ಕೂಡ್ಲಿಗಿ: ಹಿರೇಹೆಗ್ಡಾಳ್ ಗ್ರಾಮದಲ್ಲಿ ಸಂತೆ ಪ್ರಾರಂಭಕ್ಕೆ ಚಾಲನೆ ಪ್ರಾರಂಭ…!!!

ಕೂಡ್ಲಿಗಿ: ಹಿರೇಹೆಗ್ಡಾಳ್ ಗ್ರಾಮದಲ್ಲಿ ಸಂತೆ ಪ್ರಾರಂಭಕ್ಕೆ ಚಾಲನೆ ಪ್ರಾರಂಭ

ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದಲ್ಲಿ ಇಂದು ಸಂತೆ ಪ್ರಾರಂಭ ಮಾಡಿದರು. ಈ ಗ್ರಾಮದಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಮನೆಗಳು ಇದ್ದು ಈ ಗ್ರಾಮ ಪಂಚಾಯತಿಗೆ ಸೇರಿದ ಸುತ್ತಲಿನ ಹಳ್ಳಿಯ ಜನರು ಸಂತೆಗೆ ಹೋಗಲು ಸುಮಾರು 20 ಕಿಲೋ ಮೀಟರ್ ದೂರ ಹೋಗಬೇಕಾದ ಅನಿವಾರ್ಯತೆ ಇತ್ತು. ರೈತರು ಬೆಳೆದ ತರಕಾರಿ, ಹಣ್ಣುಗಳು ಮಾರಾಟ ಮಾಡಲು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಗ್ರಾಮದ ಮುಖಂಡರು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶ್ವಿನಿ ಪಕೀರಪ್ಪ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಸೇರಿ ಈ ಒಂದು ಸಂತೆಯನ್ನು ನಮ್ಮ ಊರಲ್ಲಿ ನಿರ್ಮಿಸಬೇಕೆಂದು ಚರ್ಚಿಸಿ ಸಂತೆಯನ್ನು ಇಂದು ಪ್ರಾರಂಭಿಸಲಾಯಿತು. ಈ ಸಂತೆಯಲ್ಲಿ ಪಾಲ್ಗೊಂಡ ಎಲ್ಲಾ ಸಮಾಜದ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶ್ವಿನಿ ಫಕೀರಪ್ಪ ಮಾತನಾಡಿದರು. ಹಾಗೂ ಎಸ್ ಎಸ್ ಕೊಟ್ರೇಶ್, ಎನ್ ಫಕೀರಪ್ಪ ಬತ್ತನಹಳ್ಳಿ ಬಸವರಾಜ್ ಎಚ್ ಪ್ರಭು ಕನ್ನಪ್ಪ ಎಚ್ ಪ್ರಭುದೇವ ಎಸ್ ಎಸ್ ರಾಜಣ್ಣ ಬಾರಿಕರ ಹನುಮಣ್ಣ ಎಚ್‌ಪಿ ಸುರೇಶ ಗ್ರಾಮ ಪಂಚಾಯಿತಿ ಸದಸ್ಯರಾದ ಸೋಮಣ್ಣ ಟಿ ಬಸವರಾಜ್ ಮುಂತಾದ ಎಲ್ಲಾ ಗ್ರಾಮದವರು ಪಾಲ್ಗೊಂಡು ಸಂತೆಯನ್ನ ಪ್ರಾರಂಭಿಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend