ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಲಾಮಕ್ಕಳಿಂದ ಹಾಗು ಸಿದ್ದಾಪುರ ಗ್ರಾಮಸ್ಥರಿಂದ ಆಗ್ರಹ.
ಕಾನಹೊಸಹಳ್ಳಿ:- ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದಾಪುರ ಗ್ರಾಮ ಹಾಗೂ ಸಿದ್ದಾಪುರ ಬೋವಿ ಹಟ್ಟಿ ಮತ್ತು ಗೊಲ್ಲರಹಟ್ಟಿಯಿಂದ ಕಾನಹೊಸಹಳ್ಳಿ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ಸುಮಾರು 50ರಿಂದ 60 ವಿದ್ಯಾರ್ಥಿಗಳು (ಮಹಿಳೆಯರು ಸೇರಿದಂತೆ ) ಕಾನಹೊಸಹಳ್ಳಿ ಗೆ ರಸ್ತೆಯಲ್ಲಿ ಸಂಚರಿಸುವ ಆಟೋಗಳಿಗೆ, ದ್ವಿಚಕ್ರ ವಾಹನಗಳಿಗೆ ಕೈ ಮಾಡಿಕೊಂಡು ನಿಲ್ಲಿಸಿ ವಿದ್ಯಾಭ್ಯಾಸ ಮಾಡಲ್ಲ ಹೊಸಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾರೆ, ಕೆಲವೊಮ್ಮೆ ಸಕಾಲಕ್ಕೆ ಸರಿಯಾಗಿ ಆಟೋಗಳು ಸಹಾಸಿಗುತ್ತಿಲ್ಲ, ಮಳೆಯಲ್ಲಿಯೇ ನಡೆದುಕೊಂಡು ಹೋಗುವ ದೃಶ್ಯ ಕಂಡು ಸಾರ್ವಜನಿಕರು ಮಕ್ಕಳ ಪೋಷಕರು ಬಸ್ಸಿನ ವ್ಯವಸ್ಥೆಗಾಗಿ ಕೂಡ್ಲಿಗಿ ತಾಲೂಕಿನ ಬಸ್ ಘಟಕದ ಮುಂಭಾಗ ಶೀಘ್ರದಲ್ಲಿ ಧರಣಿ ಮಾಡಲಾಗುವುದು ಎಂದು ಪತ್ರಿಕೆಯಲ್ಲಿಪ್ರಕಟಣೆ ಮಾಡುವಂತೆ ತಿಳಿಸಿದರು, ಈಗಾಗಲೇ ಸುಮಾರು ಬಾರಿ ಮಾಧ್ಯಮದ ಮೂಲಕ ಬಸ್ಸಿನ ವ್ಯವಸ್ಥೆಗಾಗಿ ಪ್ರಕಟಿಸಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು.

ಆದರೂ ಕೂಡ ನಮ್ಮ ಈ ಮನವಿಗೆ ಯಾವ ಅಧಿಕಾರಿಗಳು ಸ್ಪಂದಿಸಿಲ್ಲ, ಕೆಲವು ವಿದ್ಯಾರ್ಥಿಗಳುವಿದ್ಯಾಭ್ಯಾಸ ಮಾಡುವುದನ್ನೇ ಬಿಟ್ಟು ಮನೆಯಲ್ಲಿ ಇರುವ ಪರಿಸ್ಥಿತಿ ಬಂದೊದಗಿದೆ ರಸ್ತೆಗಳು ವಾಹನ ಸಂಚಾರ ಮಾಡಲು ಉತ್ತಮ ರೀತಿಯಲ್ಲಿ ಇವೆ ಆದರೂ ಕೂಡ ಸಿದ್ದಾಪುರ ಗ್ರಾಮದಿಂದ ಕಾನಹೊಸಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯವನ್ನು ಕಲ್ಪಿಸಿಕೊಳ್ಳಲು ಅಧಿಕಾರಿಗಳಿಗೆ ತೊಂದರೆ ಯಾಗಿರುವುದಾದ ರೇನು ಚಿಕ್ಕಜೋಗಿಹಳ್ಳಿ ಮಾರ್ಗವಾಗಿ ಸಿದ್ದಾಪುರ ಗ್ರಾಮಕ್ಕೆ ಬೆಳಗಿನ ಜಾವ 8.30 ಕ್ಕೆ ಬಂದು ಜಮ್ಮೋಬನಹಳ್ಳಿ ಕಾನಹೊಸಹಳ್ಳಿ ಗೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಕಾನಹೊಸಹಳ್ಳಿ ಗೆ ಬಿಟ್ಟು ಪುನಹ ಸಾಯಂಕಾಲ 4:45 ಗಂಟೆಗೆ ಇದೇ ಮಾರ್ಗವಾಗಿ ಚಿಕ್ಕಜೋಗಿಹಳ್ಳಿ ಮಾರ್ಗವಾಗಿ ಕೂಡ್ಲಿಗಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟರೆ ಕಾನಹೊಸಹಳ್ಳಿ ಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೂ ಹಾಗೂ ಸಾರ್ವಜನಿಕರಿಗೂ ಬಹಳ ಅನುಕೂಲವಾಗುತ್ತದೆ, ಈ ಬಾರಿಯಾದರೂ ಈ ವರದಿ ನೋಡಿ ಬಸ್ ವ್ಯವಸ್ಥೆ ಕಲ್ಪಿಸಿದೆ ಇದ್ದಲ್ಲಿ ನಿಗದಿತ ದಿನಾಂಕದಂದು ಬಸ್ ಘಟಕದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಶಾಲಾ ವಿದ್ಯಾರ್ಥಿಗಳು ಹಾಗೂ ಸಿದ್ದಾಪುರ ಗ್ರಾಮದ ಜನಪ್ರತಿನಿಧಿಗಳು, ದಲಿತಪರ ಸಂಘಟನೆಗಳು, ಪೋಷಕರು ಮಾಧ್ಯಮದ ಮೂಲಕ ಮನವಿ ಮಾಡಿರುತ್ತಾರೆ…
ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
