ಜುಮ್ಮೋಬನಹಳ್ಳಿ ಗ್ರಾಮದಲ್ಲಿ ನಮ್ಮ ನಡೆ ಸ್ವಚ್ಛತೆ ಕಡೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಮ್ಮ ನಡೆ ಸ್ವಚ್ಛತೆ ಕಡೆ ಅಭಿಯಾನದಲ್ಲಿ ಸರ್ಕಾರಿ ಶಾಲಾ ಸುತ್ತಮುತ್ತ ಹಾಗೂ ಅಂಗನವಾಡಿ ಸುತ್ತ ಮುತ್ತ ದೇವಸ್ಥಾನದ ಆಭರಣಗಳಲ್ಲಿ ಇನ್ನಿತರೆ ಜಾಗಗಳಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹಾಂತೇಶ ಯ್ಯ ರವರು ನಾವು ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಊರಿನ ಜನರಿಗೆ ಹಾಗೂ ಶಾಲೆಯ ಮಕ್ಕಳಿಗೆ ಆರೋಗ್ಯವಂತ ಆಗುವುದನ್ನು ತಡೆಗಟ್ಟಬಹುದು ಎಂದು ಮಾತನಾಡಿದರು ಇದೇ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಶ್ರೀ ಮಹಾಂತೇಶ ಯ್ಯ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ನೇತ್ರಮ್ಮ ಜಿ ಓಬಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚನ್ನಬಸಮ್ಮ ಬಸಣ್ಣ ಉಪಾಧ್ಯಕ್ಷರಾದ ತಿಪ್ಪಮ್ಮ ಗೊಂಚಿಗರ್ ನಾಗರಾಜ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಈ ಶರಣೆಶ್ ಹಾಗೂ ಗ್ರಾಮ ಪಂಚಾಯಿತಿ ಎಲ್ಲಾ ಸರ್ವ ಸದಸ್ಯರುಗಳು ಮಾಜಿ ಸದಸ್ಯರುಗಳು ಶಿಕ್ಷಕರು ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಊರಿನ ಮುಖಂಡರು ಯುವಕರು ಈ ಸ್ವಚ್ಛತೆಗೆ ಕೈಜೋಡಿಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
