ಸಮಾಜದಲ್ಲಿ ಹುಟ್ಟಿದ ನಾನು ಸಮಾಜದ ಉದ್ದಾರಕ್ಕಾಗಿ ಸದಾಸಿದ್ಧ- ಬಸವರಾಜ ದಡೇಸುಗೂರು…!!!

ಸಮಾಜದಲ್ಲಿ ಹುಟ್ಟಿದ ನಾನು ಸಮಾಜದ ಉದ್ದಾರಕ್ಕಾಗಿ ಸದಾಸಿದ್ಧ- ಬಸವರಾಜ ದಡೇಸುಗೂರು.

ಸಿಂಧನೂರು :ಸ. 25.ಸಮಾಜದಲ್ಲಿ ಹುಟ್ಟಿದ ನಾನು ಸಮಾಜಕ್ಕಾಗಿ, ಸಮಾಜದ ಉದ್ದಾರಕ್ಕಾಗಿ ಸದಾ ಸಿದ್ಧನಿದ್ದೇನೆ. ನಾನು ಹಿಂದೆ ಸಮಾಜಕ್ಕಾಗಿ ಮಾತು ಕೊಟ್ಟಿದ್ದೆ ಆ ಮಾತು ಇದೆ ಮಾಣಿಕ್ಯನು ಇದಾನೆ ಬಳಸಿಕೊಳ್ಳುವ ಪ್ರಯತ್ನ ಸಮಾಜದಿಂದ ಆಗ ಬೇಕು ಎಂದು ಬಸವರಾಜ ದಡೇಸುಗೂರು ಹೇಳಿದರು.

ನಗರದ ಬಾಬಾ ರಾಮದೇವ್ ಭವನದಲ್ಲಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಾದಿಗ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನನ್ನನ್ನು ವೇದಿಕೆಯ ಕಾರ್ಯಕ್ರಮದಲ್ಲಿ ಕರೆಸಿ ನಿಮ್ಮ ಸಮಸ್ಯೆಗಳನ್ನು ಹೇಳಿ ಸುಮ್ಮನೆ ಕೂಡು ವುದಲ್ಲ, ಬೇರೆ ದಿನಗಳಲ್ಲಿಯೂ ಬಂದು ಬೇಟಿ ಯಾಗಿ. ನಾನು ಕೊಟ್ಟ ಮಾತಿನಂತೆ ನಡೆದಿರುವುದ ರಿಂದ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಹುಟ್ಟಿ ಬೆಳೆದರೂ ಕೂಡಾ ಕನಕಗಿರಿ ಕ್ಷೇತ್ರದಲ್ಲಿ ಶಾಸಕನಾಗಿದ್ದೆನೆ. ಸಮಾಜಕ್ಕೆ ಏನು ಸಹಕಾರ ಬೇಕು ಅದನ್ನು ಮಾಡಲು ಸಿದ್ಧನಿದ್ದೇನೆ ಎಂದರು.

ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ವಿಧ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಮಾಡಿರುವುದು ತುಂಬಾ ಶ್ಲಾಘನೀಯವಾದದ್ದು. ವಿಧ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ವಿದ್ಯಾಭ್ಯಾಸದ ಕಡೆಗೆ ಗಮನಕೊಡಿ, ಓದುವ ಸಂದರ್ಭದಲ್ಲಿ ಸಂಘ ಸಂಸ್ಥೆಗಳಲ್ಲಿ ಭಾಗವಹಿಸದೆ ಚೆನ್ನಾಗಿ ಓದಿ ಹೆತ್ತ ತಂದೆ ತಾಯಿಗೆ, ಗುರುಗಳಿಗೆ ಮತ್ತು ಸಮಾಜಕ್ಕೆ ಹಾಗೂ ತಾಲೂಕಿಗೆ ಒಳ್ಳೆಯ ಹೆಸರು ತರುವಂತ ಕೆಲಸ ಮಾಡಬೇಕು ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ 2012 ರಲ್ಲಿ ಸಿಂಧನೂರಿನಲ್ಲಿ ಪ್ರಥಮವಾಗಿ ಹುಟ್ಟುಹಾಕಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು ರಾಜ್ಯದಲ್ಲಿಯೇ ಇದೇ ಮೊದಲು. ಯಾವುದೇ ವಸ್ತುವನ್ನಾದರೂ ಕದ್ದುಕೊಂಡು ಹೋಗಬಹುದು ಆದರೆ ಜ್ಞಾನವನ್ನಲ್ಲ.ಡಾ.ಬಾಬಾ ಸಾಹೇಬ ಅಂಬೇಡ್ಕರ ರವರ ವಂಶಸ್ಥ ರಾದ ನಮಗೆ ಇರುವ ಅಸ್ತ್ರ ಜ್ಞಾನ. ಜ್ಞಾನದ ದಾಹ ವನ್ನು ನಿಗಿಸುವ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನ ಮಾಡಬೇಕು. ಅಂಬೇಡ್ಕರ್ ರವರು ಅವತ್ತಿನ ದಿನಗಳಲ್ಲಿ 14 ಪದವಿಯನ್ನು ಓದಿ ಜಗತ್ತಿನ ವಿಶ್ವ ಮೇಧಾವಿ ಎಂದು ಖ್ಯಾತಿ ಪಡೆದಿದ್ದಾರೆ. ಅಂಥವರ ಮಕ್ಕಳಾಗಿ ನಾವು ಯಾವುದರಲ್ಲಿ ಕಡಿಮೆ ಇಲ್ಲ ಎಂದು ಶೈಕ್ಷೆಣಿಕ ಆರ್ಥಿಕವಾಗಿ ಮುಂದೆ ಬರಬೇಕು ಎಂದು ನರಸಪ್ಪ ಭಂಡಾರಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ನಂತರ ಚಂದ್ರಪ್ಪ ಪಿಎಸ್ಐ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಸರಿಯಾದ ಸಮಯಕ್ಕೆ ಅವಶ್ಯಕ ಸಂಪನ್ಮೂಲಗಳನ್ನು ಒದಗಿಸಿದರೆ ಏನೂ ಬೇಕಾದರೂ ಸಾಧಿಸಲು ಸಾಧ್ಯ. ಮಾದಿಗ ನೌಕಕರ ಕ್ಷೇಮಾಭಿವೃದ್ಧಿ ಸಂಘದ ಜೊತೆಗೆ ಸಮಾಜ ಕೂಡ ಕೈಜೋಡಿಸಿ ಬಡ ವಿಧ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ವಿಧ್ಯಾಭ್ಯಾಸ ನೀಡುವ ಕೆಲಸ ಮಾಡಿದಾಗ ಮಾತ್ರ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ಸಾದ್ಯ ಎಂದರು.

ಶೇಖರಪ್ಪ ಗಿಣಿವಾರ,ಆರ್ ಅಂಬ್ರುಸ್ ಮಾತನಾಡಿದರು. ಅಧ್ಯಕ್ಷತೆಯನ್ನು ಲಿಂಗಪ್ಪ ಪಿ.ಡಿ.ಓ ಅಧ್ಯಕ್ಷರು ಮಾದಿಗ ನೌಕರರ ಕ್ಷೇಮಾ ಭಿವೃದ್ಧಿ ಸಂಘ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಶಿಕಾಂತ ಶಿವಪುರೆ ಉಪಕಾರ್ಯ ದರ್ಶಿಗಳು, ಜಿಲ್ಲಾ ಪಂಚಾಯತ, ರಾಯಚೂರು. ಗೌರವ ಉಪ ಸ್ಥಿತಿಯಲ್ಲಿ ದುರುಗಪ್ಪ ದಡೇಸೂಗೂರು, ಈಶ್ವರ ಹಲಗಿ ಉಪನ್ಯಾಸಕರು ಪ್ರಾಸ್ತಾವಿಕ ನುಡಿಗಳನ್ನು ಹಾಡಿದರು.ಸ್ವಾಗತ ಭಾಷಣ ಅಯ್ಯಪ್ಪ ಹರೇಟ ನೂರು ಉಪನ್ಯಾಸಕರು ನೆರವೇರಿಸಿದರು. ನಿರೂಪಣೆ ಡಾ.ಹುಸೇನಪ್ಪ ಅಮರಾಪೂರ ಉಪನ್ಯಾಸಕರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಮರಿಯಪ್ಪ ಜಾಲಿಹಾಳ ಮಾದಿಗ ಸಮಾಜ ಅಧ್ಯಕ್ಷರು,ಲಕ್ಷ್ಮಣಮೂಡಲಗಿರಿ ಕ್ಯಾಂಪ್‌ ಖಜಾಂಚಿ, ಬಸವರಾಜ ಹಣಗಿ ಪಿ.ಎಸ್.ಐ, ದುರಗಪ್ಪ ಹಸ್ಮಕಲ್, ಅಲ್ಲಂಪ್ರಭು ಪೂಜಾರಿ, ಮಹಾದೇವಪ್ಪ ದುಮತಿ, ರಾಮಣ್ಣ ಸಾಸಲಮರಿ, ಯಮನಪ್ಪ ಗಿರಿಜಾಲಿ, ಪರಸಪ್ಪ, ಯಲ್ಲಪ್ಪ ಗೋನ್ವಾರ ಸಮಾಜದ ನೌಕರರು, ಮುಖಂಡರು, ವಿಧ್ಯಾರ್ಥಿಗಳು, ಮಹಿಳೆಯರು ಇದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend