ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ ಕೋಗಳಿತಾಂಡದ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಣೆ…!!!

ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ ಕೋಗಳಿತಾಂಡದ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಯಿತು..ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಶ್ರೀ ಆರ್.ಪ್ರಕಾಶ್ ನಾಯ್ಕ ಮಾತನಾಡಿ ಇಂದು ಗ್ರಾಮ ಘಟಕದ ವತಿಯಿಂದ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ದಿನಾಂಕ: ೦6-11-2022 ನೇ ರವಿವಾರ ದಂದು ಕೋಗಳಿ ಗ್ರಾಮದ ಪ್ರೌಢಶಾಲೆಯ ಬಾಲಕೀಯರ ಕಬ್ಬಡಿ ತಂಡವು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತದೆ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ಪ್ರಮುಖರಿಗೂ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು, ಸಂಘಟನೆಯ ತಾಲೂಕು ಕಾರ್ಯಧ್ಯಕ್ಷರಾದ ಶ್ರೀ ದೇವರಮನಿ ನೀಲಪ್ಪ ನವರು ಮಾತನಾಡಿ ಸಂಘಟನೆಯಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದೀರಿ, ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳು ಸದಾ ಹೀಗೆ ಮುಂದುವರಿಯಲಿ, ತಮಗೆಲ್ಲರಿಗೂ ತಾಯಿ ಭುವನೇಶ್ವರಿಯ ಅನುಗ್ರಹ ಸದಾ ತಮ್ಮ ಮೇಲಿರಲೆಂದು ಹಾರೈಸುತ್ತೇನೆ.ಜೊತೆಗೆ ಸಂಘಟನೆಗೆ ಹೊಸದಾಗಿ ಕಾರ್ಯಕರ್ತರನ್ನ ಸೇರಿಸುವ ಮುಖಾಂತರ ಸಂಘಟನೆ ಬಲಗೊಳಿಸಿ ಎಂದು ಮನವಿ ಮಾಡಿದರು. ಊರಿನ ಪ್ರಮುಖ ಮುಖಂಡರಿಂದ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಎಲ್.ಸಂತೋಷ್ ನಾಯ್ಕ(ಕಿಚ್ಚ), ಆರ್.ಕೃಷ್ಣ ನಾಯ್ಕ, ಬಡಿಗೇರ್ ಮಂಜುನಾಥ, ಎಸ್.ರಾಮು ನಾಯ್ಕ, ಲಕ್ಕೀರ್ ರಘು, ಜುಂಜಾರ್ ಚಂದ್ರನಾಯ್ಕ , ಸಂತೋಷ್ ನಾಯ್ಕ, ಎನ್.ಕುಮಾರ ನಾಯ್ಕ, ಜಿ.ತುಳಚ ನಾಯ್ಕ, ಕೆ.ಶಿವಕುಮಾರ್ ನಾಯ್ಕ, ಗ್ರಾಮ ಪಂಚಾಯತಿ ಸದಸ್ಯರಾದ ಸೋಮ್ಲನಾಯ್ಕ,ಜಿ.ನಾಗರಾಜ್ ನಾಯ್ಕ ಹಾಗೂ ಮುಂತಾದವರು ಇದ್ದರು….

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend