ಗುರು ಮತ್ತು ಗುರಿಯಿಲ್ಲದೇ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. -ನಾಡಗೌಡ…!!!

ಗುರು ಮತ್ತು ಗುರಿಯಿಲ್ಲದೇ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. -ನಾಡಗೌಡ.

ಸಿಂಧನೂರು :ಅ.1.ಗುರು ಮತ್ತು ಗುರಿಯಿಲ್ಲದೇ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ.ಭವ್ಯಭಾರತ ವನ್ನು ನಿರ್ಮಾಣ ಮಾಡಲು ಒಬ್ಬ ವ್ಯಕ್ತಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಶಿಕ್ಷಕರ ಪಾತ್ರದೊಡ್ಡದು ಎಂದು ಶಾಸಕ ಹಾಗೂ ಮಾಜಿ ಸಚಿವವೆಂಕಟರಾವ್ ನಾಡಗೌಡ ತಿಳಿಸಿದರು.

ರಾಯಚೂರು ರಸ್ತೆಯ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಬಳಗ ಹಾಗೂ ಹಿಲಿಯ ಶಿಕ್ಷಕರು, ಕ.ರಾ.ಸ NPS ನೌಕರರ ಸಂಘ (ರಿ) ತಾಲೂಕಾ ಘಟಕ ಸಿಂಧನೂರು ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕ ಮಟ್ಟದ ಉತ್ತಮ ಶಿಕ್ಷಕ ಹಾಗೂ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿಮಾತನಾಡಿದರು.

2008ರಲ್ಲಿ ಶಾಸಕನಾದ ಮೇಲೆ ನಿಮ್ಮಲಿರುವ ಒಡಕನ್ನು ಸರಿಪಡಿಸಿ ಎಲ್ಲರನ್ನೂ ಒಂದುಗೂಡಿಸಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ ಯಶಸ್ವಿ ಗೊಳಿಸಿದ್ದೇವು ಆದರೆ ಇಂದು ನಿಮ್ಮಲ್ಲಿರುವ ಒಗ್ಗಟ್ಟಿ ನ ಕೊರತೆಯಿಂದಾಗಿ ಮೂರು ಮೂರು ಕಾರ್ಯಕ್ರಮ ಹಮ್ಮಿಕೊಂಡಿದ್ದಿರಿ,ನೀವುಗಳು ರಾಜಕೀಯ ನಾಯಕರುತರ ಬಣಗಳನ್ನು ಸೃಷ್ಟಿ ಮಾಡಿ ಕೊಳ್ಳದೆ ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕಾರ್ಯಕ್ರಮ ಮಾಡಲು ಸಲಹೆ ನೀಡಿದರು.

ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಸುವರ್ಣ ಗಿರಿ ವಿರಕ್ತಮಠ ಯದ್ದಲದೊಡ್ಡಿ ದಿವ್ಯ ಸಾನಿಧ್ಯ ವಹಿಸಿದ್ದರು.ರಾಜೇಂದ್ರಕುಮಾರ ಜಿಲ್ಲಾಸಂಘಟನಾ ಕಾರ್ಯದರ್ಶಿಗಳು, ಕ.ರಾ.ಸ. ನೌಕರರ ಸಂಘ (೨) ರಾಯಚೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಸವರಾಜ ನಾಡಗೌಡ, ಎನ್. ಶಿವನಗೌಡ,ಸೋಮನಗೌಡ ಬಾದರ್ಲಿ, ಹನುಮಂತಪ್ಪ ನಾಯಕ್,ಮಲ್ಲಯ್ಯ, ಬಸಲಿಂಗಪ್ಪ, ಸಾಬಣ್ಣ ವಗ್ಗರ್,ವಿಜಯ ರಂಗರೆಡ್ಡಿ,ಚಂದ್ರಶೇಖರ್ ಹಿರೇಮಠ, ಭರತ್ ಕುಮಾರ್, ಮಲ್ಲಪ್ಪ, ವಿಠ್ಠಲ. ಎಂ, ಶ್ರೀಮತಿ ಸುಮಿತ್ರ ಹಿರೇಮಠ, ಮಲ್ಲನಗೌಡ, ಮಂಜುನಾಥ, ಬಸವರಾಜ ಜವಳಗೇರ, ಸಂಗಯ್ಯ ಸಾಲಿಮಠ, ಶಂಕರದೇವರು ಹಿರೇಮಠ, ಶ್ರೀಮತಿ ಡಾ.ಲತಾ.ಎಸ್ ಮುಳ್ಳೂರು, ಡಾ.ಸೀಮಾ ಜೆ. ರೆಡ್ಡಿ, ಇನ್ನಿತರ ಶಿಕ್ಷಕರು,ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಇದ್ದರು.

2022 ನೇ ಸಾಲಿಗೆ ಆಯ್ಕೆಯಾದ ತಾಲೂಕು ಉತ್ತಮ ಶಿಕ್ಷಕರಿಗೆ 32 ಇಲಾಖೆಯ ವಿವಿಧ ವೃತ್ತಿಯಲ್ಲಿ ಸೇವೆ ಸಲ್ಲಿಸಿದವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ರಾಜೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದುರುಗಪ್ಪ ಗುಡದೂರು ಸ್ವಾಗತಿಸಿದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend