ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ…!!!

ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ

ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ದಸರಾ ಹಬ್ಬದ ಪ್ರಯುಕ್ತ ಆಯುಧ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಠಾಣೆಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು, ಠಾಣೆಯ ವಾಹನಗಳನ್ನು, ಪೊಲೀಸ್ ಪೇದೆಗಳ ದ್ವಿಚಕ್ರ ವಾಹನಗಳನ್ನು ತೊಳೆದು ಹೂಮಾಲೆಗಳಿಂದ ಪೂಜಿಸಿ ಸಿಂಗಾರ ಮಾಡಲಾಗಿತ್ತು. ನಂತರ ಥಾಣೆಯಲ್ಲಿ ಮಂಟಪವನ್ನು ಮಾಡಿ ವಿದ್ಯುತ್ ದೀಪಗಳಿಂದ ಅಲಂಕರಿಸಿ ಚಾಮುಂಡೇಶ್ವರಿ ದೇವಿಯ ಭಾವಚಿತ್ರವನ್ನಿಟ್ಟು ಹೂವುಹಣ್ಣು ಕುಂಕುಮ ಪೂಜಾ ಸಾಮಾಗ್ರಿಗಳಿಂದ ದೇವಿಯನ್ನು ಅಲಂಕಾರ ಮಾಡಲಾಗಿತ್ತು. ಠಾಣೆಯ ಉಪಕರಣಗಳನ್ನು ದೇವಿಯ ಮುಂಭಾಗದ ಇಟ್ಟು ಪೂಜಿಸಲಾಯಿತು. ನಂತರ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ದೇವಿಯನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಿ ದೇವಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.ಈ ಕಾರ್ಯಕ್ರಮದಲ್ಲಿ, ಪಿಎಸ್ಐ ಹೆಚ್ ನಾಗರತ್ನಮ್ಮ,, ಎ.ಎಸ್ಐ.ಜಿಲಾನ್ ಬಾಷಾ, ಎ.ಎಸ್.ಐ ಗೋಪಾಲ್, ಎ.ಎಸ್.ಐ.ಮಲ್ಲೇಶ್, ಎ.ಎಸ್.ಐ.ದುರುಗಪ್ಪ ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ಪ್ರಭಾಕರ, ಹಾಲೇಶ್, ವೆಂಕಟೇಶ, ಜಗದೀಶ್. ಕಲ್ಲೇಶ್, ರವಿಚಂದ್ರ ಗೌಡ, ಗೋಣಿಬಸಪ್ಪ, ಮಂಜುನಾಥ ಬಾಬು, ಸಂದೀಪ್, ಬಸಪ್ಪ ಬದ್ದಿ, ಸುರೇಶ್, ತಿಪ್ಪೇಸ್ವಾಮಿ, ಸಿದ್ದಲಿಂಗಪ್ಪ, ನಾಗರಾಜ, ಬಸವರಾಜ್, ಪ್ರಕಾಶ್, ಸೇರಿದಂತೆ ಚಂದ್ರಶೇಖರಯ್ಯ ಸಿಬ್ಬಂದಿವರ್ಗ ಇತರರಿದ್ದರು…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend