಕರ್ನಾಟಕದಲ್ಲಿ ಇದ್ದುಕೊಂಡು ನಮ್ಮ ಕನ್ನಡ ಭಾಷೆಯನ್ನೇ ತೆರವುಗೊಳಿಸಿದರೆ ನಮ್ಮ ಕರ್ನಾಟಕ ರಾಜ್ಯಕ್ಕೆ ನಾವೇ ಅವಮಾನ ಮಾಡಿದಂತೆ ಆದ್ದರಿಂದ ನಾವುಗಳೆಲ್ಲರೂ. ಕನ್ನಡ ಭಾಷೆಯನ್ನು ಕಾಪಾಡಿಕೊಂಡು ಹೋಗೋಣ ಎಂದು ಈ ದಿನಾಚರಣೆಯಲ್ಲಿ ಅರಿವು ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಶ್ರೀ. ಮಹಾಂತೇಶಯ್ಯ. ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ. ಜಿ ಓಬಣ್ಣ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚನ್ನಬಸಮ್ಮ. ಬಸಣ್ಣ ಉಪಾಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ. ಗೊಂಚಗಿರ್ ನಾಗರಾಜ್ ಹಾಗೂ ಗ್ರಾಮ ಪಂಚಾಯಿತಿಯ ಎಲ್ಲಾ ಸರ್ವ ಸದಸ್ಯರುಗಳು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಈ. ಶರಣೆಶ್. ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರುಗಳು ಮಾಜಿ ಸದಸ್ಯರುಗಳು ಊರಿನ ಜನರು ಪಂಚಾಯತಿ ಸಿಬ್ಬಂದಿಗಳು ಅಂಗನವಾಡಿ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಈ ಒಂದು ದಿನಾಚರಣೆಯಲ್ಲಿ ಬಾಗಿ ಇದ್ದರು.
ವರದಿ : ಸಿ ಅರುಣ್ ಕುಮಾರ್ ಜುಮ್ಮಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
