ಜಗಜೀವನ್ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರನ್ನು ಲೆಕ್ಕಿಸದೆ ಕಾಮಗಾರಿಯನ್ನು ನಡೆಸಿದ್ದಾರೆ…!!!

ಜಗಜೀವನ್ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರನ್ನು ಲೆಕ್ಕಿಸದೆ ಕಾಮಗಾರಿಯನ್ನು ನಡೆಸಿದ್ದಾರೆ.. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿರತಗುಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿರತಗುಂಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ಲೆಕ್ಕಿಸದೆ ಜಲಜೀವನ್ ವಿಶೇಷ ಯೋಜನೆ ಕಾರ್ಯ ನಡೆಸುತ್ತಿರುವುದು ಯಾವುದೇ ದಾಖಲೆ ನೀಡದೆ ಅಧಿಕಾರಿಗಳ ದರ್ಪ ತೋರಿಸುತ್ತಿರುವುದು ಸಾರ್ವಜನಿಕರು ಖಂಡಿಸಿ ಗ್ರಾಮ ಪಂಚಾಯಿತಿ ಪ್ರದೀಪ್ ಪ್ರತಿನಿಧಿಗಳನ್ನು ಖಂಡಿಸಿ ಎಲ್ಲಾರು ವಿರೋಧ ವ್ಯಕ್ತಪಡಿಸಿದರು ಅಧಿಕಾರಿಗಳ ದರ್ಪದಿಂದ ಸುಮಾರು 56 ದಿನಗಳಿಂದ ಇರುವ ಕುಡಿಯುವ ನೀರಿನ ಪೈಪ್ ಗಳನ್ನು ಅಗೆದು ಮುರಿದು ಸಾರ್ವಜನಿಕರ ರಸ್ತೆ ಅಡ್ಡಗಟ್ಟಿ ಜನಪ್ರತಿನಿಧಿಗಳನ್ನು ಲೆಕ್ಕಿಸದೆ ಕತ್ತೆಗೂ ಕುದುರೆಗೆ ಉಳಿಸುವಂತಹ ಕಾರ್ಯ ಕಾಮಗಾರಿಯಲ್ಲಿ ನಡೆಸುತ್ತಿರುವ ಕೊಟ್ರೇಶ್ ಎಂಬುವವರ ಅವಾಚ್ಯ ಶಬ್ದದಿಂದ ಮನನೊಂದ ಸದಸ್ಯರು ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸಣ್ಣಕ್ಕಿ ಲಕ್ಷ್ಮಣ್ ಇವರ ಗಮನಕ್ಕೆ ಬಿ ಎಂ. ಬೋರಯ್ಯ ಆದ ಸದಸ್ಯರು ತಿಳಿಸಿದ ತಕ್ಷಣ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ. ಕೆ. ಮುರಳಿ ರಾಜುರವರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿರುವ ಅಧಿಕಾರಿಗಳನ್ನು ಕರೆ ಮಾಡಿದರು.

ಯಾವುದೇ ರೀತಿಯ ಉತ್ತರ ನೀಡಿರುವುದಿಲ್ಲ ಆದ್ದರಿಂದ ಸಾರ್ವಜನಿಕರ ಕುಡಿಯುವ ನೀರಿಗಾಗಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರು ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಭೇಟಿ ನೀಡಿ ಶೀಘ್ರದಲ್ಲೇ ಕುಡಿಯುವ ನೀರಿಗಾಗಿ ಸದಸ್ಯರ ಜೊತೆಗೂಡಿ ಸರಿಪಡಿಸಿದರು ಇದನ್ನು ನೊಂದ ಚಿರತಗುಂಡು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಅಧಿಕಾರಿಗಳ ಜೊತೆ ಮನನೊಂದು ಸೂಚಿಸಿದ ತಕ್ಷಣ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಇದರ ನಿಲುವು ನೊಂದ ಸದಸ್ಯರು ಹಾಗೂ ಸಾರ್ವಜನಿಕರ ಪರವಾಗಿ ನಮ್ಮ ಒಕ್ಕೂಟದ ನಿಲವು ಸದಾ ಇರುತ್ತದೆ ಎಂದು ತಾಲೂಕು ಒಕ್ಕೂಟದ ಅಧ್ಯಕ್ಷರಾದ ಶ್ರೀ ಮುರುಳಿ ರಾಜುರವರು ತಿಳಿಸಿ ಜಲಜೀವನ್ ಮಿಷನ್ ಯೋಜನೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಊರಿನ ಎಲ್ಲಾ ಸಾರ್ವಜನಿಕರು ಸೇರಿ ವಿಚಾರಿಸಿ ಯೋಜನೆಯ ಮಾಹಿತಿ ತಿಳಿದುಕೊಂಡು ಮುಂದುವರಿಸಲು ಸದಸ್ಯರುಗಳಿಗೆ ಸೂಚಿಸಿ ಬಂದಿರುತ್ತಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ ಜಿ ಜಿ ಎಸ್ ಮಲ್ಲಯ್ಯ ಉಪಾಧ್ಯಕ್ಷರಾದ ಶ್ರೀಮತಿ ಲಲಿತಮ್ಮ ರಾಜಕುಮಾರ್ ಗ್ರಾಮ ಪಂಚಾಯತಿ ಸದಸ್ಯರುಗಳಾದ ಬಿ ಎಂ ಬೋರಯ್ಯ ಗುರಾಣಿ ಬೋರಯ್ಯ ಶ್ರೀಮತಿ ಕಮಲಮ್ಮ ಪಾಪಣ್ಣ ಸಿ ಬಿ ಬೊಮ್ಮಯ್ಯ ಕೆ ಓಬಣ್ಣ ಸೂರಮ್ಮ ಬೋರಯ್ಯ ಶ್ರೀಮತಿ ಜಯಮ್ಮ ಸಿದ್ದರಾಜು ಹಾಗೂ ಊರಿನ ಮುಖಂಡರುಗಳಾದ ಬಿ ಟಿ ಪಾಪಣ್ಣ ತಮ್ಮಯ್ಯ ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಬೇಕೆಂದು ಆಕ್ರೋಶ ಪಡಿಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend