ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ…!!!

  • ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ.

    ಸಿಂಧನೂರು : ಅ.3.ಲೋಕೋಪಯೋಗಿ ಇಲಾಖೆ ವತಿಯಿಂದ 2022 -23 ನೇ ಸಾಲಿನ ವಳಬಳ್ಳಾರಿ ಗ್ರಾಮದಲ್ಲಿ ಎಸ್‌.ಸಿ ಕಾಲೋನಿಯಲ್ಲಿ 20ಲಕ್ಷ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಆಪೆಂಡಿಕ್ಸ್‌ ಯೋಜನೆಯಡಿಯಲ್ಲಿ ಎಸ್.ಹೆಚ್ 128 ದೇವದುರ್ಗ- ಬಳ್ಳಾರಿ ರಸ್ತೆಯಿಂದ ದುದ್ದುಪುಡಿ ಶಾಲೆಯವರೆಗೆ 1ಕೋಟಿ 60 ಲಕ್ಷ ರೂಗಳಲ್ಲಿ ಸಿಸಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಹಾಗೂ ಮಾಜಿ ಸಚಿವ ವೆಂಕಟರಾವ್‌ ನಾಡಗೌಡರು ಭೂಮಿಪೂಜೆ ನೆರವೇರಿಸಿದರು.

  • ನಂತರ ಮಾತನಾಡಿದ ಅವರು 2022-23ನೇ ಸಾಲಿನ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಮಂಜುರಾಗಿದ್ದು ,ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿದ್ದು ರೈತರಿಗೆ ಅನುಕೂಲವಾಗುವ ರಸ್ತೆ ಇದಾಗಿದ್ದು,ಈ ಕಾಮಗಾರಿಯನ್ನು ಅಧಿಕಾರಿಗಳು ಹಾಗೂ ಗುತ್ತೆ ದಾರರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು, ಕಾಲಮಿತಿಯೊಳಗೆ ಸಂಪೂರ್ಣವಾಗಿ ಕಾಮಗಾರಿ ಮುಗಿಸಿ ರೈತಾಪಿ ವರ್ಗ,ಕೃಷಿ ಕಾರ್ಮಿಕರಿಗೆ ರಸ್ತೆಯ ಅನುಕೂಲ ಮಾಡಿ ಕೊಡಬೇಕು. ರಸ್ತೆಯ ಎರಡೂ ಬದಿಗಳಲ್ಲಿ ರೈತರ ಜಮೀನುಗಳು ಇರುವುದರಿಂದ ರೈತರು ಕೂಡಾ ಗುತ್ತೆದಾರರಿಗೆ ಮತ್ತುಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.
  • ಈ ಸಂದರ್ಭದಲ್ಲಿ ಶ್ರೀ ಸದಾಶಿವ ಸ್ವಾಮೀಗಳು ಸುಕ್ಷೇತ್ರ ಒಳಬಳ್ಳಾರಿ ಚನ್ನಬಸವತಾತ ಮಠ, ಶಿವನಗೌಡ ಗೋರೆಬಾಳ, ಹನುಮಂತರಡ್ಡಿ, ಸತ್ಯಪ್ಪಗೌಡ,ನಾಗನಗೌಡ,ಮಲ್ಲನಗೌಡ,ಗ್ರಾ.ಪಂ. ಅಧ್ಯಕ್ಷರಾದ ಗೌರಮ್ಮ,ವೀರಣ್ಣ,ಬಸವರಾಜ, ಪಿಡಿಓ ಸರಸ್ವತಿ,ವಿಎ ಭೀಮಸಿಂಗ್, ಗುತ್ತೇದಾರ ಜಕ್ಕರಾಯ, ಎಡಬ್ಲ್ಯೂಇ ಸಿ.ಎಸ್. ಪಾಟೀಲ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend