ಹೊಸಹಳ್ಳಿ ಕನ್ನಡ ಭವನದಲ್ಲಿ67ನೇ ಕನ್ನಡ ರಾಜ್ಯೋತ್ಸವ ಆಚರಣೆ…!!!

ಹೊಸಹಳ್ಳಿ ಕನ್ನಡ ಭವನದಲ್ಲಿ67ನೇ ಕನ್ನಡ ರಾಜ್ಯೋತ್ಸವ ಆಚರಣೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ದಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.
ಮತ್ತು ಭುವನೇಶ್ವರಿ ಭಾವಚಿತ್ರಕ್ಕೆ, ಪೂಜಿಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ನಂತರ ಹಿರಿಯ ಸಾಹಿತಿಗಳು ಮತ್ತು ಕವಿಗಳಾದ ಯು ಜಗನ್ನಾಥ್ ಮಾತನಾಡಿ ಕನ್ನಡ ರಾಜ್ಯೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು ಮತ್ತು ಕನ್ನಡ ನಾಡಿಗೆ. ಪಂಪ. ರನ್ನ. ರಾಘವಾಂಕ. ಹರಿಹರ. ಕುವೆಂಪು. ದಾ.ರಾ. ಬೇಂದ್ರೆ. ಸೇರಿದಂತೆ ಅನೇಕ ಕವಿಗಳು ಸಾಹಿತಿಗಳು ಸೇರಿದಂತೆ ಅನೇಕ ವಿದ್ವಾಂಸರು ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಎಂದು ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ ಮಾತನಾಡಿ
ಕನ್ನಡ ನಾಡು. ನುಡಿ. ಜಲ.ಭಾಷೆಯನು ಮತ್ತು ಕನ್ನಡವನ್ನು ಉಳಿಸಿ ಬೆಳೆಸುವಂತಹ ಕೆಲಸಕ್ಕೆ ನಾವೆಲ್ಲರೂ ಕೂಡ ಕಂಕಣಭದ್ಧರಾಗಿರಬೇಕು ಮತ್ತು ಕನ್ನಡ ನಾಡಿನ ಅನೇಕ ಸಾಹಿತ್ಯ ಕಲೆ ಸಂಸ್ಕೃತಿ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ವಿದ್ವಾಂಸರಾದ ಡಾ. ವೃಷಭೇಂದ್ರ ಆಚಾರ್.ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಕೋಶ ಅಧ್ಯಕ್ಷರಾದ ಕೆಜಿ ಕುಮಾರ ಗೌಡ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಹ ಕಾರ್ಯದರ್ಶಿ ಕೆ ಸುಭಾಷ್ ಚಂದ್ರ. ಹೊಸಹಳ್ಳಿ ನಾಡಕಚೇರಿ ಯ ಉಪ ತಹಸಿಲ್ದಾರ್ ಜಿ ಚಂದ್ರಮೋಹನ್. ಹೋಬಳಿ ಘಟಕದ ಕೋಶ ಅಧ್ಯಕ್ಷರಾದ ಸಫಾರಿ ರಾಮಣ್ಣ. ಶರಣನ ಗೌಡ್ರು. ಹೊಸಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಹೊನ್ನೂರ ಸ್ವಾಮಿ. ಹೋಬಳಿ ಘಟಕದ ಮಹಿಳಾ ಪ್ರತಿನಿಧಿ ಗೋವಿಂದಮ್ಮ ಎಚ್ಎಂ. ಮತ್ತು ಶಿಕ್ಷಕರಾದ ಕರಿ ಬಸಣ್ಣ. ಗುರುಮೂರ್ತಿ. ಉಮೇಶ್. ಪ್ರಕಾಶ್ ಗೌಡ ಸೇರಿದಂತೆ ಶಾಲೆ ವಿದ್ಯಾರ್ಥಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend