ಕೂಡ್ಲಿಗಿ ತಾಲೂಕು ಸ್ವಾತಂತ್ರ್ಯ ಹೋರಾಟದ ಯಶೋಗಾಥೆ
ಒಂದುವರೆ ವರ್ಷದ ಹಿಂದೆ ಈ ಪುಸ್ತಕದ ಲೇಖಕಕರಾದ ಶ್ರೀ ಎನ್.ಎಮ್.ಕೋಟ್ರೇಶ್ ಸರ್ ಇವರನ್ನು. ಭೇಟಿಯಾಗಿದ್ದೆ ಸಂದರ್ಶನವನ್ನು ಸಹ ಮಾಡಿ ಸ್ವಾತಂತ್ರ್ಯ ಹಾಗೂ ಕೂಡ್ಲಿಗಿ ಕೊಟ್ಟುರಿನ ಹೋರಾಟವನ್ನು ಅತೀ ಹತ್ತಿರದಿಂದ ಕಂಡವರು ಹೋರಾಟದ ಸಮಯದಲ್ಲಿ ನಡೆದ ತ್ಯಾಗದ ಬಗ್ಗೆ ಇನ್ನೂ ಅನೇಕಾನೇಕ ವಿಚಾರಗಳ ಸಮಾಗಮ ಮಾಡಿದ್ದೆ ಇಂದು ಈ ಪುಸ್ತಕ ಎಂಬತ್ತರಷ್ಟು ಮುಗಿಯಿತು ಓದಿ ತಿಳಿದಿದ್ದಕ್ಕಿಂತ ಅಂದು ಇವರೊಡನೆ ಮಾತಾಡಿದ ವಿಷಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿವೆ ಬರ್ರೀ ಚೂರೇ ಚೂರು ಹೇಳ್ತೆನೆ…..!!
ಕೂಡ್ಲಿಗಿ ತಾ||ಸ್ವಾಂತಂತ್ರ್ಯ ಹೋರಾಟಗಾರರು ಬಳ್ಳಾರಿಯಲ್ಲಿಯೂ ಕೂಡ ಇದ್ದಿಲ್ಲ ಎನ್ನುವ ಮಾತು ಲೇಖಕರಿಂದಲೇ ಕೇಳಿದ್ದೆ ಸರಿಸುಮಾರು ೮೧ ಜನ ಹೋರಾಟಗಾರರ ಬಗ್ಗೆ ಅವರ ಪರಿಚಯ ಹಾಗೂ ಪಾತ್ರದ ಬಗ್ಗೆ ಮಾಹಿತಿನೀಡುವಲ್ಲಿ ಶ್ರಮ ಪಟ್ಟಿದ್ದಾರೆ.
ಸ್ವಾತಂತ್ರ್ಯ ಕಿಚ್ಚುಹಚ್ಚುವ ವೇಳೆ ೧೯೩೭ ಮಾರ್ಚ್ ೨ ರಂದು ಕೊಟ್ಟೂರಿಗೆ ಬಂದಿದ್ದರು ಅದು ಗಾಂಧಿ ತೋಟವೆಂದೆ ಹೆಸರಾಗಿತ್ತು ಕೋಗಳಿಯ ತೋಟನಗೌಡರೆಂಬ ಹೋರಾಟಗಾರರು ಕೊಟ್ಟಿನಲ್ಲಿಯ ೬-೩೦ ಎಕರೆ ಜಮೀನನ್ನು ಗಾಂಧಿಯವರಿಗೆ ಹಸ್ತಾಂತರಿಸಿದ್ದರು. ಲಕ್ಷಾಂತ ಜನಸಮೂಹದ ನಡುವೆ ಆ ಹೋರಾಟದ ಕಿಚ್ಚು ಆ ಸಂಗ್ರಾಮ ಯಶಸ್ವಿಗೆ ಸುತ್ತಮುತ್ತಲಿನ ಹೋರಾಟಗಾರರ ಸಹಕಾರವೇ ಕಾರಣ
ಇನ್ನೊಂದು ವಿಶೇಷವೆಂದರೆ ಕೆಲಕುಟುಂಬಗಳು ಸ್ವಾಂತಂತ್ರ್ಯಕ್ಕಾಗಿಯೇ ತಮ್ಮ ಜೀವನ ಮುಡಿಪಿಟ್ಟು ಮನೆತೋರೆದವರಾಗಿದ್ದರು
ಕೂಡ್ಲಿಗಿ ತಾಲೂಕಿನ ಹೋರಾಟಗಾರರು ಬರೀ ಹೋರಾಟಮಾಡಲಿಲ್ಲ ಗಾಂಧಿಯ ಮನೋಗತದಂತೆ ೧೯೩೩ ರಲ್ಲಿ ಹರಿಜನ ಕೇರಿಯಲ್ಲಿ ಸೇವಾಶ್ರಮ ಸ್ಥಾಪಿಸಿ ಶಿಕ್ಷಣಕ್ಕೆ ಪೂರಕವಾದವರು ಒಟ್ಟಾರೆ ಕೂಡ್ಲಿಗಿ ಮತ್ತು ಈಗಿನ ಕೊಟ್ಟೂರು ತಾಲೂಕಿನ ಪ್ರತಿ ಹಳ್ಳಿಗಳು ಹೋರಾಟಗಾರಿದ್ದ ಊರೆಂದರೆ ತಪ್ಪಾಗಲಾರದೇನೋ
ನಿಜಕ್ಕೂ ಅತ್ಯಂತ ಹೆಮ್ಮೆ ಎನ್ನಿಸಿತ್ತು ನೈಜ ಸಾಧಕರನ್ನೆ ಸಂದರ್ಶನ ಮಾಡಿದ ಹೆಮ್ಮೆಯಾಗಿತ್ತು ಆದರೆ ಇಂತಹ ಅದ್ಭುತ ಹಿರಿಯ ಬರಹಗಾರರು ಪ್ರಚಾರವಾಗಲಿಲ್ಲ ಎನ್ನುವುದು ನೋವಾಗುತ್ತಿದೆ, ಲೇಖಕರು ಪ್ರಸ್ತುತ ಮಗನೊಂದಿಗೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ಇರಬೇಕು
ಮತ್ತೆ ಭೇಟಿಯಾಗಬೇಕೆಂದೆ ಹಾತೋಯುತ್ತಿದ್ದೆನೆ
ಧನ್ಯವಾದಗಳು
ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ
ಯುವಸಾಹಿತಿ, ಸಂಘಟಕರು ವಿಜಯನಗರ..

ವರದಿ. ಪ್ರಕಾಶ್, ಆಚಾರ್, ಇಟ್ಟಿಗೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
