ಕರವೇ( ಪ್ರವೀಣ್ ಶೆಟ್ಟಿ) ಬಣದಿಂದ ಗಾಂಧಿ ಜಯಂತಿ ಆಚರಣೆ…!!!

ಕರವೇ( ಪ್ರವೀಣ್ ಶೆಟ್ಟಿ) ಬಣದಿಂದ ಗಾಂಧಿ ಜಯಂತಿ ಆಚರಣೆ.

ಸಿಂಧನೂರು:ಅ.3.ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಸಮಿತಿ ವತಿಯಿಂದ ರವಿವಾರದಂದು ನಗರದ ಕುಷ್ಟಗಿ ರಸ್ತೆಯ ಸರ್ಕ್ಯೂಟ್ ಹೌಸ್ ನಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಣೆ ಮಾಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.
ನಗರ ಹಾಗೂ ಗ್ರಾಮ ಘಟಕಗಳ ಪದಾಧಿಕಾರಿ ಗಳನ್ನು ನೇಮಕ ಮಾಡಲಾಯಿತು.ಈ ಸಂದರ್ಭ ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಗಳನ್ನು ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಅನೇಕ ಯುವಕರು ಸಂಘಟನೆಯಲ್ಲಿ ಸೇರ್ಪಡೆ ಗೊಂಡರು.
ಸದಾ ನಿಮ್ಮ ಜೊತೆಗೆ ಹೋರಾಟಕ್ಕೆ ಜನಪರ ಕಾರ್ಯಕ್ರಮಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ವೀರೇಶ ಭಾವಿಮನಿ ಹಾಗೂ ತಾಲ್ಲೂಕು ಪದಾಧಿಕಾರಿಗಳು ನಗರ ಘಟಕದ ಪದಾಧಿಕಾರಿಗಳು ಯುವ ಘಟಕದ ಪದಾಧಿಕಾರಿಗಳು ಅನೇಕ ಕರವೇ ಮುಖಂಡರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend